AICCಗೆ ಮೇಜರ್ ಸರ್ಜರಿ: ಕರ್ನಾಟಕದ ನಾಯಕರಿಗೆ ಭರ್ಜರಿ..!

By Suvarna NewsFirst Published Sep 11, 2020, 11:14 PM IST
Highlights

 23 ಮಂದಿ ಕಾಂಗ್ರೆಸ್ ಹಿರಿಯ ನಾಯಕರು ಸೇರಿ ಬರೆದ ಪತ್ರದ ಬೆನ್ನಲ್ಲೇ ಎಐಸಿಸಿ ಹಲವು ವಿಭಾಗಗಳು ಹಾಗೂ ಸಂಘಟನಾ ಸಮಿತಿಗಳಿಗೆ ಮೇಜರ್ ಸರ್ಜರಿ ಮಾಡಿದೆ.

ನವದೆಹಲಿ, (ಸೆ.11): ಕರ್ನಾಟಕ ಕಾಂಗ್ರೆಸ್ ಪಾಲಿಗೆ ಕಬೀ ಖುಷಿ..ಕಬೀ ಗಂ..! ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ, ಪಕ್ಷ ಸಂಘಟಿಸುವವರಿಗೆ ಆದ್ಯತೆ ಸಿಗಬೇಕು ಎನ್ನುವ ಕೂಗಿಗೆ  ಕೊನೆಗೂ ಹೈಕಮಾಂಡ್ ಮಣಿದಿದೆ.

"

ಇಡೀ ಎಐಸಿಸಿ ಪುನರ್ ರಚನೆ ಮಾಡಿ ಹೊಸ ಪದಾಧಿಕಾರಿಗಳನ್ನು ನೇಮಿಸಿದೆ. ಆದ್ರೆ ರಾಜ್ಯದ ಪ್ರಮುಖ ನಾಯರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ ಅವರಿಗೆ ಮಣೆ ಹಾಕದಿರುವುದು ರಾಜ್ಯ ನಾಯಕರಲ್ಲಿ ಇರಿಸು- ಮುರಿಸು ಉಂಟಾಗಿದೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ: ಹೊಸಬರಿಗೆ ರಾಜ್ಯದ ಕೈ ಹೊಣೆ..!

ಕೃಷ್ಣಭೈರೇಗೌಡರಿಗೂ ಸ್ಥಾನ
ಈ ಬಾರಿ ಎಐಸಿಸಿ ಪುನರ್ ರಚನೆಯಲ್ಲಿ ಕರ್ನಾಟಕದ ಹಲವರಿಗೆ ಸ್ಥಾನ ಸಿಕ್ಕಿದೆ. ಕೆಪಿಸಿಸಿ ಅಧ್ಯಕ್ಷರ ರೇಸ್ ನಲ್ಲಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಮಹಾರಾಷ್ಟ್ರ ಉಸ್ತುವಾರಿ ಕೊಡಲಾಗಿದೆ. ಅದೇ ರೀತಿ ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಗೋವಾ, ತಮಿಳುನಾಡು ಹಾಗು ಪುದುಚೇರಿ ಉಸ್ತುವಾರಿ ನೀಡಲಾಗಿದೆ. ಇನ್ನು ಎಐಸಿಸಿ ಕೇಂದ್ರ ಚುನಾವಣಾ ಸಮಿತಿಗೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರನ್ನು ಸದಸ್ಯರಾಗಿ ಮಾಡಲಾಗಿದೆ.

ಉಸ್ತುವಾರಿಗಳು, ಪ್ರಧಾನ ಕಾರ್ಯದರ್ಶಿ ಬದಲು
ವಾಯ್ಸ್ : ಪ್ರಿಯಾಂಕಾ ಗಾಂಧಿ ಸೇರಿ 9 ಮಂದಿಯನ್ನು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ. ವಿವಿಧ ರಾಜ್ಯಗಳ ಉಸ್ತುವಾರಿಗಳನ್ನು ಬದಲು ಮಾಡಿ 17 ಮಂದಿ ಹೊಸಬರಿಗೆ ಹೊಣೆ ಹೊರಿಸಲಾಗಿದೆ. ಇದರ ಜೊತೆಯಲ್ಲಿ ಕರ್ನಾಟಕದ ಬಹುತೇಕ ನಾಯಕರ ಒತ್ತಾಯದಂತೆ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಬದಲಾಯಿಸಿ ರಣದೀಪ್ ಸಿಂಗ್ ಸುರ್ಜಿವಾಲ ಅವರನ್ನು ನೇಮಕ ಮಾಡಲಾಗಿದೆ. 

ರಾಷ್ಟ್ರೀಯ ಕಾರ್ಯಕಾರಿ ಸಮಿತಿ
ಇನ್ನು ಸಿಡಬ್ಲ್ಯೂಸಿ ಯಲ್ಲಿ ಹಲವು ಬದಲಾವಣೆಗಳು ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ನ್ಯಾಷನಲ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರಿಗೆ ಸ್ಥಾನ ನೀಡಲಾಗಿದೆ.

ಖರ್ಗೆ ವಿಪಕ್ಷ ನಾಯಕ?
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿರಾಮ ನೀಡಿದ್ದರೂ ಮುಂದಿನ ವರ್ಷ ಗುಲಾಮ್ ನಬಿ ಅಜಾದ್ ಅವರಿಂದ ಖಾಲಿಯಾಗಲಿರುವ ರಾಜ್ಯಸಭಾ ವಿಪಕ್ಷ ನಾಯಕರ ಹುದ್ದೆ ಖರ್ಗೆ ಅವರಿಗೆ ಲಭಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಇನ್ನು 23 ಮಂದಿ ಕಾಂಗ್ರೆಸ್ ಹಿರಿಯ ನಾಯಕರು ಸೇರಿ ಬರೆದ ಪತ್ರದ ಫಲಿತಾಂಶ ಈ ಬದಲಾವಣೆಗಳು ಎನ್ನಲಾಗುತ್ತಿದೆ. ಆದರೆ ಪತ್ರ ಬರೆದು ಧ್ವನಿ ಎತ್ತಿದ್ದ ಗುಲಾಮ್ ನಬಿ ಅಜಾದ್ ಸೇರಿ ಬಹುತೇಕ ನಾಯಕರಿಗೆ ಎಐಸಿಸಿಯಲ್ಲಿ ಯಾವುದೇ ಪ್ರಮುಖ ಹುದ್ದೆ ನೀಡಿಲ್ಲ.

click me!