ತೊಡೆ ತಟ್ಟಿ ಹೇಳ್ತೇನೆ ಅಪ್ಪ-ಮಗ ಅಖಾಡಕ್ಕೆ ಬರಲಿ: ಈಶ್ವರಪ್ಪಗೆ ಸವಾಲೊಡ್ಡಿದ ಆಯನೂರು ಮಂಜನಾಥ್

By Sathish Kumar KH  |  First Published Apr 3, 2023, 1:42 PM IST

ಈಶ್ವರಪ್ಪ ವಿರುದ್ಧ ತೊಡೆತಟ್ಟಿ ಅಖಾಡಕ್ಕೆ ಳಿದಿದ್ದೇನೆ, ಪುಕ್ಕಲರಂತೆ ಹಿಂದೆ ಸರಿಯದೇ ಅಪ್ಪ- ಮಗ ಚುನಾವಣಾ ಅಖಾಡಕ್ಕೆ ಬರಲಿ ಎಂದು ಆಯನೂರು ಮಂಜುನಾಥ್‌ ಸವಾಲು ಹಾಕಿದ್ದಾರೆ.


ಶಿವಮೊಗ್ಗ (ಏ.03):  ಶಿವಮೊಗ್ಗದಲ್ಲಿ ಕೇವಲ ಪ್ರಚೋದನೆ ಮಾಡಿ ಮಾತನಾಡುವುದೇ ಈಶ್ವರಪ್ಪ ಸಾಧನೆ. ಅವರ ಸವಾಲನ್ನು ನಾನು ಸ್ವೀಕರಿಸಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಲು ರೆಡಿಯಾಗಿದ್ದೇನೆ. ಈಗ ಅಖಾಡಕ್ಕೆ ತೊಡೆತಟ್ಟಿ ಇಳಿದಿದ್ದೇನೆ, ಪುಕ್ಕಲರಂತೆ ಹಿಂದೆ ಸರಿಯದೇ ಅಪ್ಪ- ಮಗ ಚುನಾವಣಾ ಅಖಾಡಕ್ಕೆ ಬರಲಿ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಸವಾಲು ಹಾಕಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಈಶ್ವರಪ್ಪ ನನಗೆ ಪತ್ರಿಕಾಗೋಷ್ಠಿಯಲ್ಲಿ ಏಕವಚನದಲ್ಲಿ ಅವನ್ಯಾರು ಎಂದು ಕರೆದಿದ್ದಾರೆ. ಅವನ್ಯಾವ ಲೆಕ್ಕ‌ ಎಂದು ಹೇಳಿದ್ದಾರೆ. ನನಗೆ ಏಕವಚನದಲ್ಲಿ ಮಾತನಾಡಿದ ಈಶ್ವರಪ್ಪ ವಿರುದ್ಧ ಖಚಿತವಾಗಿ ಈ ಬಾರಿ ಶಿವಮೊಗ್ಗದಲ್ಲಿ ನಿಲ್ಲುತೇನೆ. ಕಣಕ್ಕಿಳಿಯಲೇಬೇಕೆಂಬ ಇಚ್ಛೆ ಅನುಸಾರ ಕಣಕ್ಕಿಳಿಯುತ್ತಿದ್ದೇನೆ. ನನ್ನ ಆಸೆಗೆ ಪೂರಕವಾಗಿ ಬಿಜೆಪಿ ಟಿಕೆಟ್ ಲಕ್ಷಣ ಕಂಡು ಬಂದಿಲ್ಲ. ಬದಲಾಗಿ ಅವರವರ ಮಕ್ಕಳ ಹೆಸರು ಓಡಾಡುತ್ತಿದೆ. ನಾನು ಎಂ.ಎಲ್.ಸಿ. ಸ್ಥಾನಕ್ಕೆ ರಾಜಿನಾಮೆ ನೀಡಿ ಅಖಾಡಕ್ಕೆ ಬರುತ್ತೇನೆ. ತೊಡೆ ತಟ್ಟಿ ನಾನು ಬಂದಿದ್ದೇನೆ. ಅಪ್ಪ-ಮಗ ಬಂದು ನನ್ನನ್ನು ಎದುರಿಸಿ ಎಂದು ಈಶ್ವರಪ್ಪಗೆ ಸವಾಲು ಹಾಕಿದರು.

Latest Videos

undefined

ಆಯನೂರು ಮಂಜುನಾಥ್‌ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ; ಅವರನ್ನ ವರಿಷ್ಠರು ವಿಚಾರಿಸಿಕೊಳ್ತಾರೆ: ಈಶ್ವರಪ್ಪ

ಪುಕ್ಕಲನಂತೆ ಹಿಂದೆ ಸರಿಯಬೇಡಿ: ಈಶ್ವರಪ್ಪ ಆಡಿದ ಮಾತು ನನಗೆ ಇಷ್ಟವಾಗಿಲ್ಲ. ಈಶ್ವರಪ್ಪ ಅವರಿಗೆ ಯಾವಾಗಲೂ ಬಹುವಚನ ಪ್ರಯೋಗ ಮಾಡಿಯೇ ಗೊತ್ತಿಲ್ಲ. ಅವಂದೇನು ಲೆಕ್ಕ ಎಂದು ಹೇಳಿದ್ದಾರೆ. ನಾನು ಈಶ್ವರಪ್ಪನವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಅವರು ಸಮರ್ಥರಿದ್ದರೆ ನನ್ನನ್ನು ಎದುರಿಸಲಿ. ಅಪ್ಪ-ಮಗ ಚುನಾವಣಾ ಅಖಾಡಕ್ಕೆ ಬರಲಿ. ಬನ್ನಿ ನನ್ನನ್ನು ಎದುರಿಸಿ. ನಾನು ಅಖಾಡಕ್ಕೆ ಇಳಿದು ತೊಡೆ ತಟ್ಟಿದ್ದೇನೆ. ಪುಕ್ಕಲನಂತೆ ಹಿಂದೆ ಸರಿಯಬೇಡಿ. ಬನ್ನಿ ಅಖಾಡಕ್ಕೆ ಇಳಿದು, ನನ್ನನ್ನು ಎದುರಿಸಿ. ನಾನು ಎಂ.ಎಲ್.ಸಿ. ಸ್ಥಾನಕ್ಕೆ ರಾಜಿನಾಮೆ ನೀಡಿ ಅಖಾಡಕ್ಕೆ ಬರುತ್ತೇನೆ. ನೀವು ಬಂದು ನನ್ನನ್ನು ಎದುರಿಸಿ. ಅವರ ನೋಟ್ ಮಿಷನ್ ಮುಂದೆ ನಾನು ಚುನಾವಣೆ ನಿಲ್ಲಲು ರೆಡಿಯಾಗಿದ್ದೇನೆ ಎಂದು ಹೇಳಿದರು.

ಪ್ರಚೋದನಕಾರಿ ಭಾಷಣಕ್ಕಷ್ಟೇ ಸೀಮಿತ: ಕೇವಲ ಪ್ರಚೋದನೆ ಮಾಡಿ ಮಾತನಾಡುವುದೇ ಈಶ್ವರಪ್ಪ ಸಾಧನೆಯಾಗಿದೆ. ಶಿವಮೊಗ್ಗದಲ್ಲಿ ಒಂದೇ ಒಂದು ಯೋಜನೆಯನ್ನೂ ಈವರೆಗೂ ತಂದಿಲ್ಲ. ಶಿವಮೊಗ್ಗದಲ್ಲಿ ಏನಾದರೂ ಅಭಿವೃದ್ಧಿ ಆಗಿದ್ದರೆ ಅದು ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಮಾಡಿರುವ ಅಭಿವೃದ್ಧಿ ಆಗಿದೆ. ಈಶ್ವರಪ್ಪ ಒಂದೇ ಒಂದು ಅಭಿವೃದ್ಧಿ ಯೋಜನೆ ತೋರಿಸಲಿ. ಒಂದೇ ಒಂದು ಯೋಜನೆ ತಾರದ ಇವರು, ಕೇವಲ ಪ್ರಚೋದನೆ ಮಾಡಿಕೊಂಡು ಓಡಾಡುತ್ತಾರೆ. ಪ್ರಚೋದನಾ ಭಾಷಣ ಮಾಡುವುದಷ್ಟೇ ಇವರ ಬಂಡವಾಳವಾಗಿದೆ. ಕ್ಷೇತ್ರದ ಸಮಸ್ಯೆ ಬಗ್ಗೆ ಈವರೆಗೆ ಸದನದಲ್ಲಿ ಈವರೆಗೂ ಚರ್ಚೆ ಮಾಡಿಲ್ಲ. ಕ್ಷೇತ್ರದ ಜನರ ಬಗ್ಗೆ ಸದನದಲ್ಲಿ ಒಂದೇ ಒಂದು ಮಾತನಾಡಿಲ್ಲ ಎಂದು ಟೀಕೆ ಮಾಡಿದರು.

ಕುಮಾರಸ್ವಾಮಿ ಪಟ್ಟು, ರೇವಣ್ಣ ಸಿಟ್ಟು, ದೇವೇಗೌಡರ ಇಕ್ಕಟ್ಟು: ಗೌಡರ ಕುಟುಂಬ ತಿಕ್ಕಾಟ.!

ಶಿವಮೊಗ್ಗ ಬಿಟ್ಟರೆ ಬೇರೆಲ್ಲೂ ಗೆಲ್ಲೋಕಾಗಲ್ಲ: ಈಶ್ವರಪ್ಪನವರು ಎಷ್ಟು ಪ್ರಭಾವಿ ಎಂದರೆ ಶಿವಮೊಗ್ಗ ಬಿಟ್ಟರೆ ಬೇರೆ ಕಡೆ  ಸ್ಪರ್ಧೆ ಮಾಡಿ ಗೆಲ್ಲೋಕೆ ಆಗಲ್ಲ. ನೀವಾಗಲಿ ನಿಮ್ಮ ಮಗ ಆಗಲಿ ಸ್ಪರ್ಧೆಗೆ ಬನ್ನಿ ಅವನ್ಯಾವ ಲೆಕ್ಕ ಎಂಬ ಮಾತಿಗೆ ರಾಜಕೀಯ ಲೆಕ್ಕ ಕೊಡುತ್ತೇನೆ. ನಿಮ್ಮ ಹಳೆಯ ಗೋಡಾನ್ ನಲ್ಲಿ ಇರುವ ಕೌಂಟಿಂಗ್ ಮಿಷನ್ ಹೊರಗೆ ತೆಗೆದುಕೊಂಡು ಬನ್ನಿ. ನಿಮ್ಮ ವ್ಯಕ್ತಿತ್ವವನ್ನು ಶಿವಮೊಗ್ಗ ಜನತೆಗೆ ಪರಿಚಯ ಮಾಡಿಕೊಡಿ ನನ್ನ ವ್ಯಕ್ತಿತ್ವವನ್ನು ಜನತೆಗೆ ಪರಿಚಯ ಮಾಡಿಕೊಡುತ್ತೇನೆ. ನಿರ್ಲಜ್ಜದಿಂದ ಸಂಕೋಚ ಬಿಟ್ಟು ನಿಮ್ಮ ಮಗನಿಗೆ ಟಿಕೆಟ್ ಕೇಳುತ್ತಿದ್ದೀರಾ? ನಿಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳಿದ ರುದ್ರೇಗೌಡರಿಗೆ ಟಿಕೆಟ್ ಕೇಳಲಿಲ್ಲ. ಭಾನುಪ್ರಕಾಶ್, ಗಿರೀಶ್ ಪಟೇಲ್, ಚನ್ನಬಸಪ್ಪ, ದತ್ತಾತ್ರಿ, ಸಿದ್ದರಾಮಣ್ಣ  ಮೊದಲಾದವರಿಗೆ ಟಿಕೆಟ್ ಕೇಳಿಲ್ಲ. ನಾನಂತೂ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹರಿಹಾಯ್ದರು.

click me!