ಕರ್ನಾಟಕ ಭಾರತದಲ್ಲಿ ಇದೆಯಾ? ಅಥವಾ ಪಾಕಿಸ್ತಾನದಲ್ಲಿ ಇದೆಯಾ? ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯಕ್ಕೆ ಒಂದು ಕಾನೂನು, ಹಿಂದೂ ಸಮಾಜಕ್ಕೆ ಇನ್ನೊಂದು ಕಾನೂನು ಎಂದು ವರ್ತಿಸುತ್ತಿದೆ: ಪ್ರತಿಪಕ್ಷ ನಾಯಕ ಆರ್.ಅಶೋಕ್
ಚನ್ನಪಟ್ಟಣ(ನ.08): ವಕ್ಫ್ ಭೂತ ರಾಜ್ಯದಲ್ಲಿ ಕ್ಯಾನ್ಸರ್ ರೀತಿಯಲ್ಲಿ ಹಬ್ಬುತ್ತಿದೆ. ಹಿಂದೂಗಳ ಭೂಮಿಯನ್ನು ವಕ್ಫ್ ಕಬಳಿಕೆ ಮಾಡುತ್ತಿದೆ. ರೈತರು, ದೇವಾಲಯ, ಮಠ ಮಾನ್ಯಗಳ ಜಮೀನು ವಕ್ಫ್ ಆಸ್ತಿ ಎಂದು ತೋರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಕೋಡಂಬಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹುಣಸನಹಳ್ಳಿ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಭಾರತದಲ್ಲಿ ಇದೆಯಾ? ಅಥವಾ ಪಾಕಿಸ್ತಾನದಲ್ಲಿ ಇದೆಯಾ? ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯಕ್ಕೆ ಒಂದು ಕಾನೂನು, ಹಿಂದೂ ಸಮಾಜಕ್ಕೆ ಇನ್ನೊಂದು ಕಾನೂನು ಎಂದು ವರ್ತಿಸುತ್ತಿದೆ. ದೇವಾಲಯಗಳು, ಮಠಮಾನ್ಯಗಳ ಜಮೀನುಗಳು ವಕ್ಫ್ ಆಸ್ತಿ ಎಂದು ತೋರಿಸುವ ಕೆಲಸ ಮಾಡಲಾಗುತ್ತಿದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್, ದರ್ಗಾ ಆಸ್ತಿ ಎಂದು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
undefined
ಹಿಂದೆ ಡಿ.ಕೆ ಸುರೇಶ್ ಅವರೂ ಕಣ್ಣೀರು ಹಾಕಿದ್ರು, ನಾವು ಕೇಳಿದ್ವಾ?: ನಿಖಿಲ್ ಕುಮಾರಸ್ವಾಮಿ
ಸಿದ್ದು ದುರಾಸೆಗೆ ಮಿತಿ ಬೇಡವೇ: ಸಿದ್ದರಾಮಯ್ಯ ಅವರ ದುರಾಸೆಗೆ ಮಿತಿ ಬೇಡವೇ? ಅವರಿಗೆ ೧೪ ನಿವೇಶನ ಯಾತಕ್ಕೆ? ದೇವೇಗೌಡರು, ಕುಮಾರಸ್ವಾಮಿ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರೈತರ ಜೀವಕ್ಕೆ ಜೀವ ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮನೆಗಾಳು ಪಕ್ಷ. ಅದರ ಪಾಪದ ಕೊಡ ತುಂಬಿದೆ. ಅದು ಆರು ತಿಂಗಳು ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದರು.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕು - ಯದುವೀರ್
ಮೈಸೂರು ಹಾಗೂ ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಕ್ಫ್ ವಿವಾದವನ್ನು ನಾವು ಸಂಘಟಿತವಾಗಿ ಎದುರಿಸಬೇಕಿದೆ. ಹಿಂದೂ ಸಮಾಜದ ಆಸ್ತಿ ಕಾಪಾಡಬೇಕು, ನಾವು ಎಚ್ಚರಿಕೆಯಿಂದ ಇರಬೇಕು. ಹಳೆಯ ಮೈಸೂರು ಭಾಗ ಶಾಂತಿಯುತ ಪ್ರದೇಶ. ಆದರೆ, ಈ ವಕ್ಫ್ ವಿವಾದದಿಂದ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತದೆ. ವಕ್ಫ್ ಬಗ್ಗೆ ನಾವು ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕು. ಹಾಗೆ ಮಾಡುವ ಮೂಲಕ ಆ ಸಮುದಾಯಕ್ಕೂ ದೇಶದ ಕಾನೂನು ನಮಗೆ ಅನ್ವಯ ಆಗುವಂತೆ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು.