ರಾಜಕೀಯ ನಿಂತ ನೀರಲ್ಲ, ಇಲ್ಲಿ ಯಾರಿಗೂ ಯಾರೂ ಶತ್ರುಗಳಲ್ಲ ಎನ್ನುವುದಕ್ಕೆ ಪೂರಕವಾದ ವಿದ್ಯಮಾನಗಳು ಬಹಳಷ್ಟು ಬಾರಿ ನಡೆದಿದೆ. ಸಾರ್ವಜನಿಕವಾಗಿ ಒಬ್ಬರೊನ್ನೊಬ್ಬರು ಕೀಳು ಮಟ್ಟದಲ್ಲಿ ಆರೋಪಿಸಲು ಹೇಸದ ಪಕ್ಷಗಳು ತಮಗೆ ಬೇಕಾದಾಗ ಮಾತ್ರ ಒಂದಾಗುತ್ತವೆ. ಅಂಥದ್ದೊಂದು ರಾಜಕೀಯ ಗಿಮಿಕ್ ಬೈ ಎಲೆಕ್ಷನ್ ಹೊತ್ತಲ್ಲಿ ನಡೆದಿದೆ.
ಮೈಸೂರು, (ನ.23): ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಯಾವ ಮಟ್ಟಿಗಿನ ರಾಜಕೀಯ ಬದ್ಧ ವೈರಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಅದರಲ್ಲೂ ವಿಶ್ವನಾಥ್ ಅಂತೂ ಸಿದ್ದರಾಮಯ್ಯನವರನ್ನು ಬಹಿರಂಗವಾಗಿ ಹಿಗ್ಗಾಮುಗ್ಗಾ ಬೈದಿರುವುದು ಉಂಟು. ಸಿದ್ದರಾಮಯ್ಯನವರಿಂದಲೇ ಕಾಂಗ್ರೆಸ್ ಬಿಡಬೇಕಾಯ್ತು ಅಂತೆಲ್ಲಾ ವಾಗ್ದಾಳಿ ನಡೆಸಿದ್ದರು. ಆದ್ರೆ, ಇದೀಗ ಅದೇ ವಿಶ್ವನಾಥ್, ಬೈ ಎಲೆಕ್ಷನ್ ಹೊತ್ತಲ್ಲಿ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದಾರೆ.
undefined
ವಿಶ್ವನಾಥ್ ಎದುರಾಳಿ ಕಾಂಗ್ರೆಸ್ ಅಲ್ಲ : ಸಿದ್ದರಾಮಯ್ಯ
ಹೌದು...ಅಚ್ಚರಿ ಎನಿಸಿದರೂ ಸತ್ಯ. ಇಂದು (ಶನಿವಾರ) ಹುಣಸೂರು ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ತಮ್ಮ ರಾಜಕೀಯ ವೈರಿ ಸಿದ್ದರಾಮಯ್ಯ ಕೊಂಡಾಡಿರುವುದು ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದೆ.
ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಅವರೊಬ್ಬ ಒಳ್ಳೆಯ ಆಡಳಿತಗಾರ. ಆ ಕಾರಣದಿಂದಲೇ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದ ಜನತೆ ಸಿದ್ದರಾಮಯ್ಯರನ್ನು ಪ್ರೀತಿಸುತ್ತಾರೆ. ವಿರೋಧ ಪಕ್ಷದವರೂ ಸಹ ಅವರನ್ನು ಇಷ್ಟಪಡುತ್ತಾರೆ. ನಾನೂ ಸಿದ್ದರಾಮಯ್ಯ ಅವರನ್ನು ಇಷ್ಟಪಡುತ್ತೇನೆ ಎಂದು ವಿಶ್ವನಾಥ್ ಹೇಳಿದ್ದು ಅಚ್ಚರಿ ಮೂಡಿಸಿದೆ.
ಸಿದ್ದರಾಮಯ್ಯಗೆ ಮತ್ತೆ ಕುಕ್ಕಿದ 'ಹಳ್ಳಿ ಹಕ್ಕಿ'
ಇನ್ನು ಇದೇ ವೇಳೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನ ವಿಶ್ವನಾಥ್ ಹಾಡಿ ಹೊಗಳಿದರು. ನಾನು ದೇವೇಗೌಡರ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇನೆ. ಜೀವ ಇರೋವರೆಗೂ ದೇವೇಗೌಡರಿಗೆ ಪೂಜೆ ಮಾಡುತ್ತೇನೆ ಅಂತೆಲ್ಲಾ ಹೇಳಿದರು.
ಹುಣಸೂರು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರ ಈ ಹೇಳಿಕೆಗಳು ಉಪಚುನಾವಣೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಹಾಗೂ ದೇವೇಗೌಡ್ರನ್ನು ಹೊಗಳಿ ವೋಟ್ ಗಿಟ್ಟಿಸಿಕೊಳ್ಳುವುದು ವಿಶ್ವನಾಥ್ ಅವರ ತಂತ್ರಗಾರಿಕೆಯೇ ಎನ್ನುವು ಪ್ರಶ್ನೆಗಳು ಉದ್ಭವಿಸಿವೆ.