ಬಿಜೆಪಿ ಮನೆಯಲ್ಲಿ ನಾಯಿ ಸತ್ತು ನಾರುತ್ತಿದೆ ಕಾಂಗ್ರೆಸ್ ಬಗ್ಗೆ ಮಾತನಾಡುವುದೇಕೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ

By Govindaraj S  |  First Published Dec 30, 2023, 10:23 PM IST

ಹೊಸದಾಗಿ ನೇಮಕವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ದಿನಕ್ಕೆ ಮೂರು ಬಾರಿ ಪ್ರೆಸ್ ಮಾಡುತ್ತಾ ಸರ್ಕಾರದ ವಿರುದ್ಧ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದಾಗಿ ಹೇಳುತ್ತಾ ಸರ್ಕಾರವನ್ನು ಸಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ. 


ವರದಿ: ರವಿ.ಎಸ್.ಹಳ್ಳಿ, ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.30): ಹೊಸದಾಗಿ ನೇಮಕವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ದಿನಕ್ಕೆ ಮೂರು ಬಾರಿ ಪ್ರೆಸ್ ಮಾಡುತ್ತಾ ಸರ್ಕಾರದ ವಿರುದ್ಧ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದಾಗಿ ಹೇಳುತ್ತಾ ಸರ್ಕಾರವನ್ನು ಸಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮನೆಯಲ್ಲಿ ನಾಯಿ ಸತ್ತುಬಿದ್ದು ನಾರುತ್ತಿದೆ. ಇದನ್ನು ನೋಡಿಕೊಳ್ಳಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ತಿರುಗೇಟು ನೀಡಿದ್ದಾರೆ. ತಮ್ಮ ಮನೆಯಲ್ಲಿ ನಾಯಿ ಸತ್ತುಬಿದ್ದಿರುವುದನ್ನು ಬಿಜೆಪಿಯವರಿಗೆ  ಸ್ವಚ್ಛ ಮಾಡಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅದರ ಬಗ್ಗೆ ಜನರಿಗೆ ತಿಳಿಸಲಿ, ಅದಕ್ಕೆ ನಮ್ಮ ಅಡ್ಡಿಯಿಲ್ಲ ಎಂದಿದ್ದಾರೆ. 

Tap to resize

Latest Videos

undefined

ನಿಮ್ಮ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೇಳುತ್ತಿರುವ ಪ್ರಶ್ನೆಗಳಿಗೆ ಮೊದಲು ನೀವು ಉತ್ತರ ನೀಡಿ. 45 ರೂಪಾಯಿ ಒಂದು ಮಾಸ್ಕ್ ಗೆ 450 ರೂಪಾಯಿ ಕೊಟ್ಟು ಖರೀದಿಸಿದ್ದೀರಿ, ಒಂದು ಬೆಡ್ ಗೆ ದಿನಕ್ಕೆ 20000 ಸಾವಿರ ಬಿಲ್ಲು ಮಾಡಿದ್ದೀರಾ ಎಂದು ಹೇಳಿದ್ದಾರೆ. ಈ ದುಡ್ಡನ್ನು ವಿಜಯೇಂದ್ರ ಮತ್ತು ಯಡಿಯೂರಪ್ಪನವರು ಅಮೇರಿಕದಲ್ಲಿ ಹೂಡಿಕೆ ಮಾಡಿದ್ದಾರೆ ಎಂದಿದ್ದಾರೆ. ದುಬೈ, ಮಾಲ್ಡೀವ್ಸ್ ಬ್ಯಾಂಕಿನಲ್ಲಿ ಇಟ್ಟಿದ್ದೀರಾ ಎಂದಿದ್ದಾರೆ. ಇದಕ್ಕೆಲ್ಲ ನೀವು ಮೊದಲು ಉತ್ತರ ಕೊಡಿ ಎಂದು ಲಕ್ಷ್ಮಣ್ ಆಗ್ರಹಿಸಿದ್ದಾರೆ. ಕೊನೆ ಪಕ್ಷ ಅವರನ್ನು ನಿಮಗೆ ಕರೆದು ಕೇಳಲು ಆಗುತ್ತಿಲ್ಲ. ಅವರಿಗೆ ನೋಟಿಸ್ ಕೊಡಲು ನಿಮಗೆ ಧೈರ್ಯ ಇಲ್ವಾ, ಅಂದರೆ ಅವರ ಪ್ರಶ್ನೆ ಸತ್ಯ ಎಂದಾಯಿತಲ್ಲ ಎಂದು ಎಂ. ಲಕ್ಷ್ಮಣ್ ಲೇವಡಿ ಮಾಡಿದ್ದಾರೆ. 

ಉಚಿತ ಕೊಡುಗೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವಿಲ್ಲ: ಕೋಟ ಶ್ರೀನಿವಾಸ್ ಪೂಜಾರಿ

2024 ರಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಡುವುದಿಲ್ಲ ಎನ್ನುವ ಮಾಹಿತಿ ಇದೆ. ಒಂದು ವೇಳೆ ಕೊಟ್ಟರೂ ಪ್ರತಾಪ್ ಸಿಂಹ ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿಯವರೇ ಬಂದು ನಿಂತರೂ ಜನ ಸೋಲಿಸುತ್ತಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ಈ ಕ್ಷೇತ್ರದಿಂದ ಟಿಕೆಟ್ ಇಲ್ಲ ಎನ್ನುವ ಮಾಹಿತಿ ತಿಳಿದೋ ಏನೋ ಅವರು ಏನೇನೋ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಸೋಮಾರಿ ಸಿದ್ದ ಎಂದು ಕರೆಯುತ್ತೀರಾ, ಸಿಎಂ, ರಾಜ್ಯಪಾಲರು, ಸ್ಪೀಕರ್ ಸೇರಿದಂತೆ ಗಣ್ಯರನ್ನು ಕರೆಯುವಾಗ ಒಂದು ರೀತಿ, ನೀತಿ ಇದೆ. 

ಆದರೆ ನೀವು ಹೀಗೆಲ್ಲಾ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್ ಹೈವೇ ಕಾಮಗಾರಿಗೆ 2014 ರ ಮಾರ್ಚಿ ತಿಂಗಳಿನಲ್ಲೇ ಅನುಮೋದನೆ ದೊರೆತ್ತಿದೆ. ನಾಗೇ ನನ್ನ ಮನೆಯಿಂದ ಹಣ ತಂದು ರಸ್ತೆ ಮಾಡಿಸಿದ್ದೇನೆ ಎನ್ನುವಂತೆ ಮಾತನಾಡುತ್ತೀರಲ್ಲ, ಆವಾಗ ನೀವು ಎಂಪಿಂ ಆಗಿದ್ರಾ ಪ್ರತಾಪ್ ಸಿಂಹ ಅವರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಹೈವೇಗೆ ಅಗತ್ಯವಾದ ಭೂಮಿ ಕೊಡಿಸಿದ್ದು, ಯಾರು ಪ್ರತಾಪ್ ಸಿಂಹ ಅವರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ, ಮಹದೇವಪ್ಪನವರು ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದರು. 

ಚಾಮುಂಡಿಬೆಟ್ಟ ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿಗೆ ರೋಪ್‌ ವೇ ಬೇಡ: ಸಂಸದ ಪ್ರತಾಪ ಸಿಂಹ

ಹೀಗಿರುವಾಗ ನಿಮ್ಮ ಮನೆಯಿಂದ ಹಣ ತಂದು ರಸ್ತೆ ಮಾಡಿರುವವರಂತೆ ಮಾತನಾಡುತಿದ್ದೀರಾ. ಕೊಡಗಿಗೆ ನೀವು ಏನು ಕೊಟ್ಟಿದ್ದೀರಾ ಹೇಳಿ. ನಾನು ಚಾಲೆಂಜ್ ಮಾಡುತ್ತೇನೆ, ಕೊಡಗಿಗೆ ಎಷ್ಟು ಅನುದಾನ ತಂದಿದ್ದೀರಾ ಬಿಳಿಹಾಳೆಯಲ್ಲಿ ಬರೆದು ಬಿಡುಗಡೆ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಲಕ್ಷ್ಮಣ್ ಸವಾಲು ಹಾಕಿದ್ದಾರೆ. ಬೆಂಗಳೂರು ಮೈಸೂರು ರಸ್ತೆಯಲ್ಲಿ ನಿಮಗೇನು ಲಾಭ ಆಗಿದೆ ಎನ್ನುವುದನ್ನು ಸೋಮಶೇಖರ್ ಎನ್ನುವವರು ಹೇಳುತ್ತಿದ್ದಾರೆ. 100 ಕೋಟಿ ಕಮೀಷನ್ ತೆಗೆದುಕೊಂಡಿದ್ದೀರಾ ಎಂದು ಹೇಳುತ್ತಿದ್ದಾರೆ ನಾವು ಹೇಳುತ್ತಿಲ್ಲ. ಜನರು ಹೇಳುತ್ತಿದ್ದಾರೆ. ಅದು ಸತ್ಯವಾ, ಸುಳ್ಳಾ ನೀವೆ ಹೇಳಿ ಎಂದು ಪ್ರತಾಪ್ ಸಿಂಹ ಅವರಿಗೆ ಲಕ್ಷ್ಮಣ್ ಪ್ರಶ್ನಿಸಿದ್ದಾರೆ.

click me!