ಸಭಾಪತಿ ಆಗಬಹುದೆಂಬ ಆಸೆಯಿಂದ Basavaraj Horatti ಕೋಮುವಾದಿ‌ಪಕ್ಷಕ್ಕೆ ಶಿಫ್ಟ್

By Suvarna News  |  First Published May 29, 2022, 5:44 PM IST

ಬಸವರಾಜ ಹೊರಟ್ಟಿ ಸೋಲಿನ ಭೀತಿ ಹಾಗೂ ಮತ್ತೆ ಪರಿಷತ್ ಸಭಾಪತಿ ಆಗಬಹುದು ಎಂಬ ಆಸೆಯಿಂದ ಕೋಮುವಾದಿ‌ಪಕ್ಷ ಸೇರಿದ್ದಾರೆ ಎಂದ ಸಲೀಂ ಅಹ್ಮದ್
 


ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ‌ ನ್ಯೂಸ್ 

ಹಾವೇರಿ (ಮೇ 29): ಬಸವರಾಜ ಹೊರಟ್ಟಿ (Basavaraj Horatti) ಸೋಲಿನ ಭೀತಿ ಹಾಗೂ ಅಧಿಕಾರದ ಆಸೆಯಿಂದ ಬಿಜೆಪಿ (BJP) ಸೇರಿದ್ದಾರೆ ಎಂದು ಕೆಪಿಸಿಸಿ (KPCC) ಕಾರ್ಯಾದ್ಯಕ್ಷ ಸಲೀಂ ಅಹ್ಮದ್ (Saleem Ahmed) ಹೇಳಿದ್ದಾರೆ. ಇಂದು ಹಾವೇರಿಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ‌ ಮಾತನಾಡಿದ ಸಲೀಂ ಅಹ್ಮದ್,  ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ್ ಸ್ಪರ್ಧಿಸಿದ್ದಾರೆ. ಬಸವರಾಜ ಗುರಿಕಾರ್ 40 ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಅವರ ಕೆಲಸ ಪ್ರಾಮಾಣಿಕತೆ, ಹೋರಾಟ ಎಲ್ಲ ಶಿಕ್ಷಕರಿಗೆ ಗೊತ್ತಿದೆ. 

Tap to resize

Latest Videos

undefined

ಬಸವರಾಜ ಹೊರಟ್ಟಿ 7 ಬಾರಿ ಆಯ್ಕೆಯಾಗಿದ್ದಾರೆ. ಆದರೆ ಹೊರಟ್ಟಿಯವರು ಪಕ್ಷ ಬದಲಾವಣೆ ಮಾಡಿದ್ದಾರೆ. ಇದಕ್ಕೆ ಕಾರಣ‌ ಸೋಲಿನ‌ ಭೀತಿ ಇರಬಹುದು. ಇಲ್ಲದಿದ್ದರೆ ಅಧಿಕಾರದ ಆಸೆ‌ಯೂ ಇರಬಹುದು. ಮತ್ತೆ ಪರಿಷತ್ ಚೇರ್ಮನ್ ಆಗಿ ಮುಂದುವರೆಯಬಹುದು ಅಂತ ಬಿಜೆಪಿಗೆ ಹೋಗಿದ್ದಾರೆ.  ಜಾತ್ಯಾತೀತ ವಿಚಾರ ಇಟ್ಟುಕೊಂಡು ಚುನಾವಣೆ ಗೆದ್ದು ಅವರು ಈಗ ಕೋಮುವಾದಿ ಪಕ್ಷಕ್ಕೆ ಸೇರಿದ್ದಾರೆ. ಬಸವರಾಜ ಹೊರಟ್ಟಿ ರಾಜಕೀಯದ ಕೊನೆಯ‌ ದಿನಗಳಲ್ಲಿ ಸಿದ್ದಾಂತ ಬಲಿ‌ ಕೊಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ  ಮುಳುಗಿದ ಪಕ್ಷಕ್ಕೆ ಸೇರಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

CENTRAL UNIVERSITY RECRUITMENT 2022; ಒಟ್ಟು 61 ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ

ಶಿಕ್ಷಕರು ಬಸವರಾಜ ಗುರಿಕಾರ್ ಅವರಿಗೆ ಆಶೀರ್ವಾದ ‌ಮಾಡಬೇಕು. ಶಿಕ್ಷಕರ ಸಮಸ್ಯೆ, ಬೇಡಿಕೆಗಳ ಬಗ್ಗೆ ನಮ್ಮ ಅಭ್ಯರ್ಥಿಗೆ ಗೊತ್ತಿದೆ. ಈ‌‌‌ ಬಾರಿ ನಮ್ಮ ಅಭ್ಯರ್ಥಿ ಬಸವರಾಜ ಗುರಿಕಾರ್ ಅವರನ್ನು ಗೆಲ್ಲಿಸಿಕೊಂಡು‌ ಬನ್ನಿ ಎಂದು ಸಲೀಂ ಅಹ್ಮದ್ ಶಿಕ್ಷಕ ಮತದಾರರಿಗೆ ಮನವಿ ಮಾಡಿದರು.

Ramanagaraದಲ್ಲಿ ಬಾಣಂತಿ-ಋತುಮತಿಯರಿಗೆ 30ದಿನ ಊರ ಹೊರಗೆ ವಾಸ್ತವ್ಯ!

ನೆಹರೂ ಕಟ್ಟೋ ಕೆಲಸ ಮಾಡಿದರು, ಮೋದಿ ಮಾರಿದರು:  ಇತ್ತೀಚೆಗೆ  ಮಾಜಿ ಪ್ರಧಾನಿ ನೆಹರೂ ಹಾಗೂ ಪ್ರಧಾನಿ ಮೋದಿ ಸಾಧನೆಗಳ ಕುರಿತು ಭಾರಿ ಚರ್ಚೆ ನಡೆದಿರೋ ವಿಚಾರವಾಗಿ ಮಾತನಾಡಿದ ಅಲೀಂ ಅಹ್ಮದ್, ಅಧಿಕಾರಕ್ಕೆ ಬಂದು 8 ವರ್ಷವಾದರೂ ಮೋದಿ ಒಂದೇ ಒಂದು‌ ಪ್ರೆಸ್ ಕಾನ್ಫರೆನ್ಸ್ ‌ಮಾಡಿಲ್ಲ. ಸುಳ್ಳು ಹೇಳುತ್ತಾ ಅಧಿಕಾರ ನಡೆಸುತ್ತಾ ಬಂದಿದ್ದಾರೆ.

ರಾಜಕೀಯ ತಿರುವು ಪಡೆದ, KOPPALAದ ದೇವಸ್ಥಾನ ಜಿರ್ಣೋದ್ಧಾರ ವಿವಾದ

ಮೈ‌ ನರೇಂದ್ರ ಮೋದಿ ಹುಂ ಅಂತ ಹೇಳ್ತಾರಲ್ಲಾ ಅದೊಂದೇ ಅವರು ಹೇಳಿದ ಸತ್ಯ. ನೆಹರೂರವರು ಕಟ್ಟಿದ ಸಂಸ್ಥೆ, ಕಟ್ಟಡಗಳು ಎಲ್ಲವನ್ನೂ ಇವರು ಮಾರಿದರು. ಅವರು ಕಟ್ಟಿದ್ದರು. ಇವರು ಮಾರಿದರು. ಇದೇ  ನೆಹರೂ ಹಾಗೂ  ಮೋದಿಯವರ ನಡುವೆ ಇರುವ ವ್ಯತ್ಯಾಸ ಎಂದು ಮೋದಿ ವಿರುದ್ದ ಸಲೀಂ ಅಹ್ಮದ್ ವ್ಯಂಗ್ಯವಾಡಿದರು.

click me!