ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ; ಇನ್ನೊಂದೆಡೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಮಾಜಿ ಶಾಸಕ ರಾಜಾ ರಾಯಪ್ಪ!

Published : Jan 09, 2023, 01:06 PM ISTUpdated : Jan 09, 2023, 01:07 PM IST
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ; ಇನ್ನೊಂದೆಡೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಮಾಜಿ ಶಾಸಕ ರಾಜಾ ರಾಯಪ್ಪ!

ಸಾರಾಂಶ

ತಾಲೂಕಿನ ಪ್ರತಿ ಗ್ರಾಮದ ಸಮಸ್ಯೆಗಳ ಕುರಿತು ‘ಮತದಾರರೊಂದಿಗೆ ಮನೆ ಮಗನ ಮಾತುಕತೆ’ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಜ.9 ರಿಂದ 11 ರವರೆಗೆ ನಡೆಯಲಿದೆ ಎಂದು ಕೆಪಿಸಿಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ತಿಳಿಸಿದರು.

ಸಿಂಧನೂರು (ಜ.9) : ತಾಲೂಕಿನ ಅಲಬನೂರು ಗ್ರಾಮದ ಅನೇಕರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಸಮಕ್ಷಮದಲ್ಲಿ ಭಾನುವಾರ ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಮುಖಂಡರಾದ ಚಿದಾನಂದಸ್ವಾಮಿ, ಹನುಮಂತ ಮ್ಯಾಗೇರ್‌, ಹುಲಗಪ್ಪ ಭಜಂತ್ರಿ, ಸುರೇಶ, ಶರಣಪ್ಪ, ಮಲ್ಲೇಶ, ನಾಗನಗೌಡ, ಕ್ಯಾಡರ್‌ ನಾಗಪ್ಪ, ಫಕೀರಪ್ಪ, ಚನ್ನಬಸವ, ಶರಣಪ್ಪ ಗುಡಗುಂಟಿ, ಪಂಪಾಪತಿ ಹೋಟೆಲ್‌, ಕಣ್ಣಪ್ಪ, ಬಸವರಾಜ, ಶಿವಪ್ಪ ಅವರಿಗೆ ಹಂಪನಗೌಡ ಬಾದರ್ಲಿ ಅವರು ಕಾಂಗ್ರೆಸ್‌ ಪಕ್ಷದ ಹೆಗಲು ಪಟ್ಟಿಹಾಕಿ ಧ್ವಜ ನೀಡಿ ಬರಮಾಡಿಕೊಂಡರು. ಈ ವೇಳೆ ಕಾಂಗ್ರೆಸ್‌ ಮುಖಂಡರಾದ ಲಿಂಗಪ್ಪ ಜಂಬಣ್ಣ, ಅಮರೇಶ ವಲ್ಲೂರು, ವೀರೇಶ ಕಸ್ತೂರಿ, ವಿರೂಪಾಕ್ಷಿಗೌಡ ಸಾನಬಾಳ, ಬಸವರಾಜ, ಲಿಂಗಾಧರ ಗುರುಸ್ವಾಮಿ ಇದ್ದರು.

ಸಿಂಧನೂರು ಜಿಲ್ಲೆಯಾಗಿಸಲು ಜನಾಭಿಪ್ರಾಯ ಸಂಗ್ರಹ:ಬಾದರ್ಲಿ

 ತಾಲೂಕಿನ ಪ್ರತಿ ಗ್ರಾಮದ ಸಮಸ್ಯೆಗಳ ಕುರಿತು ‘ಮತದಾರರೊಂದಿಗೆ ಮನೆ ಮಗನ ಮಾತುಕತೆ’ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಜ.9 ರಿಂದ 11 ರವರೆಗೆ ನಡೆಯಲಿದೆ ಎಂದು ಕೆಪಿಸಿಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ತಿಳಿಸಿದರು.

Raichur Assembly election: ಜನಾರ್ದನರೆಡ್ಡಿ ಪ್ರಭಾವಳಿ ಮಧ್ಯೆ ಟಿಕೆಟ್‌ ಚರ್ಚೆ

ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಳದರಾಶಿ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಅಲಬನೂರಿನಲ್ಲಿ ರೈತರ ಸಮಸ್ಯೆಗಳು, ಗಿಣಿವಾರದಲ್ಲಿ ಮಹಿಳೆಯರ ಸಮಸ್ಯೆಗಳು ಹಾಗೂ ವಳಬಳ್ಳಾರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುವುದು. 11 ರಂದು ವಳಬಳ್ಳಾರಿ ಗ್ರಾಮದಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದೆ. ಪಾದಯಾತ್ರೆಯಲ್ಲಿ ಯುವಕರಿಗೆ ಜನಜಾಗೃತಿ ಮೂಡಿಸಲಾಗುವುದು. ಸಿಂಧನೂರನ್ನು ಜಿಲ್ಲೆಯಾಗಿಸಲು ವಿವಿಧ ವಲಯಗಳ ಜನರ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಆಶೀರ್ವದಿಸಿದರೆ ತಾಲೂಕಿನಲ್ಲಿಯೇ ಕೈಗಾರಿಕೆಗಳನ್ನು ಆರಂಭಿಸಿ ಯುವಕರಿಗೆ ಉದ್ಯೋಗ, ಪ್ರತಿ ಕುಟುಂಬಕ್ಕೆ ವೈದ್ಯಕೀಯ ಸೌಕರ್ಯ, ಮಹಿಳೆಯರಿಗೆ ಸ್ವಾವಲಂಬಿ ಜೀವನ ನಿರ್ಮಾಣ, ಸರ್ಕಾರಿ ಶಾಲೆಗಳ ಸುಧಾರಣೆ, ಹೋಬಳಿಗೊಂದು ಪದವಿ ಪೂರ್ವ ಕಾಲೇಜು, ಡಿಪ್ಲೋಮಾ, ಎಂಜನಿಯರಿಂಗ್‌, ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡುವ ಕನಸನ್ನು ಹೊಂದಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಟಿಕೆಟ್‌ ನೀಡಲು ತ್ರಿಸೂತ್ರದ ಚಿಂತನೆ ನಡೆದಿದೆ ಎಂಬುದು ಪಕ್ಷದ ಆಂತರಿಕ ವಿಚಾರವಾಗಿದೆ. ಗೆಲ್ಲುವ ಹಾಗೂ ಯುವ ಅಭ್ಯರ್ಥಿಗಳಿಗೆ ಈ ಬಾರಿ ಪಕ್ಷ ಮಣೆ ಹಾಕಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಾಡಗೌಡರ ನಡೆ ಸಾಧನೆಯ ಕಡೆ ಇಲ್ಲವೇ ಇಲ್ಲ. ಅವರ ನಡೆ ಕೇವಲ ಫರ್ಸೆಂಟೇಜ್‌ ಕಡೆ ಮಾತ್ರ ಇದೆ. ಅವರಿಂದ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಮಾಜಿ ಹಾಗೂ ಹಾಲಿ ಶಾಸಕರು ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಜನಾರ್ಧನರೆಡ್ಡಿ ಅವರು ಸಿಂಧನೂರು ತಾಲೂಕಿಗೆ ಏನು ಕೊಡುಗೆ ನೀಡಿದ್ದಾರೆ. ಇಲ್ಲಿಯ ಜನ ಸ್ವಾಭಿಮಾನಿಗಳು ಹಣಕ್ಕಾಗಿ ಅನ್ಯರ ಕೈಗೆ ಅಧಿಕಾರ ಕೊಡುವುದಿಲ್ಲ. ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಿಜೆಪಿಯ ಬಿ ಟೀಮ್‌ ಆಗಿದೆ ಎಂದು ಆರೋಪಿಸಿದರು. ಮುಖಂಡರಾದ ವೆಂಕಟೇಶ ರಾಗಲಪರ್ವಿ, ಯೂನೂಷ್‌ಪಾಷಾ, ಶರಣಯ್ಯಸ್ವಾಮಿ ಕೋಟೆ, ಮೂಕಪ್ಪ ಪೈಕ್ಯಾಂಪ್‌, ವೆಂಕನಗೌಡ, ರಾಮನಗೌಡ ಗಿಣಿವಾರ, ರಮೇಶ ಬೆಳಗುರ್ಕಿ, ಅಮರೇಶ ಗಿರಿಜಾಲಿ ಇದ್ದರು.

Raichuru Politics: ಸಿಂಧನೂರು 'ಕೈ' ಟಿಕೆಟ್ ಗಾಗಿ ತೆರೆಮರೆಯಲ್ಲಿ ಭಾರೀ ಕಸರತ್ತು

ಮಾಜಿ ಶಾಸಕ ರಾಜಾ ರಾಯಪ್ಪ ಕಾಂಗ್ರೆಸ್‌ಗೆ ರಾಜೀನಾಮೆ

 ಲಿಂಗಸೂಗೂರು: ರಾಯಚೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ರಾಜಾ ರಾಯಪ್ಪ ನಾಯಕ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸೂಕ್ತ ಮನ್ನಣೆ ಸಿಗುತ್ತಿಲ್ಲ, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸಂಸದ ರಾಜಾ ಅಮರೇಶ್ವರ ನಾಯಕ ಅವರ ಹಿರಿಯ ಸಹೋದರಾಗಿರುವ ರಾಜಾ ರಾಯಪ್ಪ ಅವರು ರಾಯಚೂರು ಗ್ರಾಮೀಣ ಮತ್ತು ಲಿಂಗಸೂಗೂರು ಭಾಗದ ಪ್ರಭಾವಿ ನಾಯಕರಲ್ಲೊಬ್ಬರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!