ಯತ್ನಾಳ್, ಸೋಮಣ್ಣ ಬ್ಲಾಕ್ ಮೇಲ್ ರಾಜಕಾರಣ ಬಿಡಬೇಕು. ಬ್ಲಾಕ್ ಮೇಲ್ ರಾಜಕಾರಣ ಯಾವುತ್ತೂ ಮಾಡಬಾರದು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಜನರ ಮುಂದೆ ವಿಲನ್ ಮಾಡಲು ಹೊರಟಿದ್ದಾರೆ. ರಾಜಕೀಯವಾಗಿ ಅಂತ್ಯವಾಗುವುದಕ್ಕೆ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿರುವ ಯತ್ನಾಳ್, ಸೋಮಣ್ಣ ಏನು ಮಾಡಿದ್ದಾರೆಂದು ನಾವೂ ಹೇಳುತ್ತೇವೆ. ನಾವೇನೂ ಯಾರಿಗೂ ಸೊಪ್ಪು ಹಾಕಬೇಕಿಲ್ಲ. ಯಾರಿಗೂ ಹೆದರಬೇಕಿಲ್ಲ: ರೇಣುಕಾಚಾರ್ಯ
ದಾವಣಗೆರೆ(ಡಿ.15): ಬಸವನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣನ ಪಾಪದ ಕೊಡ ತುಂಬಿದ್ದು, ಅಂತ್ಯವಾಗುವುದಕ್ಕೋಸ್ಕರ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್, ಸೋಮಣ್ಣ ಬ್ಲಾಕ್ ಮೇಲ್ ರಾಜಕಾರಣ ಬಿಡಬೇಕು. ಬ್ಲಾಕ್ ಮೇಲ್ ರಾಜಕಾರಣ ಯಾವುತ್ತೂ ಮಾಡಬಾರದು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಜನರ ಮುಂದೆ ವಿಲನ್ ಮಾಡಲು ಹೊರಟಿದ್ದಾರೆ. ರಾಜಕೀಯವಾಗಿ ಅಂತ್ಯವಾಗುವುದಕ್ಕೆ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿರುವ ಯತ್ನಾಳ್, ಸೋಮಣ್ಣ ಏನು ಮಾಡಿದ್ದಾರೆಂದು ನಾವೂ ಹೇಳುತ್ತೇವೆ. ನಾವೇನೂ ಯಾರಿಗೂ ಸೊಪ್ಪು ಹಾಕಬೇಕಿಲ್ಲ. ಯಾರಿಗೂ ಹೆದರಬೇಕಿಲ್ಲ ಎಂದು ಹೇಳಿದರು.
undefined
ಯತ್ನಾಳ್ ಬೀದಿಯಲ್ಲಿ ಮಾತಾಡಿ ಉತ್ತರ ಕುಮಾರ ಆಗೋದು ಬೇಡ: ಈಶ್ವರಪ್ಪ
ಯತ್ನಾಳ್, ಸೋಮಣ್ಣ ಮೊದಲು ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡುವುದು ಬಿಡಬೇಕು. ಎಲ್ಲರೂ ಒಂದಾಗಿ ಬಿಜೆಪಿಯಲ್ಲಿ ಮುನ್ನಡೆಯಬೇಕು. ಏನಾದರೂ ಸಮಸ್ಯೆ ಇದ್ದರೆ, ಪಕ್ಷದ ನಾಲ್ಕು ಗೋಡೆ ಮಧ್ಯೆ ಕುಳಿತು ಮಾತಾಡಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿದ್ದರೆ ಸಹಿಸಿಕೊಂಡಿರಲು ಸಾಧ್ಯವೂ ಇಲ್ಲ ಎಂದು ಹೇಳಿದರು.
ಇದೇ ಬಸವನಗೌಡ ಪಾಟೀಲ್ ಯತ್ನಾಳ್ ರನ್ನು ಕರೆ ತಂದು, ಕೇಂದ್ರ ಮಂತ್ರಿ ಮಾಡಿದ್ದು ತಪ್ಪಾ? ಸೋಮಣ್ಣ, ಯತ್ನಾಳ್‌ಗೆ ಮಾತನಾಡುವ, ಟೀಕಿಸುವ ಯಾವ ನೈತಿಕ ಹಕ್ಕು ಇದೆ? ಸೋಮಣ್ಣ ಸುಳ್ಳನ್ನು ಬಹಳ ಚೆನ್ನಾಗಿ ವೈಭವೀಕರಿಸುವ ಚಾಕಚಕ್ಯತೆ ಹೊಂದಿರುವ ವ್ಯಕ್ತಿ. ಕಾಂಗ್ರೆಸ್ಸಿನಿಂದ ಬಂದ ನಿಮಗೆ ಟೀಕಿಸುವ ಯಾವ ಹಕ್ಕು ಇದೆ ಎಂದು ಪ್ರಶ್ನಿಸಿದರು.
ಬಿಜೆಪಿ ಅನ್ಯಾಯ ಮಾಡಿದೆಯೆಂದು ಉತ್ತರ ಕರ್ನಾಟಕ ಯಾವುದೇ ಜನ ಪ್ರತಿನಿಧಿಗಳು ಕೇಳಿದ್ದಾರಾ? ಅಭಿವೃದ್ಧಿ ಬಗ್ಗೆ ಹೋರಾಟ ಮಾಡಿ. ಹತಾಶೆಯಿಂದ ದಿನಕ್ಕೊಂದು ಹೇಳಿಕೆ ನೀಡುವುದು ಇನ್ನಾದರೂ ಬಿಟ್ಟು ಬಿಡಿ. ಸ್ವಪಕ್ಷದವರ ವಿರುದ್ಧವೇ ಹೇಳಿಕೆ ನೀಡುವುದಕ್ಕೆ ನಾಚಿಕೆಯಾಗಬೇಕು. ವಿಜಯೇಂದ್ರಗೆ ಸೋಲಿಸಲು ಯಾರೆಲ್ಲಾ ಪ್ರಯತ್ನ ಮಾಡಿದ್ದಾರೆಂಬುದು ನಮಗೂ ಗೊತ್ತಿದೆ. ಗೆದ್ದರೆ ವಿಜಯೇಂದ್ರ ನಾಯಕನಾಗುತ್ತಾರೆಂದು ಸೋಲಿಗೆ ಪ್ರಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ನಾಯಕ ಯಡಿಯೂರಪ್ಪ ಯಾವತ್ತಿಗೂ ಕೀಳುಮಟ್ಟದ ರಾಜಕಾರಣ ಮಾಡಲಿಲ್ಲ. ಯತ್ನಾಳರದ್ದು ಯಾವ ಸಮಾಜಕ್ಕೂ ಕೊಡುಗೆ ಇಲ್ಲ. ಪದೇಪದೇ ಬಸವನಗೌಡ ಪಾಟೀಲ ಯತ್ನಾಳ್, ವಿ.ಸೋಮಣ್ಣ ಮಾತನಾಡುವುದರಿಂದ ನಮ್ಮ ನಾಯಕರಾದ ಯಡಿಯೂರಪ್ಪನವರ ತೂಕ, ವ್ಯಕ್ತಿತ್ವವೇನೂ ಕಡಿಮೆಯಾಗುವುದೂ ಇಲ್ಲ ಎಂದು ರೇಣುಕಾಚಾರ್ಯ ತಿರುಗೇಟು ನೀಡಿದರು. ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ ಜಾಧವ್, ರಾಜು ವೀರಣ್ಣ, ಎಸ್.ಜಿ.ಬಸವರಾಜ ಅಣಜಿ ಇತರರಿದ್ದರು.
ಯತ್ನಾಳ ಸೆರೆಮನೆ ವಾಸವಾಗಿದ್ದರಾ?
ಸೋಮಣ್ಣಗೆ ಹಿಂದೆ 2 ಬಾರಿ ಮಂತ್ರಿ ಮಾಡಿದ್ದಾಗ ನಾವೆಲ್ಲರೂ ಸುಮ್ಮನಿದ್ದೆವಲ್ಲ ಮರೆತು ಬಿಟ್ಟಿದ್ದೀರಾ? ಯಡಿಯೂರಪ್ಪ ಜೈಲುವಾಸ ಅನುಭವಿಸಿ, ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ. ಯತ್ನಾಳರೆ ಪಕ್ಷಕ್ಕಾಗಿ ನೀವು ಎಲ್ಲಿ, ಯಾವಾಗ ಸೆರೆಮನೆ ವಾಸ ಅನುಭವಿಸಿದ್ದಿರಿ? ನೀವು ಉತ್ತರ ಕರ್ನಾಟಕದ ಬಗ್ಗೆ ಬೆಳಕು ಚೆಲ್ಲುವ ಯಾವ ಕೆಲಸ ಮಾಡಿದ್ದೀರಿ ಎಂದು ದಾವಣಗೆರೆ ಬಸವನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣನ ಪಾಪದ ಕೊಡ ತುಂಬಿದ್ದು, ಅಂತ್ಯವಾಗುವುದಕ್ಕೋಸ್ಕರ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್, ಸೋಮಣ್ಣ ಬ್ಲಾಕ್ ಮೇಲ್ ರಾಜಕಾರಣ ಬಿಡಬೇಕು. ಬ್ಲಾಕ್ ಮೇಲ್ ರಾಜಕಾರಣ ಯಾವುತ್ತೂ ಮಾಡಬಾರದು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಜನರ ಮುಂದೆ ವಿಲನ್ ಮಾಡಲು ಹೊರಟಿದ್ದಾರೆ. ರಾಜಕೀಯವಾಗಿ ಅಂತ್ಯವಾಗುವುದಕ್ಕೆ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿರುವ ಯತ್ನಾಳ್, ಸೋಮಣ್ಣ ಏನು ಮಾಡಿದ್ದಾರೆಂದು ನಾವೂ ಹೇಳುತ್ತೇವೆ. ನಾವೇನೂ ಯಾರಿಗೂ ಸೊಪ್ಪು ಹಾಕಬೇಕಿಲ್ಲ. ಯಾರಿಗೂ ಹೆದರಬೇಕಿಲ್ಲ ಎಂದು ಹೇಳಿದರು.
ಯತ್ನಾಳ್, ಸೋಮಣ್ಣ ಮೊದಲು ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡುವುದು ಬಿಡಬೇಕು. ಎಲ್ಲರೂ ಒಂದಾಗಿ ಬಿಜೆಪಿಯಲ್ಲಿ ಮುನ್ನಡೆಯಬೇಕು. ಏನಾದರೂ ಸಮಸ್ಯೆ ಇದ್ದರೆ, ಪಕ್ಷದ ನಾಲ್ಕು ಗೋಡೆ ಮಧ್ಯೆ ಕುಳಿತು ಮಾತಾಡಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿದ್ದರೆ ಸಹಿಸಿಕೊಂಡಿರಲು ಸಾಧ್ಯವೂ ಇಲ್ಲ ಎಂದು ಹೇಳಿದರು.
ಇದೇ ಬಸವನಗೌಡ ಪಾಟೀಲ್ ಯತ್ನಾಳ್ ರನ್ನು ಕರೆ ತಂದು, ಕೇಂದ್ರ ಮಂತ್ರಿ ಮಾಡಿದ್ದು ತಪ್ಪಾ? ಸೋಮಣ್ಣ, ಯತ್ನಾಳ್‌ಗೆ ಮಾತನಾಡುವ, ಟೀಕಿಸುವ ಯಾವ ನೈತಿಕ ಹಕ್ಕು ಇದೆ? ಸೋಮಣ್ಣ ಸುಳ್ಳನ್ನು ಬಹಳ ಚೆನ್ನಾಗಿ ವೈಭವೀಕರಿಸುವ ಚಾಕಚಕ್ಯತೆ ಹೊಂದಿರುವ ವ್ಯಕ್ತಿ. ಕಾಂಗ್ರೆಸ್ಸಿನಿಂದ ಬಂದ ನಿಮಗೆ ಟೀಕಿಸುವ ಯಾವ ಹಕ್ಕು ಇದೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲೂ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಬೇಕು: ಶಾಸಕ ಯತ್ನಾಳ