ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯುವ ಎಲ್ಲ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ (ಜು.5): ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯುವ ಎಲ್ಲ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ(CM Siddaramaiah) ಸುದೀರ್ಘ ರಾಜಕಾರಣದಲ್ಲಿ ಭ್ರಷ್ಟಾಚಾರ ಮಾಡಿದ್ರೂ ಸಿಲುಕಿಹಾಕಿಕೊಳ್ಳದೇ ಇರೋದನ್ನ ಕಲಿತಿದ್ದಾರೆ. ಅದಕ್ಕೆ ಅವರು ರಾಜಕೀಯ ಅನುಭವ ಬಳಸಿಕೊಂಡಿದ್ದು, ಜನರ ಕಲ್ಯಾಣಕ್ಕಾಗಿ ಅಲ್ಲ. ಸಿದ್ದರಾಮಯ್ಯ ಲೋಕಾಯುಕ್ತ ಸರ್ವನಾಶ ಮಾಡಿದ ದಿನದಿಂದ ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಅದೇ ರೀತಿ ಕಾನೂನಿನ ಒಳಸುಳಿವು ಬಳಸಿಕೊಂಡು ಅಧಿಕಾರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಬಿಐ ತನಿಖೆಗೆ ಬಿಜೆಪಿ ಪಟ್ಟು..ಸಿದ್ದರಾಮಯ್ಯ ಹೇಳಿದ 60 ಕೋಟಿಯ ರಹಸ್ಯವೇನು ?
ಸಿಎಂ ಸಿದ್ದರಾಮಯ್ಯ ಮತ್ತು ಅವರ ಪಟಾಲಂ ಭ್ರಷ್ಟಾಚಾರದಲ್ಲಿ ಸಮಾನ ಪಾಲುದಾರರು. ಭೈರತಿ ಸುರೇಶ್ ಯಾವ ತರಹ ಭ್ರಷ್ಟಾಚಾರ ಮಾಡಿದ್ದಾನೆ ಅನ್ನೋದನ್ನ ವಿಶ್ವನಾಥ್ ಹೇಳಿದ್ದಾರೆ. ಸಿದ್ದರಾಮಯ್ಯ ಯಾವ ರೀತಿ ಭ್ರಷ್ಟ ಅನ್ನೋದನ್ನ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡಲು ವಿರೋಧ ಪಕ್ಷ ಸೋತಿದೆ. ಸುಮ್ನೆ ಕಾರ್ಯಕಾರಣಿ ಮಾಡಿದ್ದಾರೆ, ವಿಜಯೇಂದ್ರ(BY Vijayendra) ಸ್ಟೇಟಮೆಂಟ್ ನೋಡಿದ್ರೆ ಗೊತ್ತಾಗುತ್ತೆ. ಮುಡಾ ಹಗರಣ(MUDA scam)ದಲ್ಲಿ ಬಿಜೆಪಿ(Karnataka BJP) ಪಾಲುದಾರರು. ಹೀಗಾಗಿ ಬಿಜೆಪಿ ಇದನ್ನು ತಾರ್ಕಿಕ ಅಂತ್ಯಕ್ಕೆ ತಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದರು.
ಬಗೆದಷ್ಟೂ ಬಯಲಾಗ್ತಿದೆ ಮುಡಾ 50-50 ಹಗರಣ: ಸಿಎಂ ಪತ್ನಿ ಬಳಿಕ , ಆಪ್ತನಿಗೂ ಮುಡಾ ಸೈಟ್ ಹಂಚಿಕೆ!
ಇನ್ನು ಜೆಡಿಎಸ್ ನಾಯಕರು ಯಾವಾಗ ಕಾಂಗ್ರೆಸ್ ಸೇರುತ್ತೇವೆ ಅಂತಾ ಕಾಯುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಎರಡೂ ಪಕ್ಷಗಳೂ ಹೋರಾಟ ಮಾಡೊಲ್ಲ. ನಾವು ಮುಂದಿನ ಹತ್ತನೇ ತಾರೀಕು ಮೈಸೂರಿನ ಮುಡಾ(MUDA)ಕ್ಕೆ ಮುತ್ತಿಗೆ ಹಾಕುತ್ತೇವೆ. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿಬೇಕು. ಹೈಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.