ಬಿಜೆಪಿ ಜನಸ್ಪಂದನಾ ಸಮಾವೇಶಕ್ಕೆ ಗೈರು: ಸ್ಪಷ್ಟ ಕಾರಣ ಕೊಟ್ಟ ಈಶ್ವರಪ್ಪ

By Ramesh BFirst Published Sep 10, 2022, 4:31 PM IST
Highlights

ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನಾ ಸಮಾವೇಶಕ್ಕೆ ಗೈರಾಗಿರುವುದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕೊಟ್ಟ ಕಾರಣ ಹೀಗಿದೆ.
 

ಶಿವಮೊಗ್ಗ, (ಸೆಪ್ಟೆಂಬರ್.10): ಕರ್ನಾಟಕ ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ ಜನಸ್ಪಂದನಾ ಸಮಾವೇಶಕ್ಕೆ ಮಾಜಿ ಸಚಿವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಗೈರಾಗಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಇದಕ್ಕೆ ಸ್ವತಃ ಈಶ್ವರಪ್ಪನವರೇ ಕಾರಣಕೊಟ್ಟಿದ್ದಾರೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಇಂದು(ಸೆ,10) ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಇಂದಿನ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ. ಕಾಲು ನೋವಿನಿಂದಾಗಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ ಜನಸ್ಪಂದನಾ ಸಮಾವೇಶದಲ್ಲಿ ಪಾಗ್ಲೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಜನಸ್ಪಂದನಾ ಸಮಾವೇಶದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ಬಿಜೆಪಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸ್ಪಂದನಾ ಸಮಾವೇಶ ರಾಜಕೀಯ ಪ್ರೇರಿತ ಅಲ್ಲ . ದಾವಣಗೆರೆಯಲ್ಲಿ 75 ಕೋಟಿ ರೂ. ಖರ್ಚು ಮಾಡಿ ಸಿದ್ಧರಾಮೋತ್ಸವ ಮಾಡಿದ್ದು ಅದು ರಾಜಕೀಯ ಪ್ರೇರಿತ. ಮೊದಲು ಅದರ ಲೆಕ್ಕ ಕೊಡಲಿ ಎಂದು ತಿರುಗೇಟು ನೀಡಿದರು.

ಬಿಜೆಪಿ ಜನಸ್ಪಂದನ ಸಮಾವೇಶ: ಕನ್ನಡದಲ್ಲೇ ಭಾಷಣ ಶುರುಮಾಡಿದ ಸ್ಮೃತಿ ಇರಾನಿ ಹೇಳಿದ್ದಿಷ್ಟು!

ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಬಗ್ಗೆ ಜನತೆಗೆ ತಿಳಿಸಲು ಜನಸ್ಪಂದನಾ ಸಮಾವೇಶ ನಡೆಸಲಾಗಿದೆ. ಸಿದ್ಧರಾಮಯ್ಯ ಅವರು ಸಮಾವೇಶ ಮಾಡಿದ ಕೂಡಲೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅಂತಹ ನೂರಾರು ಸಮಾವೇಶಗಳನ್ನು ಬಿಜೆಪಿ ಮಾಡಿದೆ. ಇನ್ನುಮುಂದೆ ಕೂಡ ಸಮಾವೇಶ ಮಾಡಲಿದ್ದೇವೆ. ಪ್ರಧಾನಿಯವರ ಮಂಗಳೂರು ಸಮಾವೇಶ ಭಾರಿ ಯಶಸ್ವಿಯಾಗಿದೆ ಎಂದರು.

 ನಿನ್ನೆ(ಸೆ.09) ಶಿವಮೊಗ್ಗದ ಹಿಂದೂ ಮಹಾಸಭಾ ವಿಸರ್ಜನಾ ಮೆರವಣಿಗೆ ಹಿಂದೆಂದೂ ಕಾಣದಂತಹ ಅಪಾರ ಜನಸ್ತೋಮ ಭಾಗವಹಿಸುವುದರ ಮೂಲಕ ಯಶಸ್ವಿಯಾಗಿದೆ. ಶಾಂತಿಯುತವಾಗಿ ಮೆರವಣಿಗೆ ಪೂರ್ಣಗೊಂಡಿದ್ದು, ಯಾವುದೇ ಗೊಂದಲ ಆಗದಂತೆ ಅದ್ಧೂರಿಯಾಗಿ ಸಂಭ್ರಮದಿಂದ ಎಲ್ಲಾ ವಯಸ್ಸಿನವರೂ ಭಾಗವಹಿಸುವುದರ ಮೂಲಕ ದಾಖಲೆ ನಿರ್ಮಿಸಿದೆ ಎಂದು ಹೇಳಿದರು.

ಬಿಜೆಪಿ ಜನಸ್ಪಂದನ ಸಮಾವೇಶ: ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಘೋಷಿಸಿದ ಸಿಎಂ

ನಿನ್ನೆಯ ವೈಭವ ಮತ್ತು ಅಷ್ಟು ದೊಡ್ಡ ಜನಸಂಖ್ಯೆ ಶಿವಮೊಗ್ಗದಲ್ಲೇ ಹುಟ್ಟಿ ಬೆಳೆದ ನಾನು ಇದುವರೆಗೂ ಕಂಡಿಲ್ಲ. ಶಿವಮೊಗ್ಗದಲ್ಲಿ ಇನ್ನುಮುಂದೆಯೂ ಕೂಡ ಎಲ್ಲಾ ಸಮಾರಂಭಗಳು ಶಾಂತಿಯುತವಾಗಿ ನಡೆಯಲಿವೆ ಎಂಬ ಆಶಯ ವ್ಯಕ್ತಪಡಿಸಿದರು.

ಕೆಲವು ಕಿಡಿಗೇಡಿಗಳ ಕೃತ್ಯಗಳಿಗೆ ಸರ್ಕಾರ ತಕ್ಕ ಪಾಠ ಕಲಿಸಿದೆ. ಹಿರಿಯರು ಕೂಡ ಅವರಿಗೆ ಬುದ್ಧಿ ಹೇಳಿದ್ದಾರೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದರು.

click me!