ಅಸ್ಪೃಶ್ಯತೆ ಹೇಳಿಕೆಯನ್ನು ತಿರುಚಲಾಗುತ್ತಿದೆ : ಕುಮಾರಸ್ವಾಮಿ ಆಕ್ರೋಶ

By Sathish Kumar KHFirst Published Nov 30, 2022, 2:03 PM IST
Highlights

ರಾಜ್ಯದಲ್ಲಿ ಕೈಗೊಂಡಿರುವ ಪಂಚರತ್ನ ರಥಯಾತ್ರೆ ವೇಳೆ ನಾನು ಹೇಳಿರುವ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತಿರುಚಿ ಚರ್ಚೆ ಮಾಡಲಾಗುತ್ತಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ ಅವರ ಬಗ್ಗೆ ಮಾತನಾಡುವಾಗ ಅವರೇನು ಅಸ್ಪೃಷ್ಯರಾ ಎಂದು ಪ್ರಶ್ನೆ ಮಾಡಿದ್ದೇನೆ?  ಈಗ ಅದನ್ನೇ ತಿರುಚಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು (ನ.30): ರಾಜ್ಯದಲ್ಲಿ ಕೈಗೊಂಡಿರುವ ಪಂಚರತ್ನ ರಥಯಾತ್ರೆ 13ನೇ ದಿನಕ್ಕೆ ಕಾಲಿಟ್ಟಿದ್ದು, ನೆಲಮಂಗಲ ತಲುಪುತ್ತಿದೆ. ಈ ವೇಳೆ ನಾನು ಹೇಳಿರುವ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತಿರುಚಿ ಚರ್ಚೆ ಮಾಡಲಾಗುತ್ತಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ ಅವರ ಬಗ್ಗೆ ಮಾತನಾಡುವಾಗ ಅವರೇನು ಅಸ್ಪೃಷ್ಯರಾ ಎಂದು ಪ್ರಶ್ನೆ ಮಾಡಿದ್ದೇನೆ?  ಈಗ ಅದನ್ನೇ ತಿರುಚಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಮೀಸಲಾದವನು ಅಲ್ಲ. ಈವರೆಗೆ ಯಾವುದೇ ವ್ಯಕ್ತಿ ನನ್ನನ್ನು ಭೇಟಿ ಮಾಡಲು ಬಂದರೆ ಅವರನ್ನು ಅಸ್ಪೃಷ್ಯವಾಗಿ ನೋಡಿಲ್ಲ. ಕೆ.ಆರ್. ಪೇಟೆಯಲ್ಲಿ ನನ್ನ ಕಾರು ತಡೆದು ಹೃದಯ ಕಾಯಿಲೆಗೆ ಚಿಕಿತ್ಸೆ ಕೊಡಿಸಿ ಅಂತ ಮನವಿ ಮಾಡಿದ್ದ ಮಹಿಳೆಗೆ, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಿದ್ದೆನು. ಈ ವೇಳೆ ನಮ್ಮ ಮನೆಯಲ್ಲಿಯೇ ವಾಸ್ತವ್ಯ ಕೊಡಿಸಿದ್ದೆ. ಆದರೆ, ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ ಮೊನ್ನೆ ಹುಬ್ಬಳ್ಳಿಯಲ್ಲಿ ನಾನು ಸಿಎಂ ಅಭ್ಯರ್ಥಿ ಆಗುತ್ತೇನೆ. ಕುಮಾರಸ್ವಾಮಿ ದೆಹಲಿಗೆ ಹೋಗುವ ಸಮಯ ಬಂದಿದೆ ಎಂದಿದ್ದರು. ಈ ವಿಚಾರವಾಗಿ ಖಾಸಗಿ ವಾಹಿನಿಯೊಂದಿಗೆ ಮಾತನಾಡುವಾಗ ಅವರೇನು ಅಸ್ಪೃಶ್ಯರಾ ಅವರು ಸಿಎಂ ಆಗಬಾರದಾ ಎಂದು ಪ್ರಶ್ನಿಸಿದ್ದೆನು. ಆದರೆ, ಈಗ ಬಿಜೆಪಿಯವರು ಈ ಹೇಳಿಕೆಯನ್ನು ತಿರುಚಿ ಮುಸ್ಲಿಂರು ಪಾಕಿಸ್ತಾನದವರು, ಪಾಕಿಸ್ತಾನಕ್ಕೆ ಕಳಿಸಿ ಎಂದು ಹೇಳಿದ್ದಾರೆಂದು ಚರ್ಚೆ ಮಾಡುತ್ತಿದ್ದಾರೆ. ಜೊತೆಗೆ, ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಕೀಳಾಗಿ ಕಾಣುವ ಉದ್ದೇಶವೂ ನನ್ನದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Ramanagara: ಶೇ.68ರಷ್ಟು ಇ-ಖಾತೆ ಪೂರ್ಣ: ಶಾಸಕಿ ಅನಿತಾ ಕುಮಾರಸ್ವಾಮಿ

ಸಿದ್ದರಾಮಯ್ಯ ಹೇಳಿಕೆಯನ್ನೇಕೆ ಚರ್ಚಿಸಲಿಲ್ಲ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇದೇ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಮೊನ್ನೆ ಸಿದ್ದರಾಮಯ್ಯ ಕೂಡ ಅವರೇನು ಅಸ್ಪೃಶ್ಯರ ಅಂತ ಹೇಳಿದ್ದರು. ಆ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ. ತಮ್ಮ ನೋವನ್ನ ಹೇಳಿಕೊಳ್ಳಲು ಬರುವ ನೂರು ಜನರಲ್ಲಿ ಈ ರೀತಿಯವರೇ ಇರುತ್ತಾರೆ. ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವವರು ಬಿಜೆಪಿಯಂತವರು. ಇದಕ್ಕೆ ನಾನು ಹೆದರಲ್ಲ. ಸಮಾಜಕ್ಕೆ ಹೆದರಿ ಪದಬಳಕೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರೆ ನಾನೂ ಅವರನ್ನು ಗೌರವಿಸುತ್ತೇನೆ ಎಂದರು.

ಮಂಡೂರು ತ್ಯಾಜ್ಯ ಘಟಕದ ಸಮಸ್ಯೆಗೆ ಮುಕ್ತಿ: ದೊಡ್ಡಬಳ್ಳಾಪುರ ತಾಳೂಕಿನ ಮಂಡೂರಿನಲ್ಲಿ ಘನತ್ಯಾಜ್ಯ ತೆರವಿಗೆ 900 ಕೋಟಿ ರೂ. ಖರ್ಚು ಮಾಡಲಾಗಿದೆ. ಯಾವುದೇ ಸ್ಥಳದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಬಹುದು. ಆದರೆ, ಅದರ ಸುತ್ತಲಿನ ಪ್ರದೇಶದ ಯಾವುದೇ ಸಮಾಜ ಅಥವಾ ಯಾವುದೇ ವ್ಯಕ್ತಿ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಆದರೆ, ಆದರೆ ಇಲ್ಲಿ ಕೆಲ ಮಾಫಿಯಾಗಳಿದ್ದು, ಸಮರ್ಪಕ ಬಳಕೆಗೆ ತೊಂದರೆ ಆಗುತ್ತಿದೆ. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದಕ್ಕೆ ಶಾಶ್ವತ ಪರಿಹಾರ ನೀಡುವುದಾಗಿ ತಿಳಿಸಿದರು. 

ಒಕ್ಕಲಿಗರ ಮೀಸಲಾತಿ ಹೋರಾಟದಿಂದ ಅಂತರ ಕಾಯ್ದಕೊಂಡಿತೆ ಜೆಡಿಎಸ್‌?

ಸರ್ಟಿಫಿಕೇಟ್‌ ಪಡೆಯುವ ಅಗತ್ಯವಿಲ್ಲ: ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಸಚಿವ ಸುಧಾಕರ್‍‌ ಪ್ರಶ್ನಿಸಿದ್ದಾರೆ. ಆದರೆ, ನಾನು ಅವರಿಂದ ಸರ್ಟಿಫಿಕೇಟ್ ಪಡೆಯೋ ಅವಶ್ಯಕತೆ ಇಲ್ಲ. ಇನ್ನು ಕಳೆದ ಮೂರೂವರೆ ವರ್ಷದಿಂದ ಏನೂ ಮಾಡದವರು ಮುಂದಿನ 3 ತಿಂಗಳಲ್ಲಿ ನೆಲಮಂಗಲ ಪಟ್ಟಣವನ್ನು ಸ್ಯಾಟಲೈಟ್ ಸಿಟಿ ಮಾಡಲು ಸಾಧ್ಯವಾಗಲಿದೆಯಾ? 2006ರಲ್ಲಿ ಮೂರು ಸ್ಯಾಟಲೈಟ್ ನಗರ ಮಾಡಲು ಮುಂದಾದೆ. ಬಿಡದಿಯಲ್ಲಿ ಸ್ಯಾಟಲೈಟ್ ಟೌನ್ ಮಾಡುವಾಗ ಕಾಂಗ್ರೆಸ್ ನಾಯಕರು ವಿರೋಧಿಸಿದರು. ಈಗ ಬೆಂಗಳೂರು ಏನು ಮಾಡಿದ್ದಾರೆ ಗೊತ್ತಿಲ್ವಾ? ನೆಲಮಂಗಲ ಈಗಾಗಲೇ ಸಾಕಷ್ಟು ಬೆಳದಿದ್ದು, ಬೆಂಗಳೂರಿಗೆ ಸೇರಿಕೊಂಡಿದೆ. ಇನ್ಯಾವಾಗ ಸ್ಯಾಟಲೈಟ್ ಟೌನ್ ಮಾಡೋದು. ಬಹುಷ ಅವರು ಮುಂದಿನ ಚುನಾವಣೆ ಮುಗಿದ ಮೇಲೆ ಮಾಡಬಹುದೇನೋ?  ಎಂದು ಸುಧಾಕರ್ ಹೇಳಿಕೆಯನ್ನು ಟೀಕಿಸಿದರು.

click me!