ಜೆಡಿಎಸ್ ಶಾಸಕರು ಹಣದ ಆಮಿಷಕ್ಕೆ ಬಲಿಯಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಗಲುಗನಸು ಕಾಣುತ್ತಿದ್ದಾರೆ. ಇವರ ಕನಸು ನನಸಾಗುವುದಿಲ್ಲ ಎಂದು ತಿಳಿಸಿದ ಶಾಸಕ ಎಚ್.ಟಿ. ಮಂಜು
ಮದ್ದೂರು(ನ.11): ಕೋಟಿ ಕೋಟಿ ಹಣ ಸುರಿದರೂ ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೆ.ಆರ್. ಪೇಟೆ ಶಾಸಕ ಎಚ್.ಟಿ. ಮಂಜು ಹೇಳಿದರು. ತಾಲೂಕಿನ ಆತಗೂರು ಹೋಬಳಿ ಜೆಡಿಎಸ್ ನಾಯಕರ ತಂಡದೊಂದಿಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಎಸ್ ಶಾಸಕರು ಹಣದ ಆಮಿಷಕ್ಕೆ ಬಲಿಯಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಗಲುಗನಸು ಕಾಣುತ್ತಿದ್ದಾರೆ. ಇವರ ಕನಸು ನನಸಾಗುವುದಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ತೀರ್ಮಾನ: ಶಾಸಕ ಉದಯ್
ಕಾಂಗ್ರೆಸ್ ನಾಯಕರು ನನ್ನ ದೇಹದ ಉದ್ದ ಕೋಟಿ ಕೋಟಿ ಹಣ ಸುರಿದರೂ ನಾನು ಜೆಡಿಎಸ್ ತೊರೆಯುವುದಿಲ್ಲ. ನನ್ನ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇವರ ವಿಶ್ವಾಸಕ್ಕೆ ದ್ರೋಹಬಗೆಯುವ ಕೆಲಸ ಮಾಡುವುದಿಲ್ಲ. ನಮ್ಮ ಈ ನಾಯಕರು ಹಾಕುವ ಲಕ್ಷ್ಮಣರೇಖೆಯನ್ನು ದಾಟುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎಚ್.ಟಿ. ಮಂಜು ಸ್ಪಷ್ಟಪಡಿಸಿದರು.