ಕಮಿಷನ್‌ಗಾಗಿ ವಿದ್ಯುತ್ ಅಭಾವ ಸೃಷ್ಠಿಸಲಾಗುತ್ತಿದೆ ಎನ್ನುವ ಎಚ್‌ಡಿಕೆಗೆ ನಾಚಿಕೆ ಆಗಲ್ವಾ: ಎಂ.ಲಕ್ಷ್ಮಣ್

By Govindaraj S  |  First Published Oct 27, 2023, 10:03 PM IST

ಕಮಿಷನ್‌ಗಾಗಿ ಸುಳ್ಳು ವಿದ್ಯುತ್ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಹೇಳುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಖಾರವಾಗಿ ತಿರುಗೇಟು ನೀಡಿದ್ದಾರೆ. ಅವರು ಎರೆಡೆರಡು ಬಾರಿ ಸಿಎಂ ಆಗಿದ್ದವರು. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಅ.27): ಕಮಿಷನ್‌ಗಾಗಿ ಸುಳ್ಳು ವಿದ್ಯುತ್ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಹೇಳುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಖಾರವಾಗಿ ತಿರುಗೇಟು ನೀಡಿದ್ದಾರೆ. ಅವರು ಎರೆಡೆರಡು ಬಾರಿ ಸಿಎಂ ಆಗಿದ್ದವರು. ಆಧಾರ ರಹಿತವಾಗಿ ಸುಖಾ ಸುಮ್ಮನೆ ಆರೋಪ ಮಾಡುತ್ತಾರೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಜಾಸ್ತಿ ಇರುವುದರಿಂದ ಕೊರತೆ ಎದುರಾಗಿರುವುದು ನಿಜ. ಕಳೆದ ವರ್ಷದ ಇದೇ ಅವಧಿಯಲ್ಲಿ ಎಷ್ಟು ವಿದ್ಯುತ್ ಬೇಡಿಕೆ ಇತ್ತು. ಆದರೆ ಈ ಎಷ್ಟು ವಿದ್ಯುತ್ ಬೇಡಿಕೆ ಇದೆ ಎನ್ನುವದನ್ನು ತಿಳಿದುಕೊಂಡು ಕುಮಾರಸ್ವಾಮಿ ಅವರು ಮಾತನಾಡಲಿ. 

Tap to resize

Latest Videos

undefined

ವಿದ್ಯುತ್ ಕೊರತೆ ಇರುವುದಕ್ಕೆ ಸೆಂಟ್ರಲ್ ಪವರ್ ಗ್ರಿಡ್ ಮೂಲಕ 1 ಸಾವಿರ ಮೆಗಾವಾಟ್ ವಿದ್ಯುತ್ ಅನ್ನು ಖರೀದಿಸುತ್ತಿದ್ದೇವೆ. ಹೀಗೆ ಖರೀದಿಸುವುದಕ್ಕೆ ಸೆಂಟ್ರಲ್ ಪವರ್ ಗ್ರಿಡ್ ನವರು ನಮಗೆ ಕಮಿಷನ್ ಕೊಡುತ್ತಾರಾ.? ಹೀಗೆಲ್ಲಾ ಮಾತನಾಡುವುದಕ್ಕೆ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಏನು ಇಲ್ವಾ ಎಂದು ಏಕ ವಚನದಲ್ಲಿಯೇ ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರು ಬಿಜೆಪಿಯಿಂದ ಸುಪಾರಿ ತೆಗೆದುಕೊಂಡಿದ್ದಾರೆ. ಅಮಿತ್ ಷಾ ಅವರೊಂದಿಗೆ ಡೀಲ್ ಮಾಡಿಕೊಂಡು ಒಂದು ಪ್ರೆಸ್ ಮೀಟ್ ಮಾಡಿ ಕಾಂಗ್ರೆಸ್, ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಬೈದರೆ ಇಂತಿಷ್ಟು ಎಂದು ಫಿಕ್ಸ್ ಮಾಡಿಕೊಂಡಿದ್ದಾರೆ.

ಜೆಡಿಎಸ್ ಜೊತೆ ಮೈತ್ರಿಯಾದ್ರೆ ನಮ್ಮ ಹಕ್ಕು ಬಿಟ್ಟು ಕೊಡುವ ಸಂದರ್ಭ ಬರೋದಿಲ್ಲ: ಸಿ.ಟಿ.ರವಿ

ಅಷ್ಟೇ ಏಕೆ ನಿಮ್ಮನ್ನೇ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುತ್ತೇವೆ ಎಂದೆಲ್ಲಾ ಬಿಜೆಪಿಯವರು ಆಮಿಷವೊಡ್ಡಿರಬೇಕು. ಹೀಗಾಗಿ ಕುಮಾರಸ್ವಾಮಿ ಅವರು ನಿರಂತರವಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಸರ್ಕಾರ ಇದ್ದಾಗ ಅಂದರೆ 2020 ರ ಅಕ್ಟೋಬರ್ 14 ರಂದು ವಿ ಪೊನ್ನುರಾಜ್ ಎನ್ನುವ ಕರ್ನಾಟಕ ಪವರ್ ಕಾರ್ಪೊರೇಷನ್ ಹಿರಿಯ ಐಎಎಸ್ ಅಧಿಕಾರಿ ಅವರು ಕರ್ನಾಟಕ ಸರ್ಕಾರದ ಅಡಿಷನಲ್ ಚೀಫ್ ಸೆಕ್ರೇಟ್ರಿ ಇವರಿಗೆ ಪತ್ರ ಬರೆದಿದ್ದಾರೆ. 

ಅದರಲ್ಲಿ ನಮ್ಮಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಉತ್ಪಾದನಾ ಘಟಕಗಳನ್ನು ಚಾಲೂ ಮಾಡಿ ವಿದ್ಯುತ್ ಉತ್ಪಾದನೆ ಮಾಡಬೇಕಾಗಿದೆ. ಅದನ್ನು ಮಾಡದೆ ಖಾಸಗಿ ಅವರಿಂದ ನಿಗಧಿತ ದರಕ್ಕಿಂತ ಒಂದು ರೂಪಾಯಿ ಹೆಚ್ಚುವರಿಯಾಗಿ ನೀಡಿ ವಿದ್ಯುತ್ ಖರೀದಿಸಲಾಗುತ್ತಿದೆ. ಇದರಿಂದ ವಾರ್ಷಿಕ 16 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಪತ್ರ ಬರೆದಿದ್ದಾರೆ. ಅಂದರೆ ಸೆಂಟ್ರಲ್ ಪವರ್ ಗ್ರಿಡ್ ಮೂಲಕ ವಿದ್ಯುತ್ ಖರೀದಿಸುವ ಬದಲು ಅಂದಿನ ಇಂಧನ ಸಚಿವರಾದ ಸುನಿಲ್ಕುಮಾರ್ ಅವರು ಉಡುಪಿಯಲ್ಲಿರುವ ಅದಾನಿ ಸಮೂಹದ ಕಂಪನಿಯಿಂದ ವಿದ್ಯುತ್ ಖರೀದಿಸಿದರು. 

'ಸರ್ವರೂ ಎಚ್ಚರದಿಂದ ಇರಬೇಕು': ಇದು ನಾಡಿನ ಸುಪ್ರಸಿದ್ದ ಮೈಲಾರಸ್ವಾಮಿ ಕಾರ್ಣಿಕ ನುಡಿ!

ಈಗ ಹೇಳಿ ಕುಮಾರಸ್ವಾಮಿ ಅವರೇ ಯಾರು ಕಮಿಷನ್ ತೆಗೆದುಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ಕಳ್ಳ ಕಳ್ಳತನ ಮಾಡಿ ಇನ್ನೊಬ್ಬರ ಮೇಲೆ ಆರೋಪ ಹೊರಿಸುತ್ತಾರೆ. ಅದೇ ರೀತಿ ಈಗ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಜೆಡಿಎಸ್ ನವರು ಸೇರಿ ಈ ರಾಜ್ಯದ ತಿಜೋರಿಯನ್ನು ಕೊಳ್ಳೆ ಹೊಡೆದು ಕೇವಲ ಕೀ ಬಿಟ್ಟು ಹೋಗಿದ್ದಾರೆ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ ಲಕ್ಷ್ಮಣ್ ಅವರು ಬಿಜೆಪಿ, ಜೆಡಿಎಸ್ ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

click me!