ಆತ್ಮಸಾಕ್ಷಿ‌ ಅನ್ನೋದಕ್ಕಿಂತ ನೈತಿಕತೆ ಸಹ ದೊಡ್ಡದು, ಸಿದ್ದು ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸೋಮಣ್ಣ

By Girish Goudar  |  First Published Oct 2, 2024, 4:20 PM IST

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ಶೀಘ್ರ ಬಿಡುಗಡೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿದ್ದೇವೆ ಎಂದು ತಿಳಿಸಿದ ಕೇಂದ್ರ ಸಚಿವ‌ ವಿ.ಸೋಮಣ್ಣ‌ 


ಚಿತ್ರದುರ್ಗ(ಅ.02):  ಒಂದು ತಪ್ಪು‌ ಮಾಡಲು ಹೋಗಿ ಹತ್ತಾರು ‌ತಪ್ಪು ಮಾಡುತ್ತಿದ್ದಾರೆ. ತಮ್ಮ ಕಾಲ ಮೇಲೆ ತಾವೇ‌ ಕಲ್ಲು ಹಾಕಿಕೊಂಡು ಗಾಯ ಮಾಡಿಕೊಳ್ಳುತ್ತಿದ್ದಾರೆ. ಆತ್ಮಸಾಕ್ಷಿ‌ ಅನ್ನೋದಕ್ಕಿಂತ ನೈತಿಕತೆ ಸಹ ದೊಡ್ಡದು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯನ್ನ ಎದುರಿಸಲಿ. ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಸಿಎಂ ಆಗಲಿ ನಮ್ಮ ಅಭ್ಯಂತರ ಇಲ್ಲ. ಸಿದ್ದರಾಮಯ್ಯ ಎಲ್ಲರಂತಲ್ಲ ಎಂಬ ಮಾತಿನಂತೆ ಇರಲಿ ಎಂದು ಹೇಳುವ ಮೂಲಕ ಆತ್ಮಸಾಕ್ಷಿಗೆ ಅನುಗುಣವಾಗಿ‌ ನಡೆಯುವೆ ಎಂದ‌ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ‌ ವಿ.ಸೋಮಣ್ಣ‌ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ಶೀಘ್ರ ಬಿಡುಗಡೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Latest Videos

undefined

ಸಿಎಂಗೆ ಸಿಗ್ತಾ ಇದ್ಯಾ ಅಪಶಕುನದ ಮುನ್ಸೂಚನೆ, ಕಿತ್ತೂರು ಉತ್ಸವಕ್ಕೆ ಚಾಲನೆ ನೀಡುವಾಗ ಸಿದ್ದರಾಮಯ್ಯ ಬಟ್ಟೆಗೆ ತಾಕಿದ ಬೆಂಕಿ!

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗದ ಬಿಜೆಪಿ ಸಂಸದ ಗೋವಿಂದ‌ ಕಾರಜೋಳ, ನಿಮ್ಮದಲ್ಲದ ಸೈಟ್ ಗೆ ಪರಿಹಾರ‌ ಕೇಳೋದು ಆತ್ಮಸಾಕ್ಷಿಯಾ?. ಬೇನಾಮಿ‌ ಆಸ್ತಿ‌ ಪಡೆದುಕೊಳ್ಳುವುದು ಆತ್ಮಸಾಕ್ಷಿಯಾ?. ಕೋರ್ಟ್ ಆದೇಶ ಆದ ದಿನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಸಿಎಂ ಆಗಲಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ. 

click me!