ಹಿಂದು ಅಶ್ಲೀಲ ಪದ ಹೇಳಿಕೆ: ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದ ಜಾರಕಿಹೊಳಿ

By Ravi Janekal  |  First Published Nov 8, 2022, 12:22 PM IST

ಹಿಂದೂ ಎಂಬ ಪದ ಪರ್ಶಿಯನ್ನ ಭಾಷೆಯಿಂದ ಬಂದಿದ್ದು, ಅಶ್ಲೀಲ ಅರ್ಥವನ್ನು ಹೊಂದಿದೆ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದು, ಪಕ್ಷದಿಂದಲೇ ವಿರೋಧ ವ್ಯಕ್ತವಾಗಿದೆ. ಆದರೆ, ಈ ಹೇಳಿಕೆಗೆ ತಾವು ಬದ್ಧರಿರುವುದಾಗಿ ಜಾರಕಿಹೊಳಿ ಹೇಳಿದ್ದಾರೆ. 


ಬೆಳಗಾವಿ (ನ.8): ಹಿಂದು ಎನ್ನುವುದು ಅಶ್ಲಿಲ ಪದ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತೆ ಸಮರ್ಥಿಸಿಕೊಂಡಿದ್ದು, ನಾನು ಪುಸ್ತಕ ಉಲ್ಲೇಖಿಸಿ ಹೇಳಿಕೆ ನೀಡಿದ್ದೇನೆಯೇ ಹೊರತು, ವೈಯಕ್ತಿಕವಾಗಿ ಹೇಳಿಕೆ ನೀಡಿಲ್ಲ. ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ.  ಹಿಂದು ಎನ್ನುವುದು ಅಶ್ಲಿಲ ಪದ. ಇದನ್ನು ಬಳಕೆ ಮಾಡಿಕೊಂಡಿರುವ ಕುರಿತು ಚರ್ಚೆ ನಡೆಯಲಿ.  ಈ ಕುರಿತು ಬಹಿರಂಗ ಚರ್ಚೆಗೆ ಬರಲಿ. ನಾನು ಯಾವುದೇ ಧರ್ಮದ ವಿರೋಧಿಯೂ ಅಲ್ಲ. ನನ್ನ ಹೇಳಿಕೆ ವಿಚಾರದಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಈ ಕುರಿತು ಮುಖ್ಯಮಂತ್ರಿ ತನಿಖೆ ನಡೆಸಲಿ, ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ.  ನನ್ನ ಹೇಳಿಕೆ ಸಾಬೀತು ಪಡೆಸಿದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಎಂದಿದ್ದಾರೆ. 

ಎಷ್ಟು ಜನ ನಾವು ಹೇಳಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ? ಅಶ್ಲೀಲ ಎಂಬ ಪದದಿಂದ ತಮಗೆ ಬೇಕಾದ ಹಾಗೇ ಓದಿದ್ದಾರೆ. ಹಿಂದು ಶಬ್ದ ಪರ್ಶಿಯನ್ ಶಬ್ದ. ಅದಕ್ಕೆ ದಾಖಲೆ ಇದೆ. ವಿಕಿಪೀಡಿಯಾದಲ್ಲಿ ನೋಡಬಹುದು ಅಂತಾನೂ ಹೇಳಿದ್ದೇನೆ. ಈ ಕೆಟ್ಟ ಶಬ್ದ ಬಳಸಿದ ಬಗ್ಗೆ ಡಿಕ್ಷನರಿವೊಂದರಲ್ಲಿ ಉಲ್ಲೇಖವಾಗಿದ್ದು, ಅದು 1963ರಲ್ಲಿ ಪ್ರಿಂಟ್ ಆಗಿದೆ. ನಾನು ಏನು ಹೇಳಿದೀನಿ, ಇದರ ಬಗ್ಗೆ ಚರ್ಚೆ ಆಗಬೇಕು ಅಂತಾನೂ ಹೇಳಿದೀನಿ. ಅಶ್ಲೀಲವಾಗಿ ಅಂತಾ ಇದ್ದಿದ್ದು, ಆ ಡಿಕ್ಷನರಿಯಲ್ಲಿ ಇದೆ. ಇವರು ತಮಗೆ ಬೇಕಾದ ಹಾಗೇ ಹೇಳಿದ್ರೆ ನಾನು ಹೇಗೆ ಉತ್ತರ ಕೊಡಬೇಕಾಗುತ್ತೆ? ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos



ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ!

ವಿಕಿಪೀಡಿಯಾದಲ್ಲಿ ಇದ್ದಿದ್ದನ್ನು ಹೇಳಿದ್ದೇನೆ. ಅದನ್ನ ನೋಡಿ ಇಡೀ ರಾಷ್ಟ್ರವೇ ನಡೀತಾ ಇದೆ. ವಿಕಿಪೀಡಿಯದಲ್ಲಿ ಯಾರಾದರೂ ಬರೆಯಬೇಕಿದ್ರೆ ಕಮಿಟಿ ಇದೆ. ಹಾಗೇ ಅದನ್ನ ಅಪ್‌ಲೋಡ್ ಮಾಡಬಹುದು. ನಾವು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಿಮ್ಮ ಪ್ಯಾನಲ್ ಡಿಸ್ಕಷನ್‌ಲ್ಲಿ ಚರ್ಚೆ ಮಾಡಿ. ಯಾರು ಬೇಕಾದರೂ ಬರಲಿ, ನನ್ನ ಸ್ಟ್ಯಾಂಡ್ ಏನಿದೆಯೇ ಅದನ್ನೇ ಹೇಳ್ತೀನಿ. ಯಾರೂ ಸಹ ನಮ್ಮ ನಿಲುವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನ್ಯಾಷನಲ್ ಮೀಡಿಯಾದಲ್ಲಿ ಬಂದ ತಕ್ಷಣ ಒಂದ್ ಸ್ಟ್ಯಾಂಡ್ ಆಗಿದೆ. ನಾನು ತಪ್ಪು ಹೇಳಿದೀನಿ ಅಂತಾ ಪ್ರೂವ್ ಮಾಡಿದ್ರೆ ಕ್ಷಮೆ ಅಷ್ಟೇ ಅಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. 

ತಮಗೆ ಬೈದಿದ್ದನ್ನು ತಾವು ನೋಡಿಕೊಂಡಿಲ್ಲ. ಇದರ ಬಗ್ಗೆ ಹೀಗೆ ಹೇಳಿದೀರಿ ಅದನ್ನ ಚರ್ಚೆ ಮಾಡಿ ಅಂದಿದ್ದೇನೆ. ಡಿಕ್ಷನರಿಯಲ್ಲಿ (Dictionary) ಹಿಂದೂ ಪದದ ಅರ್ಥ ಏನು ಅಂತಾ ಇದೆ ಕೆಟ್ಟ ಶಬ್ದ ಉಪಯೋಗ ಮಾಡಿದ್ದಾರೆ ಎಂದರ್ಥ. ಆ ಡಿಕ್ಷನರಿಯಲ್ಲಿ ಹಿಂದು ಪದದ ಅರ್ಥ ಅಶ್ಲೀಲ ಎಂಬುವುದು ಇದೆ. ವಾಜಪೇಯಿಯವರು ಸಹ ಹಿಂದೂ ಪದ ಪರ್ಷಿಯನ್‌ನಿಂದ ಬಂದಿದ್ದು ಅಂತಾ ಹೇಳಿದ್ದಾರೆ. ನಾವು ಯಾವುದೇ ಜಾತಿ ನೋಡಿ ಕೆಲಸ ಮಾಡಲ್ಲ. ನೀವು ಹಿಂದೂನಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಾನು ಭಾರತೀಯ ಎಂದ ಸತೀಶ್ ಜಾರಕಿಹೊಳಿ, ಉತ್ತರಿಸಿದ್ದಾರೆ.

ಪಕ್ಷದ ಬೇರೆ. ಇದು ವೈಯಕ್ತಿಕ ಅಭಿಪ್ರಾಯ. ನಾನು ಪಕ್ಷದ ವೇದಿಕೆಯಲ್ಲಿ (Party Opinion) ಮಾತನಾಡಿಲ್ಲ. ಸತೀಶ್ ಜಾರಕಿಹೊಳಿ ಅರೆ ಬರೆ ಓದಿಕೊಂಡಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆದ್ದಾರೆ. ಆದರೆ, ನಾನು ಅರೆ ಬರೆ ಓದಿಕೊಂಡಿಲ್ಲ. ನಾವು ಹಿಂದೂಗಳಿಗೆ ಎಲ್ಲಿ ಅವಮಾನ ಮಾಡಿದ್ದೀವಿ ಸಾಬೀತು ಮಾಡಬೇಕು. ಹಲವು ಬಿಜೆಪಿ ನಾಯಕರೇ ಮಾತನಾಡಿದ್ದಾರೆ‌‌. ಹಿಂದೂ ಪದ ಪರ್ಷಿಯನ್‌ನಿಂದ ಬಂದಿದ್ದು. ಮನುವಾದಿಗಳು ಹಾಗೂ ಸಿಸ್ಟಮ್ ಇದ್ದು, ವ್ಯವಸ್ಥಿತವಾಗಿ ಈ ಬದ್ದೆ ಷಡ್ಯಂತ್ರ ಮಾಡುತ್ತಿದ್ದಾರೆ, ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ನನ್ನ ಹೇಳಿಕೆಯನ್ನು ಸುರ್ಜೇವಾಲಾ ಖಂಡಿಸಿದ್ದಾರೆ. ಅವರು ನಮಗಿಂತ ಹಿರಿಯರು. ಅದಕ್ಕೆ ನಾನು ಆಕ್ಷೇಪ ಮಾಡಲ್ಲ. ನಾವು ಮಾಡಿದ್ದಾದರೂ ಏನು? ನಾವು ಕ್ಷಮೆ ಕೇಳುವ ಪ್ರಶ್ನೆ ಇಲ್ಲ. ಸಿಎಂ ಬೊಮ್ಮಾಯಿ ಬೇಕಾದರೆ ಒಂದು ಕಮಿಟಿ ಮಾಡಲಿ. ಆ ಡಿಕ್ಷನರಿಯಲ್ಲಿ ಹಿಂದೂ ಪದದ ಅಶ್ಲೀಲ ಅಂತಾ ಬರೆದಿದ್ದಾರೆ ಆ ಬಗ್ಗೆ ಚರ್ಚೆ ಮಾಡಿ ಎಂದಿದ್ದೇನೆ. 1963ರಲ್ಲಿ ಆ ಡಿಕ್ಷನರಿ ಪ್ರಕಟ ಆಗಿದೆ, ಅದನ್ನ ನೋಡಿ, ಯಾವುದೇ ಸಮಾಜದವರಿಗೆ ಬೈದ್ರೆ ಹರ್ಟ್ ಆಗುತ್ತದೆ. ಅಶ್ಲೀಲ ಪದ ಅನ್ನೋದು ಡಿಕ್ಷನರಿಯಲ್ಲಿದೆ, ಅದನ್ನು ನಾನು ಬರೆದಿದ್ದೀನಾ? ಹಿಂದೂ ಪದದ ಅರ್ಥ ಕೆಟ್ಟದ್ದಿದೆ ನೋಡಿ ಅದರ ಬಗ್ಗೆ ಚರ್ಚೆ ಮಾಡಿ ಅಂತಾ ಹೇಳಿದ್ದೇನೆ. ನಿಮ್ಮ ಕಡೆ ಏನಾದರೂ ಕರೆಕ್ಟ್ ಇದ್ರೆ ಮಾಡಿ, ದಾಖಲೆ ಇದ್ರೆ ಮುಂದುವರಿಸಿ. ಅವರದ್ದೇ ಸರ್ಕಾರ ಇದೆ, ಸಿಎಂ ತನಿಖೆ ಮಾಡಲಿ. ಒಂದು ಕಮಿಟಿ ಮಾಡಿ, ಸತ್ಯಾಸತ್ಯತೆ ಹೊರ ಬರಲಿ. ಬೇರೆ ಪುಸ್ತಕಗಳಲ್ಲಿ ಉಲ್ಲೇಖ ಇದೆ, ವಿಕಿಪೀಡಿಯಾದಲ್ಲಿ ಇದೆ ಅಂತಾ ಸುರ್ಜೆವಾಲಾರಿಗೂ ತಿಳಿಸಿದ್ದೇನೆ, ಎಂದಿದ್ದಾರೆ ಸತೀಶ್.

ಹಿಂದೂ ಪದದ ಅರ್ಥ ಅಶ್ಲೀಲ ಎಂದ ಜಾರಕಿಹೊಳಿಗೆ, ಮುತಾಲಿಕ್ ಕ್ಲಾಸ್, ಕಾಂಗ್ರೆಸ್ ಖಂಡನೆ

ನಾನು ಚುನಾವಣೆ ದೃಷ್ಟಿಯಿಂದ ಈ ಹೇಳಿಕೆ ನೀಡಿದ್ದಲ್ಲ. ಈ ಬಗ್ಗೆ ಸಾಮೂಹಿಕ ಚರ್ಚೆ (Mass Debate) ಮಾಡಲಿ. ನಾಲ್ವರು ಚರ್ಚೆ ಮಾಡಿದ್ದನ್ನು ನಾವು ಒಪ್ಪಿಕೊಳ್ಳಲ್ಲ. ಸತ್ಯ ಹೇಳೋದೇ ಅಪರಾಧ, ಎಲ್ಲರಿಗೂ ನ್ಯಾಯ ಕೊಡಿಸುವುದೇ ಅಪರಾಧ ಆಗಿದೆ. ನಾನು ಪರ್ಷಿಯನ್ ಪದ ಅಂತಾ ಹೇಳಿದ್ದು, ಅದರ ಬಗ್ಗೆ ಚರ್ಚೆ ಆಗಬೇಕು ಅಂತಾನೂ ಹೇಳಿದ್ದೀನಿ. ಅದು ಸತೀಶ್ ಜಾರಕಿಹೊಳಿ ಸಂಶೋಧನೆ ಮಾಡಿ ಬರೆದ ಬುಕ್ ಅಲ್ಲ. ಯಾರು ಬರ್ತಾರೆ ಬರಲಿ. ಚರ್ಚೆಗೆ ನಾನು ಸಿದ್ಧ. ಯಡಿಯೂರಪ್ಪ, ಬೊಮ್ಮಾಯಿಗೆ ಒಂದು ಕಮಿಟಿ ರಚನೆ ಮಾಡಲು ಹೇಳಿ. ಅದರಲ್ಲಿ ಪ್ರೂವ್ ಆದ್ರೆ ಕ್ಷಮೆ ಅಲ್ಲ ರಾಜೀನಾಮೆ ಸಹ ನೀಡ್ತೇನೆ. ಯಾರು ಬರೆದಿದ್ದಾರೆ ಅವರ ಮೇಲೆ ಕೇಸ್ ಹಾಕಿ ಫೈಟ್ ಮಾಡಬೇಕು, ಎಂದು ಆಗ್ರಹಿಸಿದ್ದಾರೆ. 

ಇಂತಹ ವಿಷಯಗಳ ಮೇಲೆ ಹಿಂದುತ್ವ ಗಟ್ಟಿ ಮಾಡೋದು ಅವರ ಉದ್ದೇಶ. ಬೊಮ್ಮಾಯಿಯವರಿಗೆ ಕಮಿಟಿ ರಚಿಸಿ ಒಂದು ತಿಂಗಳಲ್ಲಿ ವರದಿ ನೀಡಿ ಅಂತಾ ಹೇಳಿ ಎಂದ ಸತೀಶ್ ಜಾರಕಿಹೊಳಿ ಕೇಳಿ ಕೊಂಡಿದ್ದಾರೆ.

click me!