
ಮೈಸೂರು(ಮೇ.27): ರಾಜ್ಯ ಸರ್ಕಾರದ ಆಯಸ್ಸು ಕೇವಲ 9 ತಿಂಗಳು ಮಾತ್ರ. 2023ಕ್ಕೆ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಬರುತ್ತದೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹನಿಗೆ ಏನು ಗೊತ್ತಿಲ್ಲಾ, ಎಲ್ಲೋ ಬರೆದುಕೊಂಡು ಕುತ್ತಿದ್ದರು. ಈಗ ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕ ಹಾಗೇ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪಿನಿಂದ ಎರಡು ಬಾರಿ ಸಂಸದರಾಗಿದ್ದಾರೆ. ಪ್ರತಾಪ್ ಸಿಂಹ ಟಿಪ್ಪು ಸುಲ್ತಾನ್ ಕೃಷ್ಣರಾಜ ಒಡೆಯರ್ ಅವರಿಗೂ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಮೈಸೂರು ಸಂಸ್ಥಾನದವರು ಟಿಪ್ಪು ಸುಲ್ತಾನ್ ಸಮಾಧಿಯನ್ನು ಕಾಪಡಿಕೊಂಡು ಬಂದಿದ್ದಾರೆ ಎಂದು ಅವರು ತಿಳಿಸಿದರು.
'ಯಡಿಯೂರಪ್ಪನವರನ್ನು ಮೂಲೆಗುಂಪಾಗಿಸುವ ಯತ್ನ ನಡೆಯುತ್ತಿದೆ'
ರಾಜರಾಜರಲ್ಲಿ ಒಳ್ಳೆಯ ಸಂಬಂಧ ಅವತ್ತು ಇತ್ತು. ಇಂದಿಗೂ ಇದೆ. ಕೃಷ್ಣರಾಜ ಒಡೆಯರ್ ಹಿಂದುಳಿದ ಜನರಿಗೆ ಸಾಕಷ್ಟುಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಪಠ್ಯ ಪುಸ್ತಕದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ ಟೈಟಲ್ ತೆಗದಿದ್ದಾರೆ. 70 ವರ್ಷದಿಂದ ಬರೆದುಕೊಂಡು ಬಂದಿದ್ದರು. ಈಗ ತೆಗೆದಿದ್ದಾರೆ. ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಹುಲಿಯ ಜೊತೆ ತೋರಿಸಿದ್ದಾರೆ. ಹಾಗಿದ್ದರೆ ಹಿಂದಿನ ಕಾಲದಲ್ಲಿ ಫೋಟೊಗ್ರಫಿ ಇತ್ತಾ ಎಂದು ಅವರು ಪ್ರಶ್ನಿಸಿದರು.
MLC Election: ನನ್ನ ಎಂಎಲ್‌ಸಿ ಮಾಡಲು ತಂದೆ ಲಾಬಿ ಮಾಡಿಲ್ಲ: ವಿಜಯೇಂದ್ರ
ಹುಲಿನ ಹೊಡೆಯೋಕೆ ಹೋಗಿರುವುದನ್ನು ಯಾರಾದರು ಫೋಟೋ ತೆಗೆದಿದ್ದರಾ? ಯಡಿಯೂರಪ್ಪನನ್ನು ಹುಲಿಯಾ ಅಂತೀವಿ, ರಾಜಾ ಹುಲಿ ಅಂತೀವಿ. ಹಾಗಾದ್ರೆ ಅವರು ಕಾಡಿನಲ್ಲಿದ್ದರಾ? ಒಬ್ಬ ಸಂಸದರಾಗಿ ಏನು ಮಾತನಾಡಬೇಕೆಂಬ ಪ್ರಜ್ಞೆ ಇಲ್ಲ ಎಂದು ಅವರು ದೂರಿದರು.
ಮೈಸೂರು ಕುವೆಂಪು ನಾಡು. ಪುಟ್ಟಪ್ಪನವರ ಬಳಿ ನಾವೆಲ್ಲಾ ಪಾಠ ಕೇಳಿದ್ದೇವೆ. ಪುಟ್ಟಪ್ಪನವರ ಪುಸ್ತಕಗಳನ್ನು ತೆಗೆಯಲು ಮುಂದಾಗಿದ್ದಾರೆ. ನಮ್ಮವ್ವ ಕರ್ನಾಟಕ ಮಾತೆ, ನಮ್ಮ ಅಜ್ಜಿ ಭಾರತ ಮಾತೆ. ಮೊದಲು ಅವ್ವನನ್ನ ನೋಡ್ಲಾ ಅಂದ್ರೆ ಅಜ್ಜಿ ನೋಡಕೆ ಹೊರಟಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.