
ನವದೆಹಲಿ (ಸೆ. 11) ಸದ್ದಿಲ್ಲದೆ ಚುನಾವಣಾ ಆಯೋಗ ಶಾಕ್ ನೀಡಿದೆ. ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಆಘಾತ ನೀಡಿದೆ.
ಚುನಾವಣೆಗೂ ಮುನ್ನ ಮೂರು ಬಾರಿ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಆರೋಪಗಳನ್ನು ಜನರ ಮುಂದೆ ಇಡಬೇಕಾಗುತ್ತದೆ. ನಾಮಪತ್ರ ಹಿಂಪಡೆಯುವ ನಾಲ್ಕು ದಿನಗಳ ಮುಂಚೆ ಇದಾದ ಮೇಲೆ ನಾಮಪತ್ರ ಹಿಂಪಡೆಯುವ ಕೊನೆಯ ದಿನಕ್ಕೆ 5 ರಿಂದ 8 ದಿನಗಳ ನಡುವೆ ಮತ್ತು ಕೊನೆಯದಾಗಿ ಬಹಿರಂಗ ಪ್ರಚಾರ ಅಂತ್ಯ ಮಾಡುವ ಮುನ್ನ 9 ದಿನದಿಂದ ಹಿಡಿದು ಕೊನೆಯವರೆಗೆ ತಮ್ಮ ಪ್ರಕರಣ ತಾವೇ ಪ್ರಚಾರ ಮಾಡಿಕೊಳ್ಳಬೇಕಾಗುತ್ತದೆ.
ಕೊರೋನಾ ಕಾರಣ; ಚುನಾವಣಾ ನಿಯಮಗಳೆಲ್ಲ ಅದಲು ಬದಲು
ಸಹಜವಾಗಿಯೇ ಚುನಾವಣಾ ಆಯೋಗದ ಈ ಕ್ರಮ ಅಪರಾಧ ಲೋಕದಲ್ಲಿ ಕಾಣಿಸಿಕೊಂಡು ರಾಜಕಾರಣದ ಕಡೆ ಹೆಜ್ಜೆ ಇಡುತ್ತಿದ್ದವರಿಗೆ ಆಘಾತ ತಂದಿದೆ. ಮುಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕಾಗಿ ಮಾಡುವ ಖರ್ಚಿನ ಮಿತಿಯನ್ನು ಶೇ.10ರಷ್ಟು ಹೆಚ್ಚಿಸಬೇಕೆಂಬ ಪ್ರಸ್ತಾವನೆಯೊಂದನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಕೇಂದ್ರ ಚುನಾವಣಾ ಆಯೋಗ ಸಲ್ಲಿಕೆ ಮಾಡಿತ್ತು.
ಬಿಹಾರ ವಿಧಾನಸಭೆ ಚುನಾವಣೆ ಎದುರಾಗಲಿದೆ. ಕರ್ನಾಟಕದ ಶಿರಾ, ಮಧ್ಯಪ್ರದೇಶದ ಸ್ಥಾನಗಳು ಸೇರಿದಂತೆ ದೇಶದ ಹಲವು ಕಡೆ ಬಾಕಿ ಇರುವ ಚುನಾವಣೆಯನ್ನು ಮುಗಿಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.