ಕಾಂಗ್ರೆಸ್ ಮುಖಂಡರು ಅಧಿಕಾರಕ್ಕೆ ಬರುವ ಮುನ್ನ ಕರೆಂಟ್ ನಿಮಗೂ ಉಚಿತ, ನಮಗೂ ಉಚಿತ ಎಂದು ಹೇಳಿ ಜನರಿಗೆ ಗ್ಯಾರಂಟಿ ಕಾರ್ಡ್ ಕೂಡ ನೀಡಿದ್ದಾರೆ ಹಾಗಾಗಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸಚಿವರು ಪ್ರಧಾನಿಯವರು 15 ಲಕ್ಷ ಹಾಕಲಿಲ್ಲ ಎಂದು ಪದೇ ಪದೇ ಹೇಳುವುದು ಸರಿಯಲ್ಲ ಪ್ರಧಾನಿಯವರು ದಾಖಲೆ ನೀಡಿದ್ದರೆ ಬಿಡುಗಡೆ ಮಾಡಲಿ: ಹರಿಹರ ಶಾಸಕ ಬಿ.ಪಿ ಹರೀಶ್
ದಾವಣಗೆರೆ(ಆ.08): ಇತ್ತೀಚೆಗೆ ನಡೆದ ಗೃಹಜ್ಯೋತಿ ಯೋಜನೆಯ ಚಾಲನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ನಡೆದುಕೊಂಡ ರೀತಿ ಸರಿಯಲ್ಲ. ಪ್ರಧಾನಿಯವರು ಜನರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಹೇಳಿರುವ ದಾಖಲೆಯೇ ಇಲ್ಲ ಎಂದು ಹರಿಹರ ಶಾಸಕ ಬಿ.ಪಿ ಹರೀಶ್ ಹೇಳಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಅಧಿಕಾರಕ್ಕೆ ಬರುವ ಮುನ್ನ ಕರೆಂಟ್ ನಿಮಗೂ ಉಚಿತ, ನಮಗೂ ಉಚಿತ ಎಂದು ಹೇಳಿ ಜನರಿಗೆ ಗ್ಯಾರಂಟಿ ಕಾರ್ಡ್ ಕೂಡ ನೀಡಿದ್ದಾರೆ ಹಾಗಾಗಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸಚಿವರು ಪ್ರಧಾನಿಯವರು 15 ಲಕ್ಷ ಹಾಕಲಿಲ್ಲ ಎಂದು ಪದೇ ಪದೇ ಹೇಳುವುದು ಸರಿಯಲ್ಲ ಪ್ರಧಾನಿಯವರು ದಾಖಲೆ ನೀಡಿದ್ದರೆ ಬಿಡುಗಡೆ ಮಾಡಲಿ ಎಂದರು.
ಬಿಜೆಪಿ ತಡೆದ ಯೋಜನೆಗೆ ಮತ್ತೆ ಚಾಲನೆ ನೀಡುವೆ: ಸಚಿವ ಮಲ್ಲಿಕಾರ್ಜುನ
ಮಾಯಕೊಂಡ ಶಾಸಕ ಬಸವಂತಪ್ಪ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ಗೆ ಜೈಕಾರ ಹಾಕಿದರು ಕೂಡಲೇ ತಮ್ಮ ತಪ್ಪನ್ನು ಮನವರಿಕೆ ಮಾಡಿಕೊಂಡರು ಎಂದರು.
ಇಂದಿರಾ ಗಾಂಧಿ ಕಾಲದಿಂದಲೂ ಗರೀಬಿ ಹಠಾವೋ ಎನ್ನುವ ಕಾಂಗ್ರೆಸ್ ನವರಿಗೆ ದೇಶ ಬಡತನದಲ್ಲಿರುವುದೇ ಬೇಕು ಎನಿಸುತ್ತದೆ. ಕೋವಿಡ್ ಅವಧಿಯಲ್ಲಿ ಹಗರಣವಾಗಿದ್ದರೆ ತನಿಖೆ ಮಾಡಲಿ ಒಂದು ವೇಳೆ ಕಾಂಗ್ರೆಸ್ ನವರು ಸಿದ್ದವಿಲ್ಲದಿದ್ದರೆ ನಾವೇ ತನಿಖೆ ಮಾಡಿಸುತ್ತೇವೆ ಹರಿವೆ ಹಾವು ಬಿಡುವುದು ಬೇಡ ಎಂದರು.
ಭದ್ರಾ ನಾಲೆಗೆ ನೀರು ಹರಿಸಲು ಮನವಿ ಮಾಡಿದ ಶಾಸಕ
ರೈತರು ಭದ್ರಾ ನಾಲೆ ನೀರು ಹರಿಸುವಂತೆ ನಮ್ಮ ಬಳಿ ಒತ್ತಾಯಿಸುತ್ತಿದ್ದಾರೆ. ಭದ್ರಾ ನಾಲೆಗೆ ನೀರು ಬಿಡುವ ದಿನಾಂಕವನ್ನು ಕಾಡಾ ಸಭೆ ಕರೆದು ನೀರು ಬಿಡುವುದು ಸಂಪ್ರದಾಯದಂತೆ ನಡೆಯುತ್ತದೆ. ರೈತರು ಕಂಗಾಲಾಗಿದ್ದಾರೆ ನೀರಾವರಿ ಅಧಿಕಾರಿಗಳು ನೀರು ಬಿಡುವ ದಿನಾಂಕವನ್ನು ಘೋಷಿಸಬೇಕು.ಆ 10 ರೊಳಗೆ ತಿಳಿಸಬೇಕು. ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಐಎಎಸ್ ಅಧಿಕಾರಿ ವರ್ತನೆಗೆ ಖಂಡನೆ
ದಾವಣಗೆರೆಯಲ್ಲಿ ನಡೆದ ಗೃಹಜ್ಯೋತಿ ಯೋಜನೆ ಜಾರಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಒಬ್ಬ ಐಎಎಸ್ ಅಧಿಕಾರಿ ಕಾಂಗ್ರೆಸ್ ವಕ್ತಾರರಂತೆ ವರ್ತಿಸಿರುವುದು ಸರಿಯಲ್ಲ. ಅದಷ್ಟೇ ಅಲ್ಲದೇ ತುಂಬಿದ ಸಭೆಯಲ್ಲಿ ಮಲ್ಲಣ್ಣ ಹೇಳಿದಂತೆ ಕೇಳುತ್ತೇನೆ ಎಂದು ಹೇಳಿರುವುದು ಸರಿಯಲ್ಲ. ಕಾಂಗ್ರೆಸ್ ಗೆ ಮತ ಹಾಕಿದ್ದೀರಾ ನಿಮಗೆ ಶೂನ್ಯ ಬಿಲ್ ಬಂದಿದೆ ನೋಡಿ ಎಂದು ಹೇಳಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ ಒಬ್ಬ ಐಎಎಸ್ ಅಧಿಕಾರಿ ವರ್ತನೆಗೆ ಇದು ಶೋಭೆ ತರುವುದಿಲ್ಲ ಎಂದರು.
ಕಾಂಗ್ರೆಸ್ಸಿಂದ ದೇಶದ ಆರ್ಥಿಕತೆ ಸದೃಢ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ಆಡಳಿತದಲ್ಲಿದ್ದವರ ತಪ್ಪನ್ನು ಮಾಧ್ಯಮದವರು ತೋರಿಸಿಬೇಕು
ಐಎಎಸ್ ಅಧಿಕಾರಿ ಕಾಂಗ್ರೆಸ್ ಪರ ಮಾತನಾಡಿರುವುದನ್ನು ಯಾವ ಮಾಧ್ಯಮದವರು ಅವರನ್ನು ತೋರಿಸಲಿಲ್ಲ ಪ್ರಶ್ನಿಸಲಿಲ್ಲ. ಅಧಿಕಾರದಲ್ಲಿದ್ದವರ ತಪ್ಪುಗಳನ್ನು ಹೇಳದಿದ್ದಾಗ ನಮಗೆ ಯಾಕೆ ಮಾತನಾಡಬೇಕಪ್ಪಾ ಅನಿಸುತ್ತದೆ. ಮಾಧ್ಯಮದವರು ಸಹ ಪೂರ್ಣ ವಿಚಾರವನ್ನು ಜನರಿಗೆ ಅರ್ಥವಾಗುವಂತೆ ಹೇಳುವುದು ಮುಖ್ಯ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ - ಬಿಜೆಪಿ ಜಿಲ್ಲಾಧ್ಯಕ್ಷ
ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ ಗೃಹಜ್ಯೋತಿ ಯೋಜನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ ಹರೀಶ್ ಭಾಗವಹಿಸಿದ್ದರು ಈ ವೇಳೆ ಪ್ರಧಾನಿಯವರು ಅನ್ನಭಾಗ್ಯ ಯೋಜನೆಗೆ ಸ್ಪಂದಿಸಲಿಲ್ಲ ಎಂದು ಹೇಳಿರುವುದನ್ನು ಖಂಡಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ ಅವಾಚ್ಯವಾಗಿ ನಿಂದಿಸಿದ್ದಾರೆ. ಶಾಸಕರು ಎಂಬುದನ್ನು ನೋಡದೆ ರಾಜ್ಯ ಗೆದ್ದಿದ್ದಕ್ಕೆ ದೇಶವನ್ನೇ ಗೆದ್ದಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಲೋಕಸಭೆಯಲ್ಲಿ ಹೀನಾಯವಾಗಿ ಸೋತಿದ್ದೀರಿ ಎಂಬುದನ್ನು ಮರೆಯಬಾರದು ಎಂದರು. ಹಿಂದೆ ಬಿಜೆಪಿ ಸರ್ಕಾರವಿದ್ದಾಗ 40 ಪರ್ಸೆಂಟ್ ಎಂದಿದ್ದರು ಈಗ ಕಾಂಗ್ರೆಸ್ ಸರ್ಕಾರದಲ್ಲಿ ದರಪಟ್ಟಿಯಂತೆ ವರ್ಗಾವಣೆ ದಂಧೆ ನಡೆಯುತ್ತಿದೆ. ದಾವಣಗೆರೆ ಕೇವಲ ಸಿದ್ದರಾಮೋತ್ಸವ ಮಾತ್ರವಲ್ಲ ಒತ್ತುವರಿ, ಭೂಕಬಳಿಕೆ ಕೆಲಸವನ್ನು ಇಲ್ಲಿಂದಲೇ ಪ್ರಾರಂಭಿಸಿ ಎಂದು ಆಹ್ವಾನಿಸಿದರು.