ಕರ್ನಾಟಕ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಾಲ್ಗೊಂಡಿದ್ದು, ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ರು. ಕನ್ನಡಲ್ಲದೇ ಭಾಷಣ ಶುರುಮಾಡಿದ ಸ್ಮೃತಿ ಇರಾನಿ ಹೇಳಿದ್ದಿಷ್ಟು
ದೊಡ್ಡಬಳ್ಳಾಪುರ, (ಸೆಪ್ಟೆಂಬರ್. 10): ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶ ಮಾಡುವ ಮೂಲಕ ಮುಂದಿನ ಚುನಾವಣೆ ತಯಾರಿಗೆ ಕರೆ ಕೊಟ್ಟಿದೆ. ಇನ್ನು ಈ ಸಮಾವೇಶದಲ್ಲಿ ಕೇಂದ್ರದಿಂದ ಸಚಿವೆ ಸ್ಮೃತಿ ಇರಾನಿ ಮಾತ್ರ ಭಾವಹಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾಷಣದ ಪ್ರಾರಂಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕನ್ನಡದಲ್ಲೇ ಮಾತು ಆರಂಭಿಸಿ, ಶಿವಕುಮಾರ ಸ್ವಾಮೀಜಿ, ಭೋಗನಂದೀಶ್ವರ ಸ್ವಾಮಿ, ಘಾಟಿ ಸುಬ್ರಮಣ್ಯ ಸ್ವಾಮಿ, ಸರ್. ಎಂ. ವಿಶ್ವೇಶ್ವರಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರವೀಣ್ ನೆಟ್ಟಾರು ಸ್ಮರಿಸಿದರು. ಬಳಿಕ ಹಿಂದಿಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅರಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಭೇದ-ಭಾವ ಮಾಡಿದ್ದಾರೆ. ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. 7 ವರ್ಷಗಳಲ್ಲಿ ಕೇಂದ್ರದಿಂದ ಹಲವು ಹೆದ್ದಾರಿಗಳ ನಿರ್ಮಾಣ ಮಾಡಲಾಗಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. ದೇಶದಲ್ಲೇ ಎನ್ಇಪಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿದರು. .
ಬಿಜೆಪಿ ಜನಸ್ಪಂದನ ಸಮಾವೇಶ: ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಘೋಷಿಸಿದ ಸಿಎಂ
55 ಸಾವಿರ ಕೋಟಿ ಕೊಡುವ ಉದ್ದೇಶ
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಜನರಿಗೆ ತಾರತಮ್ಯ ಮಾಡಿದೆ. ಕಾಂಗ್ರೆಸ್ ಪಕ್ಷಪಾತದ ಸರ್ಕಾರ ಆಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಕರ್ನಾಟಕಕ್ಕೆ ಹಣಕಾಸು ಆಯೋಗದ ಮೂಲಕ ಕೊಟ್ಟಿದ್ದು 2 ಸಾವಿರ ಕೋಟಿ ರೂ ಮಾತ್ರವೇ. ಅದೇ ನಮ್ಮದು ಬಿಜೆಪಿ ಡಬಲ್ ಇಂಜಿನ್ ಸರ್ಕಾರವಿದೆ. ನಮ್ಮ ಕೇಂದ್ರ ಸರ್ಕಾರ ಈಗ ರಾಜ್ಯಕ್ಕೆ ಹಣಕಾಸು ಆಯೋಗದಿಂದ 5 ಸಾವಿರ ಕೋಟಿ ರೂ ಅನುದಾನ ಕೊಟ್ಟಿದೆ. ಕರ್ನಾಟಕದಲ್ಲಿ ರಸ್ತೆ ಮಾಡಲು ಕೇಂದ್ರ ಸರ್ಕಾರ 2022 ರಲ್ಲಿ ರಸ್ತೆ, ಹೈವೇ ಅಭಿವೃದ್ಧಿಗೆ 9,700 ಕೋಟಿ ರೂ ಅನುದಾನ ಕೊಟ್ಟಿದೆ. ಕಾಂಗ್ರೆಸ್ ಇದ್ದಾಗ ಅಲ್ಪ ಅನುದಾನ ಬರುತ್ತಿತ್ತು. ಕಳೆದ ಏಳು ವರ್ಷಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ 37 ಸಾವಿರ ಕೋಟಿ ರೂ ಕೊಡಲಾಗಿದೆ. ಭಾರತ್ ಮಾಲಾ ಯೋಜನೆ ಮೂಲಕ 55 ಸಾವಿರ ಕೋಟಿ ಕೊಡುವ ಉದ್ದೇಶ ಹೊಂದಿದೆ ಎಂದರು.
ನಮ್ಮ ಸರ್ಕಾರ ಬಂದ ನಂತರ 1600 ಕಿ.ಮೀ. ರೈಲ್ವೇ ಮಾರ್ಗ ನಿರ್ಮಾಣಗೊಂಡಿದೆ. 30 ವರ್ಷದ ಬಳಿಕ ಶಿಕ್ಷಣ ನೀತಿ ಬದಲಾಗಿದೆ. ನೂತನ ಶಿಕ್ಷಣ ನೀತಿ ಜಾರಿಯಲ್ಲಿ ಕರ್ನಾಟಕ ಮೊದಲ ರಾಜ್ಯ, ಇದಕ್ಕಾಗಿ ಬೊಮ್ಮಾಯಿ ಸರ್ಕಾರವನ್ನು ಅಭಿನಂದಿಸುವೆ. ಸಬ್ ಅರ್ಬನ್ ರೈಲು ಯೋಜನೆಗೆ 15 ಸಾವಿರ ಕೋಟಿ ಅನುದಾನ ಕೊಟ್ಟಿದ್ದು ಪ್ರಧಾನಿ ಮೋದಿ. ರೇಷ್ಮೆ ಉತ್ಪಾದನೆ ಹೆಚ್ಚಾಗಿರುವುದಕ್ಕೆ ರೇಷ್ಮೆ ವಲಯಕ್ಕೆ ಕೇಂದ್ರ ಕೊಟ್ಟ ಪ್ರೋತ್ಸಾಹ ಕಾರಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರೇಷ್ಮೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಆತ್ಮನಿರ್ಭರ್ ಯೋಜನೆಯಡಿ ರೇಷ್ಮೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡ್ತಿದ್ದಾರೆ. ರಾಹುಲ್ ಗಾಂಧಿಗೆ ನಾನು ಕೇಳಲು ಬಯಸುತ್ತೇನೆ. ದೇಶವನ್ನು ಇಬ್ಭಾಗ ಯಾರು ಮಾಡಿದ್ದಾರೆ ಮೊದಲು ಹೇಳಲಿ ಎಂದು ಗಾಂಧಿ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಜೋಡೋ ವಿರುದ್ಧ ಸ್ಮೃತಿ ಇರಾನಿ ಕಿಡಿ
ಇನ್ನು ಇದೇ ವೇಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಬಗ್ಗೆ ಮಾತನಾಡಿ, ರಾಹುಲ್ ಗಾಂಧಿ ಭಾರತ್ ಜೋಡಿಸ್ತಿಲ್ಲ, ಭಾರತವನ್ನು ಮುರಿಯುವ ಯಾತ್ರೆ ಮಾಡ್ತಿದ್ದಾರೆ. ರಾಹುಲ್ ನೇತೃತ್ವದಲ್ಲಿ ಸರ್ದಾರ್ ಪಟೇಲರ ಭಾವಚಿತ್ರವನ್ನೂ ಅವರ ಯಾತ್ರೆಯಲ್ಲಿ ಹಾಕಿಲ್ಲ ಎಂದು ಕಿಡಿಕಾರಿದರು.
ಕನ್ಯಾಕುಮಾರಿಯಿಂದ ಭಾರತ್ ಜೋಡೋ ಮಾಡಿದ್ರು, ವಿವೇಕಾನಂದರನ್ನು ಸ್ಮರಿಸಲಿಲ್ಲ. ಭಾರತದ ವಿರುದ್ಧ ಘೋಷಣೆ ಕೂಗಿದವರನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಸಿಕೊಂಡಿದ್ದಾರೆ. ಇದು ರಾಷ್ಟ್ರದ್ರೋಹಕ್ಕೆ ಸಮನಾದ ಕೆಲಸ. ಭಾರತ್ ವಿಭಜಿಸುವ ಹೇಳಿಕೆ ಕೊಟ್ಟವರಿಗೆ ಬೆಂಬಲ ಕೊಡೋದು ರಾಷ್ಟ್ರದ್ರೋಹ. ಈ ರಾಷ್ಟ್ರದ್ರೋಹದ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ಅವರ ನಾಯಕರಿಗೆ ಪ್ರಶ್ನಿಸಬೇಕಿದೆ ಎಂದರು.
ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಗಾಂಧಿ ಕುಟುಂಬದ ಚಮಚಾಗಳು ಮಹಿಳಾ ರಾಷ್ಟ್ರ ಪತಿ ವಿರುದ್ಧ ಟೀಕೆ, ನಿಂದನೆ ಮಾಡಿದ್ರು ಎಂದು ವಾಗ್ದಾಳಿ ನಡೆಸಿದರು.