ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರ: ಜೆಡಿಎಸ್-ಬಿಜೆಪಿ ಮೈತ್ರಿಗೆ ನಾಂದಿ...!

By Suvarna News  |  First Published Dec 8, 2020, 6:14 PM IST

ವಿವಾದಿತ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿದೆ. ಆದ್ರೆ,  ಅಧಿಕಾರದ ಆಸೆಗಾಗಿ ಜೆಡಿಎಸ್, ಬಿಜೆಪಿಯನ್ನು ಬೆಂಬಲಿಸಿದೆ ಎಂದು ಹೇಳಲಾಗುತ್ತಿದೆ.


ಬೆಂಗಳೂರು, (ಡಿ.08): ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಮಂಗಳವಾರ ವಿಧಾನ ಪರಿಷತ್‌ನಲ್ಲೂ ಅಂಗೀಕರವಾಯಿತು. 

ಹಿಂದಿನ ಅಧಿವೇಶನದಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ ದೊರಕಿರಲಿಲ್ಲ. ಹೀಗಾಗಿ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರು ಮತ್ತೆ ಪರಿಷ್ಕೃತ ಮಸೂದೆ ಮಂಡಿಸಿದ್ದರು.

Tap to resize

Latest Videos

ವಿಧಾನ ಪರಿಷತ್ ನಲ್ಲಿ ಮಸೂದೆ ಅಂಗೀಕಾರ ಕುರಿತಂತೆ ಇಂದು (ಮಂಗಳವಾರ) ಮತಕ್ಕೆ ಹಾಕಲಾಯಿತು. ಈ ಕಾಯ್ದೆ ಅಂಗೀಕಾರಕ್ಕೆ ಬಿಜೆಪಿಗೆ ಜೆಡಿಎಸ್ ಬೆಂಬಲದೊಂದಿಗೆ 37 ಮತಗಳು ಕಾಯ್ದೆ ಅಂಗೀಕರದ ಪರವಾಗಿ ಚಲಾವಣೆಗೊಂಡವು.

ಸಭಾಪತಿ ವಿರುದ್ಧ ಅವಿಶ್ವಾಸ: ಜೆಡಿಎಸ್‌ಗೆ ಜಾತ್ಯಾತೀತ ಪರೀಕ್ಷೆ

ಕಾಯ್ದೆಯ ವಿರೋಧವಾಗಿ 21 ಮತಗಳ ಚಲಾವಣೆಗೊಂಡವು. ಈ ಮೂಲಕ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲ್ಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿದೆ.

ಜೆಡಿಎಸ್-ಬಿಜೆಪಿ ಮೈತ್ರಿಗೆ ನಾಂದಿ..
ಹೌದು....ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಗೆ ಈ ಭೂ ಸುಧಾಕರಣೆ ಕಾಯ್ದೆ ಸಾಕ್ಷಿಯಾಗಿದೆ. ಯಾಕಂದ್ರೆ ಕಳೆದ ಅಧಿವೇಶನದಲ್ಲಿ ಇದೇ ಕಾಯಿದೆಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿತ್ತು. ಆದ್ದರಿಂದ  ಆಗ ಮಸೂದೆಗೆ ಸೋಲಾಗಿತ್ತು.

 ಆದ್ರೆ, ಇದೀಗ ಮತ್ತೆ ಸಣ್ಣ ಪುಟ್ಟ ತಿದ್ದುಪಡಿಗಳೊಂದಿಗೆ ವಿಧೇಯಕ ಮಂಡಿಸಿದ್ದ ಕಂದಾಯ ಸಚಿವ ಅಶೋಕ್, ಕಡೇ ಕ್ಷಣದ ವರೆಗೂ ವಿರೋಧ ವ್ಯಕ್ತ ಪಡಿಸಿದ್ದ ಜೆಡಿಎಸ್ ಸದಸ್ಯರು ಇದ್ದಕ್ಕಿದ್ದಂತೆ ತಮ್ಮ ನಿಲುವು ಬದಲಿಸಿ  ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೈ ಎಂದರು.

ಕಡೇ ಕ್ಷಣದ ವರೆಗೂ ವಿರೋಧ ವ್ಯಕ್ತ ಪಡಿಸಿದ್ದ ಜೆಡಿಎಸ್ ಸದಸ್ಯರು ಇದ್ದಕ್ಕಿದ್ದಂತೆ ತಮ್ಮ ನಿಲುವು ಬದಲಿಸಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಾರಣ ಇಷ್ಟೇ ಪರಿಷತ್ ಸಭಾಪತಿ ಆಸೆಗಾಗಿ ಜೆಡಿಎಸ್ ಕೊನೆ ಕ್ಷಣದಲ್ಲಿ ಸರ್ಕಾರದ ಪರ ನಿಂತಿದೆ. ಪರಿಷತ್‌ನಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ದ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದು, ಇದಕ್ಕೆ ಜೆಡಿಎಸ್‌ ಸಹ ಬೆಂಬಲ ಸೂಚಿಸಿದೆ. ಅಲ್ಲದೇ ಜೆಡಿಎಸ್  ವರಿಷ್ಠರು, ತಮ್ಮ ವಿಧಾನಪರಿಷತ್ ಸದಸ್ಯ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಭೂ ಸುಧಾರಣೆ ಕಾಯ್ದೆ ಅಂಗೀಕಾರಕ್ಕೆ ಸರ್ಕಾರದ ಪರ ಮತ ಹಾಕಿದೆ.

click me!