
ಭಾಲ್ಕಿ (ಡಿ.26) : ತಮ್ಮ ತಪ್ಪು ತಾವೇ ಒಪ್ಪಿಕೊಂಡಿರುವ ಶಾಸಕ ಈಶ್ವರ ಖಂಡ್ರೆಯವರು ತಕ್ಷಣವೇ ರಾಜಕೀಯ ಸನ್ಯಾಸ ಪಡೆಯಬೇಕು ಎಂದು ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಆಗ್ರಹಿಸಿದರು. ಮನೆ ಹಂಚಿಕೆಯಲ್ಲಿ 3000 ಮನೆಗಳ ಬಿಲ್ ತಮ್ಮಿಂದ ತಪ್ಪಾಗಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಾವೇ ತಪೊ್ಪಪ್ಪಿಕೊಂಡಿದ್ದೀರಿ. ಹೀಗಾಗಿ ಕೂಡಲೇ ರಾಜಕೀಯ ಸನ್ಯಾಸ ಪಡೆಯಬೇಕೆಂದು ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಆಗ್ರಹಿಸಿದರು.
ಪಟ್ಟಣದಲ್ಲಿ ಭಾನುವಾರ ಮಾಜಿ ಶಾಸಕ ಪ್ರಕಾಶ ಖಂಡ್ರೆ, ರೈಲ್ವೆ ಸಲಹಾ ಮಂಡಳಿ ಸದಸ್ಯ ಶಿವರಾಜ ಗಂದಗೆ ಅವರೊಂದಿಗೆ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನಿಂದ ಒಂದೇ ಒಂದು ತಪ್ಪಾದರೂ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ ಎಂದು ಪದೇ, ಪದೇ ಹೇಳುವ ತಾವು ಇಷ್ಟೊಂದು ತಪ್ಪು ಮಾಡಿದ್ದೀರಿ. ಕಾರಣ ತಾವು ತಕ್ಷಣವೇ ರಾಜಕೀಯ ಸನ್ಯಾಸ ಪಡೆಯಬೇಕು ಎಂದು ಒತ್ತಾಯಿಸಿದರು.
ಬೀದರ್: ಪಾಪನಾಶ ದೇಗುಲ ಅಭಿವೃದ್ಧಿಗೆ 5 ಕೋಟಿ, ಕೇಂದ್ರ ಸಚಿವ ಖೂಬಾ
ಮನೆ ಹಂಚಿಕೆಯಲ್ಲಿ ಶಾಸಕ ಈಶ್ವರ ಖಂಡ್ರೆ ತಪ್ಪೆಸಗಿರುವ ಬಗ್ಗೆ ಬೆಳೆಕಿಗೆ ಬಂದಿದ್ದು, ಹಿಂದಿನ ಜಿಲ್ಲಾಧಿಕಾರಿಗಳು ಅವರಿಗೆ ನೋಟಿಸ್ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ತಾವು ಮನೆ ಹಗರಣದಲ್ಲಿ ತಪ್ಪೇ ಮಾಡಿಲ್ಲ ಎಂದ ಮೇಲೆ ತಮ್ಮ ಮೇಲೆ ಬಂದಿರುವ ಆರೋಪ ಸರಿಪಡಿಸಲು, ಬೆಳಗಾವಿಯ ಅಧಿವೇಶನದಲ್ಲಿ ಇದರ ಬಗ್ಗೆ ಸಿಐಡಿ ತನಿಖೆಗೆ ಆಗ್ರಹಿಸಿರಿ ಎಂದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಭಾಲ್ಕಿಯ ಶಾಸಕರು ಭಾಲ್ಕಿಯ ಜನತೆಗೆ ಮರಳು ಮಾಡುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾ ಹೇಳಿದ್ದೇ ಸುಳ್ಳು ನೂರು ಸಲ ಹೇಳಲು ಹೊರಟಿದ್ದಾರೆ. ಮನೆ ಹಗರಣದ ದೂರು ಸಲ್ಲಿಸುವಲ್ಲಿ ನನ್ನ ಪಾತ್ರ ಎಳ್ಳಷ್ಟುಇಲ್ಲ. ಡಿ.ಕೆ.ಸಿದ್ರಾಮ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ಅವರು ಸಿರಿವಂತರಿಗೆ ಮನೆ ನೀಡಿರುವ ಬಗ್ಗೆ ದೂರು ನೀಡಿರುವುದು ಸತ್ಯವಾಗಿದೆ. ಆದರೆ, ಭಾಲ್ಕಿಯ ಶಾಸಕರು ಎಷ್ಟುಸುಳ್ಳು ಹೇಳುತ್ತಾರೆ ಎಂದರೆ ಖೂಬಾ ಮತ್ತು ಡಿ.ಕೆ.ಸಿದ್ರಾಮ ನೀಡಿರುವ ದೂರಿನಲ್ಲಿ ನನ್ನ ಹೆಸರೂ ಸೇರಿಸಿ ಭಾಲ್ಕಿಯ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಶಾಸಕನಿದ್ದ ಸಮಯದಲ್ಲಿ ಮಂಜೂರು ಮಾಡಿಸಿರುವ ಮಾಂಜರಾ ನದಿಯ ಬ್ರಿಜ್ ಕಂ ಬ್ಯಾರೇಜುಗಳ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಸುಮಾರು 12 ವರ್ಷಗಳಿಂದ ಈಶ್ವರ ಖಂಡ್ರೆಯವರು ಶಾಸಕರಾಗಿದ್ದರೂ, ನನ್ನ ಸಮಯದಲ್ಲಿ ಮಂಜೂರಾದ ಬ್ಯಾರೇಜುಗಳಲ್ಲಿ ಹನಿ ನೀರು ನಿಲ್ಲಿಸಲು ಇವರಿಂದ ಆಗುತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಭಾಲ್ಕಿಯ ಬ್ಯಾರೇಜುಗಳಲ್ಲಿ ಹನಿ ನೀರು ನಿಲ್ಲುತ್ತಿಲ್ಲ ಎಂದು ಈಶ್ವರ ಖಂಡ್ರೆಯವರೇ ಮಾತನಾಡಿದ್ದಾರೆ ಎಂದರು.
ಮೇಹಕರ್ ಏತ ನೀರಾವರಿ ಯೋಜನೆ: ಮೂರು ವರ್ಷಗಳ ಹೋರಾಟಕ್ಕೆ ಸಂದ ಜಯ, ಖಂಡ್ರೆ
ರೈಲ್ವೆ ಸಲಹಾ ಮಂಡಳಿ ಸದಸ್ಯ ಶಿವರಾಜ ಗಂದಗೆ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಶಾಸಕ ಈಶ್ವರ ಖಂಡ್ರೆ ಪ್ರತಿಯೊಂದು ಕಾಮಗಾರಿಗಳಲ್ಲಿಯೂ ಶೇ.30ರಷ್ಟುಕಮಿಷನ್ ಹೊಡೆಯುತ್ತಲಿದ್ದಾರೆ. ಬೆರೆಯವರು ಮಂಜೂರು ಮಾಡಿಸಿದ ಕಾಮಗಾರಿಗಳ ದುರುಸ್ತಿ ನೆಪದಲ್ಲಿ ಶೇ.30ರಷ್ಟುಕಮಿಷನ್ ಹೊಡೆಯುತ್ತಿರುವುದೇ ತಮ್ಮ ಸಾಧನೆ ಯಾಗಿದೆ ಎಂದು ನೇರವಾಗಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಧಾಕರ ಸೂರ್ಯವಂಶಿ ಕಾಕನಾಳ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.