ಶಾಸಕ ಯತ್ನಾಳ್ ಅವರು ಅನುಭವಿ ರಾಜಕಾರಣಿ. ಬಾಯಿ ಚಪಲಕ್ಕೆ ಹೀಗೆ ಏನೆಲ್ಲ ಹೇಳಬಾರದು. ಕೇಂದ್ರ ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಶಾಸಕರಾಗಿ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ನೀವು ಪಕ್ಷದ ಅಧ್ಯಕ್ಷರಾಗುವುದು ಬಿಡುವುದು ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಬಿಟ್ಟವಿಷಯ. ಆದರೆ, ನಮ್ಮ ಪಕ್ಷದ ಬಗ್ಗೆ ಏನೇನೋ ಹೇಳಿಕೆ ಕೊಡುವ ಕೆಲಸ ಮಾಡಬೇಡಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ
ಲೋಕಾಪುರ(ಆ.18): ಶಾಸಕ ಯತ್ನಾಳ್ ಅವರು ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎನ್ನುತ್ತಿದ್ದಾರೆ. ಒಂದು ವೇಳೇ ಸರ್ಕಾರ ಬಿದ್ದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ. ಬೀಳದಿದ್ದರೆ ಯತ್ನಾಳ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸವಾಲು ಹಾಕಿದ್ದಾರೆ.
ಪಟ್ಟಣದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು ಅನುಭವಿ ರಾಜಕಾರಣಿ. ಬಾಯಿ ಚಪಲಕ್ಕೆ ಹೀಗೆ ಏನೆಲ್ಲ ಹೇಳಬಾರದು. ಕೇಂದ್ರ ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಶಾಸಕರಾಗಿ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ನೀವು ಪಕ್ಷದ ಅಧ್ಯಕ್ಷರಾಗುವುದು ಬಿಡುವುದು ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಬಿಟ್ಟವಿಷಯ. ಆದರೆ, ನಮ್ಮ ಪಕ್ಷದ ಬಗ್ಗೆ ಏನೇನೋ ಹೇಳಿಕೆ ಕೊಡುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಬಿಜೆಪಿ ಸರ್ಕಾರ ಬೀಳಲು ನೀವು ಮಾಡಿದ ತಪ್ಪುಗಳೇ ಕಾರಣ. ಭ್ರಷ್ಟಾಚಾರ, ನಿಮ್ಮ ಒಳ ಜಗಳಗಳೇ ಕಾರಣ. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲೂ ತಡವರಿಸುತ್ತಿದ್ದೀರಿ. ಅಷ್ಟರ ಮಟ್ಟಿಗೂ ತಮ್ಮಲ್ಲಿ ಶಕ್ತಿಯಿಲ್ಲ. ಹೀಗಿರುವಾಗ ಸರ್ಕಾರದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ತಮ್ಮ ಘನತೆಗೆ ತಕ್ಕದ್ದಲ್ಲ ಎಂದು ಹೇಳಿದರು.
undefined
ಬಿಜೆಪಿಯೂ ಪಡೆಯುತ್ತಿದೆ ಕೈ ಗ್ಯಾರಂಟಿ ಲಾಭ: ವೀಣಾ ಕಾಶಪ್ಪನವರ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಮೊದಲು ಕೊಟ್ಟಮಾತಿನಂತೆ ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಿದೆ. ಯಾವುದೇ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ. ನಾವು ನುಡಿದಂತೆ ನಡೆಯುತ್ತಿದ್ದೇವೆ. ಒಂದೊಂದೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸ್ವಲ್ಪ ಕಾಲಾವಕಾಶ ಬೇಕಷ್ಟೇ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಆಶಯಗಳಿಗೆ ತಣ್ಣೀರು ಎರಚುವುದಿಲ್ಲ. ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆ ಜಾರಿಯಿಂದ ಕಂಗಾಲಾಗಿದ್ದಾರೆ. ಸರ್ಕಾರದ ತಪ್ಪುಗಳನ್ನು ಕಂಡು ಹಿಡಿದು ತಿದ್ದುವ ಕೆಲಸ ಮಾಡಿ. ಅದನ್ನು ಬಿಟ್ಟು ಸರ್ಕಾರವನ್ನು ಬೀಳಿಸುವ ಕನಸು ಕಾಣುತ್ತಿದ್ದೀರಿ. ಆದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆದ್ದು ವಿಜಯಪತಾಕಿ ಹಾರಿಸುವ ಮೂಲಕ ಉತ್ತರ ಕೊಡುತ್ತೇವೆ ಎಂದು ಹೇಳಿದರು.