ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಜುಲೈ 8 ಹಾಗೂ 9ರಂದು 28 ಇಲಾಖೆಗಳ ಕಾರ್ಯವೈಖರಿ ಕುರಿತು ಜಿಲ್ಲಾಡಳಿತಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಬೆಂಗಳೂರು (ಜು.05): ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಜುಲೈ 8 ಹಾಗೂ 9ರಂದು 28 ಇಲಾಖೆಗಳ ಕಾರ್ಯವೈಖರಿ ಕುರಿತು ಜಿಲ್ಲಾಡಳಿತಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಪ್ರಮುಖ ಅಧಿಕಾರಿ ಗಳೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಎರಡು ದಿನಗಳ ಕಾಲ ಜಿಲ್ಲಾ ಆಡಳಿತಗಳು ವಿಶೇಷ ಸಭೆಗಳನ್ನು ಬದಿಗೊತ್ತಿ ಮುಖ್ಯಮಂತ್ರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
2000 ಕೋಟಿ ರು. ಕಾಮಗಾರಿಗೆ ಒಪ್ಪಿಗೆ: ಗುರುವಾರ ನಡೆದ ಸಂಪುಟ ಸಭೆಯ ನಿರ್ಧಾರಗಳನ್ನು ತಿಳಿಸಿದ ಸಚಿವ ಎಚ್.ಕೆ.ಪಾಟೀಲ್, 10 ಮಹಾನಗರಗಳ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 2000 ಕೋಟಿ ರು.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದು ಅನುಷ್ಠಾನಗೊಳಿಸಲು ಸಂಪುಟ ಅನುಮೋದನೆ ನೀಡಿದೆ. ಯೋಜನಾ ಅಂದಾಜಿನಲ್ಲಿ ರಾಜ್ಯ ಸರ್ಕಾರದ ಪಾಲಿನ ಶೇ.7.5ರಷ್ಟು ಮೊತ್ತ 150 ಕೋಟಿ ರು., ಮಹಾನಗರ ಪಾಲಿಕೆಯ ಸ್ವಂತ ಸಂಪನ್ಮೂಲದಿಂದ 150 ಕೋಟಿ ರು. ಹಾಗೂ ಯುಐಡಿಎಫ್‌ನಿಂದ ಸಾಲದ ರೂಪದಲ್ಲಿ ಶೇ.85 ರಷ್ಟು (1700 ಕೋಟಿ ರು.) ಪಡೆಯಲಾಗುವುದು. ಈ ಹಣವನ್ನು 2024-25ನೇ ಸಾಲಿನಿಂದ 2026-27ನೇ ವರ್ಷಗಳ ಅವಧಿಯಲ್ಲಿ ಸಾಲಿನವರೆಗೆ ಪೌರಾಡಳಿತ ಮೂರು ಅನುಷ್ಠಾನಗೊಳಿಸಲಾಗುವುದು.
ಲೈಂಗಿಕ ಕಿರುಕುಳ ಕೇಸ್: ಜು.15ಕ್ಕೆ ಹಾಜರಾಗಲು ಬಿ.ಎಸ್.ಯಡಿಯೂರಪ್ಪಗೆ ಸಮನ್ಸ್
ಇಂದಿರಾ ಕ್ಯಾಂಟೀನ್ ಹಾಗೂ ಕಿಚನ್‌ನಲ್ಲಿ ಹೊಸ ಮೆನು ಪರಿಚಯಿಸಿದ್ದು, ಇದಕ್ಕೆ ಅಗತ್ಯವಿರುವ ಉಪಕರಣ ಹಾಗೂ ಪೀಠೋಪಕರಣ ಖರೀದಿಗೆ 84 ಕೋಟಿ ರು. ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ. ಟೆಂಡರ್ ವಹಿಸಿಕೊಂಡವರಿಗೆ ಆಹಾರ ನೀಡಲು ಹಣ ನೀಡುತ್ತೇವೆ. ಜತೆಗೆ ಉಪಕರಣಗಳನ್ನೂ ಸರ್ಕಾರದಿಂದಲೇ ನೀಡುತ್ತೇವೆ ಎಂದು ಎಚ್.ಕೆ.ಪಾಟೀಲ್ ಸ್ಪಷ್ಟನೆ ನೀಡಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಸ್ತಾಪಿಸಿದ ಕೆಪಿಎಸ್ಸಿ ವಾರ್ಷಿಕ ವರದಿಯನ್ನು ಮಂಡಿಸಲು ಒಪ್ಪಿಗೆ ನೀಡಲಾಗಿದೆ. ಐದನೇ ಹಣಕಾಸು ಆಯೋಗದ ಅವಧಿಯನ್ನು ಒಂದೂವರೆ ವರ್ಷದ ಕಾಲ ವಿಸ್ತರಣೆ ಮಾಡಲು, ಪಶು ಸಂಗೋಪನೆ ಇಲಾಖೆ ವ್ಯಾಪ್ತಿಯ ಒಳನಾಡು ಕೆರೆ, ಸಾಕಾಣಿಕೆ ಟೆಂಡ ಜಲಾಶಯಗಳಲ್ಲಿ ಮೀನು ಮುಂದುವರಿಕೆಗೆ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲು ಸಂಪುಟ ಅನುಮೋದನೆ ನೀಡಿದೆ.