
ಮಂಡ್ಯ, (ಜುಲೈ.09): ಕೆಆರ್ಎಸ್ ಬಿರುಕು ಬಿಟ್ಟಿರುವ ಹೇಳಿಕೆ ಮತ್ತು ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದಳಪತಿಗಳು ಹಾಗೂ ಸ್ವಾಭಿಮಾನಿಗಳ ನಡುವಿನ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದೆ.
ಇದೀಗ ಸುಮಲತಾ ವಿರುದ್ಧ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ಗೌಡ ಪ್ರವೇಶ ಮಾಡಿದ್ದು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ವಿರುದ್ಧ ಹರಿಹಾಯ್ದರು.
ಸುಮಲತಾರ ಹಾದಿಯಲ್ಲೇ ಹೋರಾಟ ಮಾಡುತ್ತೇನೆ ಎಂದ ಸಚಿವ
ಯಾರ್ ರೀ ಅವನು, ಯಾವ ರಾಕ್‌ಲೈನ್ ವೆಂಕಟೇಶ್? ಮಂಡ್ಯಕ್ಕೂ ರಾಕ್‌ಲೈನ್ ವೆಂಕಟೇಶ್ಗೂ ಏನ್ ಸಂಬಂಧ? ನೀನ್ ಯಾವ ಊರ್ ದಾಸಯ್ಯ' ಎಂದು ಕೆಂಡಕಾರಿದರು.
ನಿಂದು ಎಲ್ಲಿದೆ ಅಲ್ಲಿ ಇಟ್ಟುಕೋ, ಮಂಡ್ಯ ರಾಜಕೀಯಕ್ಕೆ ನೀನು ಬರಬೇಡ. ಮಂಡ್ಯ ರಾಜಕೀಯದ ಬಗ್ಗೆ ಮಾತನಾಡಲು ನೀನ್ಯಾರು? ಬಾಯಿಗೆ ಬಂದ ಹಾಗೆ ಮಾತನಾಡಿದರೆ ನಾವು ಸುಮ್ಮನಿರಲ್ಲ. ನಾವೇನು ಕೈಕಟ್ಟಿ ಕೂರೋರು ಅಲ್ಲ. ನಾವು ಕರ್ನಾಟಕದವರಲ್ಲವೇ ಎಲ್ಲರನ್ನೂ ಫ್ರೀಯಾಗಿ ಬಿಡ್ತೇವೆ ಎಂದು ಪರೋಕ್ಷವಾಗಿ ರಾಕ್‌ಲೈನ್ ವೆಂಕಟೇಶ್ ಕರ್ನಾಟಕದವರಲ್ಲ ಎಂದು ವಾಗ್ದಾಳಿ ನಡೆಸಿದರು.
ಅಂಬಿ ಕಾಲದಲ್ಲೇ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಅಭಿಷೇಕ್ ಅಂಬರೀಶ್ ಉತ್ತರ!
ಸಂಸದೆ ಸುಮಲತಾರಿಗೆ ಯಾರೋ ಕೀ ಕೊಡ್ತಾ ಇದ್ದಾರೆ. ನಮ್ಮಿಬ್ಬರಲ್ಲಿ ತಂದಿಟ್ಟು ತಮಾಷೆ ಮಾಡುವ ಮನೆಹಾಳರೇ ಇಲ್ಲಿ ಹೆಚ್ಚಾಗಿದ್ದಾರೆ. ಅವರು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿಯೇ ಇರ್ತಾರೆ. ಎಂಪಿ ಚುನಾವಣೆ ವೇಳೆ ಯಾರು ಹೆಂಗೆ ಕೀ ಕೊಟ್ಟಿದ್ರು, ಆಗ ಕೀ ಕೊಟ್ಟವರೇ ಇದರಲ್ಲಿ ಪಾತ್ರಧಾರಿಗಳಾಗಿದ್ದಾರೆ ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿಗೆ ಟಾಂಗ್ ಕೊಟ್ಟರು.
ಕುಮಾರಸ್ವಾಮಿ ಬಗ್ಗೆ ಹಿರಿಯ ನಟ ದೊಡ್ಡಣ್ಣ ಹೇಳಿಕೆಗೆ ಸುರೇಶ್ ಗೌಡ ಪ್ರತಿಕ್ರಿಯಿಸಿ, ದೊಡ್ಡಣ್ಣ ಸ್ವತಃ ಮಾತನಾಡಿದ್ದಾರೋ ಅಥವಾ ಅವರನ್ನು ಯಾರಾದಾರೂ ಮಾತಾಡಿಸಿದ್ದಾರೋ ಗೊತ್ತಿಲ್ಲ. ಹೀಗೊಂದು ಡೈಲಾಗ್ ಹೊಡಿ ಎಂದು ಹೊಡೆಸಿರಬಹುದು. ಡೈಲಾಗ್ ಹೊಡಿ ಅಂದ್ರು ಹೊಡೆದುಬಿಟ್ಟೆ ಅಂತ ಹೇಳಬಹುದು. ಅವರು ಮೇರು ಕಲಾವಿದರು, ಇಷ್ಟು ದಿನ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.
'ಅಂಬಿ ಸ್ಮಾರಕ ವಿಚಾರಕ್ಕೆ ಮನವಿ ಪತ್ರ ಕೊಡೋಕೆ ಹೋದ್ರೆ ಮುಖಕ್ಕೆ ಬಿಸಾಡಿದ್ರು ಎಚ್‌ಡಿಕೆ'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.