ಬಿಜೆಪಿ ಮೊದಲು ಕಾನೂನು ಸುವ್ಯವಸ್ಥೆಯ ಡೆಫಿನೆಷನ್ ಹೇಳಲಿ: ಗೃಹಸಚಿವ ಪರಮೇಶ್ವರ್

By Kannadaprabha News  |  First Published Jun 7, 2024, 4:49 AM IST

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಮೊದಲು ಕಾನೂನು ಸುವ್ಯವಸ್ಥೆ ಎಂದರೇನು ಎಂದು ವ್ಯಾಖ್ಯಾನ ಮಾಡಲಿ. ಸುಮ್ಮನೆ ಹಾರಿಕೆಯ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ಗೃಹಸಚಿವ ಡಾ.ಎಂ.ಪರಮೇಶ್ವರ್ ಹೇಳಿದ್ದಾರೆ.
 


ಉಡುಪಿ (ಜೂ.07): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಮೊದಲು ಕಾನೂನು ಸುವ್ಯವಸ್ಥೆ ಎಂದರೇನು ಎಂದು ವ್ಯಾಖ್ಯಾನ ಮಾಡಲಿ. ಸುಮ್ಮನೆ ಹಾರಿಕೆಯ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ಗೃಹಸಚಿವ ಡಾ.ಎಂ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಪರಾಧ ಪ್ರಕರಣಗಳು ನಡೆದೇ ಇಲ್ವಾ? ಸಮಯ ಬಂದಾಗ ಎಲ್ಲಾ ಅಂಕಿ-ಸಂಖ್ಯೆ ಬಿಡುಗಡೆ ಮಾಡುತ್ತೇನೆ. ಎರಡೂ ಅವಧಿಯನ್ನು ಹೋಲಿಸಿ ನೋಡೋಣ ಎಂದವರು ಖಾರವಾಗಿ ಪ್ರತಿಕ್ರಿಯಿಸಿದರು.

ಈಗ ಕೊಲೆಗಳು ಆಗಬಾರದಿತ್ತು, ಆಗಿದೆ. ಯಾಕಾಗಿದೆ ಅನ್ನುವುದನ್ನು ಎಲ್ಲರೂ ಗಮನಿಸಿದ್ದಾರೆ. ಬಿಜೆಪಿ ಅವಧಿಯಲ್ಲಿಯೂ ಕೊಲೆಗಳಾಗಿದ್ದವಲ್ಲ? ಅವರ ಕಾಲದಲ್ಲಾದಂತೆ ಈಗ ರಾಜಕೀಯ ಉದ್ದೇಶಕ್ಕಾಗಿ ಯಾವುದೇ ಕೊಲೆ ಆಗಿಲ್ಲ, ಎಲ್ಲಾದರೂ ಕೋಮು ಗಲಭೆ ಆಗಿದೆಯಾ? ಗಣೇಶ ಹಬ್ಬ, ರಂಜಾನ್ ಹಬ್ಬಗಳಲ್ಲಿ ಸಾಮಾನ್ಯವಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದವು. ಆದರೆ ಈಗ ಎಲ್ಲಾ ಹಬ್ಬಗಳು ಸುಖಕರವಾಗಿ ಮುಗಿದಿದೆ ಎಂದರು.

Latest Videos

undefined

ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್

ಕಾಂಗ್ರೆಸಿಗೆ ಹಿನ್ನಡೆಯಾಗಿಲ್ಲ: ಲೋಕಸಭಾ ಚುನಾವಣೆಯಲ್ಲಿ ನಮಗೆ ಯಾವ ಹಿನ್ನಡೆಯೂ ಆಗಿಲ್ಲ. ನಾವು ಒಂದು ಇದ್ದ ಸ್ಥಾನವನ್ನು 9ಕ್ಕೇರಿಸಿದ್ದೇವೆ. ‍‍ವೋಟ್‌ ಶೇರ್ ಕೂಡ ಹೆಚ್ಚಾಗಿದೆ. ಆದರೆ 240 ಸೀಟು ಗೆದ್ದ ಬಿಜೆಪಿಗೆ ಹಿನ್ನಡೆ ಆಗಿಲ್ವಾ? ಎನ್‌ಡಿಎಗೆ 400 ಸ್ಥಾನ ಬರುತ್ತದೆ ಎಂದು ಅವರು ನಿರೀಕ್ಷಿಸಿದ್ದರು, ಜನ ಎನ್‌ಡಿಎಯನ್ನು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟ ಎಂದು ಪರಮೇಶ್ವರ್‌ ಹೇಳಿದರು.

ರಾಜ್ಯದ ಸಚಿವ ಸಂಪುಟ ವಿಸ್ತರಣೆ ಬಗ್ಗೆ, ಉಪಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಹೆಸರು ಪ್ರಸ್ತಾಪ ಆಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ, ರಾಜಕೀಯದ ತೀರ್ಮಾನಗಳನ್ನು ಅಧ್ಯಕ್ಷರು ಕೈಗೊಳ್ಳುತ್ತಾರೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಲಿಂಗಾಯತ ಧರ್ಮ ಅರ್ಥೈಸಿಕೊಳ್ಳುವ ಅಗತ್ಯವಿದೆ: ಸಚಿವ ಸತೀಶ ಜಾರಕಿಹೊಳಿ

ಗೂಳಿಹಟ್ಟಿ ದೂರು ಕೊಟ್ಟರೆ ತನಿಖೆ: ಉಡುಪಿ- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೋವಿ ನಿಗಮದಲ್ಲಿ 100 ಕೋಟಿ ರು. ಹಗರಣ ನಡೆದಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ಈ ಬಗ್ಗೆ ಯಾರೂ ನಮಗೆ ದೂರು ಕೊಟ್ಟಿಲ್ಲ, ಆರೋಪ ಮಾಡುತ್ತಿರುವ ಗೂಳಿಹಟ್ಟಿ ಶೇಖರ್ ಅವರೂ ನಮಗೆ ದೂರು ಕೊಟ್ಟರೂ ಸಾಕು. ನಾವು ತನಿಖೆ ಮಾಡುತ್ತೇವೆ ಎಂದು ಗೃಹಸಚಿವ ಪರಮೇಶ್ವರ್ ಅವರು ಹೇಳಿದರು.

click me!