ಕುಮಾರಸ್ವಾಮಿ ಪ್ಯಾಂಟಿನೊಳಗೆ ಖಾಕಿ ಚೆಡ್ಡಿ ಇದೆ; ಅವರ ಆಸ್ತಿಯಿಂದ 3 ಬಜೆಟ್ ಮಾಡಬಹುದು: ಸಚಿವ ಜಮೀರ್ ಅಹಮ್ಮದ್

By Sathish Kumar KHFirst Published Aug 4, 2024, 2:42 PM IST
Highlights

ಕೇಂದ್ರ ಸಚಿವ ಕುಮಾರಸ್ವಾಮಿ ಫ್ಯಾಂಟ್ ನಲ್ಲಿ ಖಾಕಿ ಚೆಡ್ಡಿ ಇದೆ. ಅವರ ಆಸ್ತಿಯನ್ನು ತೆಗೆದರೆ ರಾಜ್ಯಕ್ಕೆ 3 ಬಜೆಟ್ ಮಂಡಿಸಬಹುದು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು. 

ರಾಮನಗರ (ಆ.04): ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ. ಕುಮಾರಸ್ವಾಮಿ ಫ್ಯಾಂಟ್ ನಲ್ಲಿ ಖಾಕಿ ಚೆಡ್ಡಿ ಇದೆ. ಬಿಜೆಪಿಗಿಂತ ಬಿಗಿಯಾದ ಖಾಕಿ ಚೆಡ್ಡಿ ಕುಮಾರಸ್ವಾಮಿ ಹಾಕಿದ್ದಾರೆ. ಅವರ ಆಸ್ತಿಯನ್ನು ತೆಗೆದರೆ ರಾಜ್ಯಕ್ಕೆ 3 ಬಜೆಟ್ ಮಂಡಿಸಬಹುದು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಬಡವರಿಗೆ ಒಂದು‌ಮನೆ ಕೊಟ್ಟಿಲ್ಲ. ಯಾಕೆ ಬಿಜೆಪಿ-ಜೆಡಿಎಸ್ ಗೆ ಬಡವರ ಬಗ್ಗೆ ಕಾಳಜಿ ಇಲ್ವಾ? ಕುಮಾರಸ್ವಾಮಿ ಅವರೇ ರಾಮನಗರದ ಜನ್ಮಕೊಟ್ಟ ಕ್ಷೇತ್ರ ಅಂತಿರಿ. ರಾಮನಗರದಲ್ಲಿ ಎಷ್ಟು ಮನೆ ಕೊಟ್ಟಿದ್ದೀರಿ.? ನಿಮಗೆ ಓಪನ್ ಚಾಲೆಂಜ್ ಹಾಕ್ತೀನಿ ಕೇವಲ 330 ಮನೆ ಕೊಟ್ಟಿದ್ದೀರಿ. ನಾವು ಎಷ್ಟು ಮನೆ ಕೊಟ್ಟಿದ್ದೀವಿ ಬನ್ನಿ ಚರ್ಚೆ ಮಾಡೋಣ ಎಂದು ಹೇಳಿದರು.

Latest Videos

ಕಾಂಗ್ರೆಸ್ 56 ಬಾರಿ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಸರ್ಕಾರ ಉರುಳಿಸಿದೆ: ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಕುಮಾರಸ್ವಾಮಿ ಮ್ಯಾಚ್ ಫಿಕ್ಸಿಂಗ್ ಮಾಡ್ತಾರೆ. ಕೇವಲ 37 ಸೀಟ್ ಗೆದ್ದು ನಮ್ಮ ಜೊತೆ ಬಂದಿದ್ದರು. ಅವರನ್ನ ನಂಬಬೇಡಿ ಅಂತ ಕಾಂಗ್ರೆಸ್ ನವರಿಗೆ ಅವಾಗ್ಲೆ ಹೇಳಿದ್ದೆನು. ನಾನು ಅವನನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ. ಕುಮಾರಸ್ವಾಮಿ ಫ್ಯಾಂಟ್ ನಲ್ಲಿ ಖಾಕಿ ಚೆಡ್ಡಿ ಇದೆ. ಅದನ್ನು ಬಿಜೆಪಿಗಿಂತ ಬಿಗಿಯಾದ ಖಾಕಿ ಚೆಡ್ಡಿ ಕುಮಾರಸ್ವಾಮಿ ಹಾಕಿದ್ದಾರೆ. ನಾನು ಹೇಳಿದಾಗ ಕೆಲವರು ಕೇಳಲಿಲ್ಲ. ಡಿ.ಕೆ.ಸುರೇಶ್ ಸೋತಿದ್ದು ನನಗೆ ಹೊಟ್ಟೆ ಉರಿತಿದೆ. ಕ್ಷೇತ್ರದಲ್ಲಿ ಕ್ಲರ್ಕ್ ರೀತಿ ಕೆಲಸ ಮಾಡಿದ್ದಾರೆ. ಅವರು ಕ್ಷೇತ್ರಕ್ಕಾಗಿ ಹಲವು ರಾತ್ರಿ ಕೆಲಸ ಮಾಡಿದ್ದಾರೆ. ಅಂತವರು ಸೋತಿದ್ದು ಹೊಟ್ಟೆ ಉರಿತಿದೆ. ಡಿಕೆ ಸುರೇಶ್ ಅವರ 1 ಪರ್ಸೆಂಟ್ ಕೆಲಸ ಕುಮಾರಸ್ವಾಮಿ ಮಾಡಿಲ್ಲ. ಕೇವಲ ಡಂಗೂರ ಹೊಡೆದುಕೊಂಡು ಬರ್ತಾರೆ ಎಂದು ವಾಗ್ದಾಳಿ ಮಾಡಿದರು.

ಚನ್ನಪಟ್ಟಣಕ್ಕೆ ಸಾಕಷ್ಟು ಅಭಿವೃದ್ಧಿ ಬೇಕು ಅಂತ ಡಿ.ಕೆ.ಸುರೇಶ್ ಕೇಳಿದ್ದರು. ಚನ್ನಪಟ್ಟಣಕ್ಕೆ ಐದು ಸಾವಿರ ಮನೆ ಮಂಜೂರು ಮಾಡ್ತೀವಿ. ಜನಾಂದೋಲ ಕಾರ್ಯಕ್ರಮದಲ್ಲಿ ಸಚುವ ಜಮೀರ್ ಘೋಷಣೆ. ಇನ್ನ 15ದಿನಗಳಲ್ಲಿ 5ಸಾವಿರ ಮನೆ ಮಂಜೂರು ಮಾಡ್ತೀವಿ. ಮೈನಾರಿಟಿ ಅಭಿವೃದ್ಧಿಗೆ 10 ಕೋಟಿ ರೂ. ಕೊಡ್ತೀನಿ. ಉಪಚುನಾವಣೆ ಹಿನ್ನೆಲೆ ಕ್ಷೇತ್ರಕ್ಕೆ ಜಮೀರ್ ಹೊಸ ಕೊಡುಗೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆಯಿಂದ ಏನೂ ಆಗಲ್ಲ. ನಾವೆಲ್ಲಾ ಇರೋ ವರೆಗೂ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಏನೂ‌ ಮಾಡೋಕಾಗಲ್ಲ. ಯಾವ್ ನನ್ ಮಗನಿಂದಲೂ ಅವರನ್ನ ಮುಟ್ಟೋಕೆ ಸಾಧ್ಯವಿಲ್ಲ. ನಾವೆಲ್ಲಾ ನಮ್ಮ ನಾಯಕರ ಜೊತೆ ಇದ್ದೀವಿ ಎಂದು ಹೇಳಿದರು.

ಎಸ್ಸಿ ಒಳ ಮೀಸಲಾತಿ ಜಾರಿಗೆ ಸಂವಿಧಾನದ ತಿದ್ದುಪಡಿ ನೆಪ ಹೇಳಬೇಡಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ

ಕುಮಾರಸ್ವಾಮಿ ಆಸ್ತಿಯಲ್ಲಿ ರಾಜ್ಯಕ್ಕೆ 3 ಬಜೆಟ್ ಮಾಡಬಹುದು: ಮಾತೆತ್ತಿದರೆ ಡಿ.ಕೆ.ಶಿವಕುಮಾರ್ ಅವರ ಆಸ್ತಿಯ ಬಗ್ಗೆ ಬಿಚ್ಚಿಡ್ತೀನಿ ಎಂದು ಹೇಳುತ್ತಾರೆ. ಆದರೆ, ಕುಮಾರಸ್ವಾಮಿ ನಿಮ್ಮ ಕುಟುಂಬದ ಆಸ್ತಿ ತೆಗೆದ್ರೆ ಕರ್ನಾಟಕದ 3 ಬಜೆಟ್ ಮಾಡಬಹುದು. ನಿಮ್ಮ ಅಣ್ಣ, ಅಕ್ಕ, ಭಾವ, ಅನುಸೂಯಕ್ಕ ಎಲ್ಲರ ಆಸ್ತಿ ತೆಗಿರಿ. ದಯಮಾಡಿ ಎರಡು ಬಜೆಟ್‌ಗೆ ಆಗುವಷ್ಟಾದರೂ ಜನರಿಗೆ ಹಣವನ್ನು ಕೊಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಚಿವ ಜಮೀರ್ ಅಹಮ್ಮದ್ ಸವಾಲು ಹಾಕಿದರು.

click me!