ಶ್ರೀಗಳೊಂದಿಗೆ ಮಾಧುಸ್ವಾಮಿ ಸಂಧಾನ: BJP ಅಭ್ಯರ್ಥಿ ವಿಶ್ವನಾಥ್‌ಗೆ ಜಾಕ್‌ಪಾಟ್

By Web Desk  |  First Published Nov 23, 2019, 5:27 PM IST

ಉಪಚುನಾವಣೆ ಹೊತ್ತಲಲ್ಇ ಹುಳಿಯಾರುನಲ್ಲಿ ಕನಕ ವೃತ್ತ ನಿರ್ಮಾಣ ವಿಚಾರದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ನಡವಳಿಕೆ ಕುರುಬರ ಕಿಚ್ಚು ಹೊತ್ತಿಸಿತ್ತು. ಬಳಿಕ ಎಚ್ಚೆತ್ತ ಮಾಧುಸ್ವಾಮಿಯನ್ನು ಗೃಹ ಸಚಿವ ಬೊಮ್ಮಾಯಿ ಹಾಲುಮತ ಶ್ರೀಗಳ ಮಠಕ್ಕೆ ಕರೆದೊಯ್ದಿರುವುದು ಇತ್ತ ಬಿಜೆಪಿ ಅಭ್ಯರ್ಥಿ ವಿಶ್ವನಾಥ್‌ಗೆ ಜಾಕ್ ಪಾಟ್ ಹೊಡೆದಿದೆ.


ಮೈಸೂರು, (ನ.23): ಹುಳಿಯಾರುನಲ್ಲಿ ಕನಕ ವೃತ್ತ ನಿರ್ಮಾಣ ವಿಚಾರದಲ್ಲಿ ಮಾಧುಸ್ವಾಮಿ ಕಣ್ಣೀರಿಟ್ಟಿರುವುದಕ್ಕೆ ಹುಣಸೂರಿನಲ್ಲಿ ಕುರುಬ ಸಂಘಟನೆಗಳು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿವೆ.

ಇಂದು (ಶನಿವಾರ) ಹುಣಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಲುಮತ, ಕುರುಬ ಯುವಕರ ಸಂಘಟನೆಗಳಿಂದ ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್‌ಗೆ ಬೆಂಬಲಿಸುವುದಾಗಿ ಸ್ಪಷ್ಟಪಡಿಸಿವೆ. 

Latest Videos

undefined

ಸಿದ್ದರಾಮಯ್ಯ, ದೇವೇಗೌಡ್ರನ್ನ ಹಾಡಿ ಹೊಗಳಿ ಅಟ್ಟಕ್ಕೇರಿಸಿದ ವಿಶ್ವನಾಥ್....!

ಹಳ್ಳಿ ಹಳ್ಳಿಗಳಲ್ಲಿ ಕುರುಬ ಸಂಘ, ಹಾಲುಮತಸ್ಥರ ಸಂಘ ಅಂತ ಬೋರ್ಡ್ ಹಾಕಿಕೊಳ್ಳಲು ವಿಶ್ವನಾಥ್, ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ ಕಾರಣ. ವಿಶ್ವನಾಥ್ ಗೆದ್ದರೆ ಮಂತ್ರಿ ಆಗುತ್ತಾರೆ. ಆದ್ದರಿಂದ ನಾವು ಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಕುರುಬ ಮುಖಂಡರು ಹೇಳಿದರು.

ಹುಣಸೂರು ಕ್ಷೇತ್ರದಲ್ಲಿ ಸುಮಾರು 45 ಸಾವಿರ ಕುರುಬ ಮತಗಳಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರ ಬದಲಿಗೆ ವಿಶ್ವನಾಥ್ ಅವರ ಬೆನ್ನಿಗೆ ನಿಂತಿರುವುದು ಬಿಜೆಪಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

ಕನಕವೃತ್ತ ವಿವಾದಕ್ಕೆ ತೆರೆ, ಕಣ್ಣೀರಿಟ್ಟ ಮಾಧುಸ್ವಾಮಿ ಕೊನೆಗೂ ಕ್ಷಮೆ ಕೇಳಿದ್ರಾ?

ಇನ್ನೊಂದು ಪ್ರಮುಖ ಅಂಶ ಅಂದ್ರೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕನಕ ವೃತ್ತ ನಿರ್ಮಾಣ ವಿಚಾರವಾಗಿ ಹಾಲುಮತ ಶ್ರೀಗಳಿಗೆ ಅವಹೇಳಿನ ಮಾಡಿದ್ದರು. ಇದು ರಾಜ್ಯಾದ್ಯಂತ ಕುರುಬರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. 

ಬೈ ಎಲೆಕ್ಷನ್ ಹೊತ್ತಲ್ಲಿ ಮಾಧುಸ್ವಾಮಿ ಕಿಡಿಹೊತ್ತಿಸಿದ್ದು ಬಿಜೆಪಿಗೆ ಆತಂಕ ಶುರುವಾಗಿತ್ತು. ಈ ಬಗ್ಗೆ ಸ್ವತಃ ಸಿಎಂ ಬಿಎಸ್.ಯಡಿಯೂರಪ್ಪ ಅವರೇ ಮಾಧುಸ್ವಾಮಿ ಬದಲಿಗೆ ಕ್ಷಮೆಯಾಚಿಸಿದ್ದರು.

 ಸಚಿವ ಜೆ.ಸಿ.ಮಾಧುಸ್ವಾಮಿ ಕುರುಬ ಸಮುದಾಯದ ಸ್ವಾಮೀಜಿ ಕುರಿತು ಆಡಿರುವ ಮಾತುಗಳು ಕುರುಬ ಸಮುದಾಯವನ್ನು ಕೆರಳಿಸಿದ್ದು, ಬೈ ಎಲೆಕ್ಷನ್‌ಲ್ಲಿ ಬಿಜೆಪಿಗೆ ಬೆಂಬಲಿಸದಂತೆ ಕುರುಬ ಸಮುದಾಯದ ಪದಾಧಿಕಾರಿಗಳು ಕರೆಕೊಟ್ಟದ್ದರು.

ಇದು ಉಪಚುನಾವಣೆಯ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ  ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾಧುಸ್ವಾಮಿ ಅವರನ್ನು  ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿರುವ ಶಾಖಾಮಠಕ್ಕೆ ಕರೆದುಕೊಂಡು ಹೋಗಿ ರಾಜಿ ಸಂಧಾನ ಮಾಡಿಸಿದ್ದರು. ಇದೀಗ ಮಾಧುಸ್ವಾಮಿ ಸಂಧಾನ ವಿಶ್ವನಾಥ್ ಅವರಿಗೆ ಉಪಚುನಾವಣೆಯಲ್ಲಿ ಅನುಕೂಲವಾಗಿದೆ.

click me!