Assembly Poll 2023: ವಿಧಾನಸಭೆ ಚುನಾವಣೆಗೆ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

By Suvarna News  |  First Published Dec 20, 2021, 10:17 PM IST

*ಕರ್ನಾಟಕ ವಿಧಾನಸಭಾ ಚುನಾವಣೆ 2023ಗೆ ಕೆಆರ್‌ಎಸ್ ಪಕ್ಷ ಸಜ್ಜು
*ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ ಕೆಆರ್‌ಎಸ್
* ಸ್ಪರ್ಧಾಕಾಂಕ್ಷಿಗಳ ಸಂದರ್ಶನ ನಡೆಸಿ ಪಟ್ಟಿ ಫೈನಲ್


ಬೆಂಗಳೂರು, (ಡಿ.20): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇದೆ. ಆಗಲೇ ರಾಜಕೀಯ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿವೆ.

ಇನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(Karnataka Rashtra Samithi(KRS) 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Election 2023) ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

Tap to resize

Latest Videos

undefined

Belagavi Politics: ಬೆಳಗಾವಿಯಲ್ಲಿ ಆಪರೇಷನ್ ಹಸ್ತ, ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ, ಮುಹೂರ್ತ ಫಿಕ್ಸ್

ಇಂದು(ಸೋಮವಾರ) ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ (Ravi Krishna Reddy) ಅವರು ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ಅಲ್ಲದೇ ಅಭ್ಯರ್ಥಿಗಳ ಪರಿಚಯ ಮಾಡಿಕೊಟ್ಟರು.

ಇದಕ್ಕೂ ಮೊದಲು ಪೂರ್ವಭಾವಿಯಾಗಿ ಇದೇ  ಡಿಸೆಂಬರ್ 4, 5, 11 ಮತ್ತು 12ನೇ ತಾರೀಕಿನಂದು ಸ್ಪರ್ಧಾಕಾಂಕ್ಷಿಗಳ ಸಂದರ್ಶನವನ್ನು ಪಕ್ಷದ ರಾಜ್ಯ ಸಮಿತಿಯ ಪದಾಧಿಕಾರಿಗಳು ನಡೆಸಿದ್ದರು.

 ಒಟ್ಟು 123 ಆಕಾಂಕ್ಷಿಗಳು ಈ ಸಂದರ್ಶನದಲ್ಲಿ ಭಾಗಿಯಾಗಲು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 70 ಆಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಈ ಪ್ರಕ್ರಿಯೆಯಲ್ಲಿ ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದಲ್ಲಿ ದೃಢವಾದ ನಂಬಿಕೆ ಇಟ್ಟು, ಕೆ.ಆರ್.ಎಸ್ ಪಕ್ಷದ ತತ್ವ, ನೀತಿ ಮತ್ತು ನಿಯಮಗಳ ಅಡಿಯಲ್ಲಿ ಜನಪರವಾಗಿ ಕೆಲಸ ಮಾಡುವ ಹಿನ್ನೆಲೆ ಮತ್ತು ಮನಸ್ಥಿತಿಯ 50 ಸಂಭಾವ್ಯ ಅಭ್ಯರ್ಥಿಗಳು ಮೊದಲ ಹಂತದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ಸುಮಾರು 34 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಯಿತು. 

ಉಳಿದ ಕ್ಷೇತ್ರಗಳಿಗೂ ಇದೇ ರೀತಿಯ ಪ್ರಕ್ರಿಯೆಯನ್ನು ಹಮ್ಮಿಕೊಂಡು ಸಂಭಾವ್ಯ ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡುತ್ತ ಹೋಗಲಾಗುವುದು ಎಂದು ರವಿ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಕಳೆದ ಎರಡು ಮೂರು ದಶಕಗಳಿಂದ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಜೀವನವನ್ನು ಹಾಳು ಮಾಡಿರುವ ಮತ್ತು ವಿಕೃತಗೊಳಿಸಿರುವ ಭ್ರಷ್ಟ J.C.B ಪಕ್ಷಗಳಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಸಶಕ್ತ ಮತ್ತು ಪ್ರಬಲ ಪರ್ಯಾಯವನ್ನು ಕಟ್ಟುವ ನಿಟ್ಟಿನಲ್ಲಿ KRS ಪಕ್ಷ ದೃಢ ಸಂಕಲ್ಪದಿಂದ ಹೆಜ್ಜೆ ಇಡುತ್ತಿದೆ.

ಇದೇ ಸಮಯದಲ್ಲಿ, J.C.B.(JDS, Congress, BJP) ಯೇತರ ಸಮಾನಮನಸ್ಕ ಪಕ್ಷಗಳ ಜೊತೆ ಸೇರಿ ಕೆಲಸ ಮಾಡುವ ಮತ್ತು ಜೊತೆಗೂಡಿ ಪರ್ಯಾಯವನ್ನು ಕಟ್ಟುವ ಕೆಲಸವನ್ನೂ ಸಹ ಪಕ್ಷ ಮುಂದುವರೆಸುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಜನವರಿ ತಿಂಗಳಿನಲ್ಲಿ ಸಮಾನಮನಸ್ಕ ಪಕ್ಷ ಮತ್ತು ಸಂಘಟನೆಗಳ ಜೊತೆಗೆ ದುಂಡು ಮೇಜಿನ ಸಭೆಯನ್ನು ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಆಮ್‌ ಆದ್ಮಿ ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸುವ ಹೊಣೆ ಹೊತ್ತು ಮಧ್ಯದಲ್ಲೇ ಆ ಪಕ್ಷದಿಂದ ಹೊರ ಬಂದ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ  ಅವರು 2019ರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ಹುಟ್ಟುಹಾಕಿದ್ದಾರೆ.

ಬಡತನ ನಿವಾರಣೆ, ಉದ್ಯೋಗ ಕಲ್ಪಿಸುವುದು, ಮದ್ಯ ನಿಷೇಧ, ಭ್ರಷ್ಟಾಚಾರ ನಿವಾರಣೆ ಮೊದಲಾದ ಗುರಿಗಳನ್ನು ತಮ್ಮ ಪಕ್ಷ ಹೊಂದಿದೆ. ಅದರಂತೆ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ  ಭ್ರಷ್ಟಾಚಾರ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದೆ. ಫೇಸ್‌ಬುಕ್‌ ಲೈವ್ ಮೂಲಕ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಗಳನ್ನ ಸಮಾಜಕ್ಕೆ ತೋರಿಸುವ ಕೆಲಸ ಮಾಡುತ್ತಿದೆ.

ಅಲ್ಲದೇ ಕೆಆರ್‌ಎಸ್ ಪಕ್ಷವು ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲೂ ಸ್ಪರ್ಧೆ ಮಾಡಿತ್ತು. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಸ್ಪರ್ಧೆ ಮಾಡುತ್ತಿದೆ.

click me!