ಸುಮ್ಮನೇ ಕೂಡ್ತೀರೋ ನಾನು ಇಲ್ಲಿಂದ ಎದ್ದು ಹೋಗ್ಲೋ.. ಭಾಷಣದ ವೇಳೆ ಕೈ ಕಾರ್ಯಕರ್ತರ ಘೊಷಣೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸಿಡಿಮಿಡಿಗೊಂಡ ಘಟನೆ ನಡೆಯಿತು. ಬರೀ ಘೊಷಣೆ ಕೂಗೋದಲ್ಲಿ ಓಟು ಹಾಕಿಸಿ ಎಂದು ಕಾರ್ಯಕರ್ತರಿಗೆ ವಾರ್ನಿಂಗ್ ಮಾಡಿದರು.
ಕೆಆರ್ ಪೇಟೆ (ಏ.20): ಓಟು ಹಾಕೊಲ್ಲ, ಹಾಕಿಸೊಲ್ಲ ಬರೀ ಘೋಷಣೆ ಕೂಗ್ತೀರಿ ಎಂದು ಕಾರ್ಯಕರ್ತರ ಮೇಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಗರಂ ಆದ ಘಟನೆ ನಡೆಯಿತು.
ಇಂದು ಮಂಡ್ಯಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಸಮಾವೇಶದಲ್ಲಿ ಭಾಷಣವೇಳೆ ಡಿಕೆ ಪರ ಘೋಷಣೆ ಕೂಗಿದ ಕಾರ್ಯಕರ್ತರು. ಭಾಷಣದ ವೇಳೆ ಯಾರೂ ಘೋಷಣೆ ಕೂಗಬೇಡಿ ಎಂದು ಸೂಚಿಸಿದರೂ ಘೋಷಣೆ ಕೂಗುತ್ತಲೇ ಇದ್ದ ಕಾರ್ಯಕರ್ತರು ಇದರಿಂದ ಒಂದು ಕ್ಷಣ ತಾಳ್ಮೆ ಕಳೆದುಕೊಂಡ ಡಿಕೆ ಶಿವಕುಮಾರ, ಕಾರ್ಯಕರ್ತರಿಗೆ ಗದರಿದರು. ಸುಮ್ಮನೆ ಘೋಷಣೆ ಕೂಗೋದ್ರಿಂದ ಏನೂ ಆಗೊಲ್ಲ ಎಂದರು ಆಗಲೂ ಘೋಷಣೆ ನಿಲ್ಲಿಸದ ಕಾರ್ಯಕರ್ತರು.
ಕುಮಾರಸ್ವಾಮಿ ಯಾವತ್ತೂ ರೈತರ ಪರ ಇಲ್ಲ; ಬುಡುಬುಡಿಕೆ ಮಾತು, ಖಾಲಿ ಟ್ರಂಕ್ ಅಷ್ಟೇ: ಡಿಕೆ ಶಿವಕುಮಾರ ವಾಗ್ದಾಳಿ
ಸುಮ್ಮನೇ ಕೂಡ್ತೀರೋ ನಾನು ಇಲ್ಲಿಂದ ಎದ್ದು ಹೋಗ್ಲೋ ಎಂದು ಅವಾಜ್ ಹಾಕಿದ ಬಳಿಕ ಸೈಲೆಂಟಾದ ಕಾರ್ಯಕರ್ತರು ಬಳಿಕ ಮಾತು ಆರಂಭಿಸಿದ ಡಿಕೆ ಶಿವಕುಮಾರ, ವೇದಿಕೆ ಮೇಲಿರುವ ಲೀಡರ್‌ಗಳನ್ನ ನಾನು ನಂಬುವುದಿಲ್ಲ. ಬೂತ್ ಮಟ್ಟದಲ್ಲಿ ಯಾರು ಹೆಚ್ಚು ಮತ ಹಾಕಿಸ್ತಾರೆ ಅವರೇ ನಿಜವಾದ ಲೀಡರ್ ಎಂದರು. ಈ ವೇಳೆ ಕೆಬಿ ಚಂದ್ರಶೇಖರ್, ದೇವರಾಜು ಹೆಸರು ನಮೂದಿಸಿ ಈ ಚುನಾವಣೆಯಲ್ಲಿ ಹೆಚ್ಚು ಮತ ಕೊಡಿಸದಿದ್ದರೇ ಮುಂದೆ ವೇದಿಕೆ ಮೇಲೆ ಕೂರಿಸಲ್ಲ. ಎಲ್ಲರಂತೆ ವೇದಿಕೆ ಮುಂದೆ ಕೂರಿಸಬೇಕಾಗುತ್ತೆ ಎಂದು ಖಡಕ್ ವಾರ್ನಿಂಗ್ ನೀಡಿದರು. ಡಿಕೆಶಿ ಖಡಕ್ ಎಚ್ಚರಿಕೆ ಕೊಡ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಪಕ್ಕದಲ್ಲಿದ್ದ ಮಾಜಿ ಶಾಸಕ ಕೆಬಿ ಚಂದ್ರಶೇಖರ್ನ ಕಿವಿ ಹಿಂಡಿದರು.