'ಸಿಎಂ ಬದಲಾವಣೆಯಿಂದ ಏನೂ ಆಗಲ್ಲ.. ಇದು ಅಯೋಗ್ಯರ ಸರ್ಕಾರ'

By Suvarna News  |  First Published Jul 20, 2021, 8:16 PM IST

* ರಾಜ್ಯ ಸರ್ಕಾರದ ಮೇಲೆ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ವಾಗ್ದಾಳಿ
* ಮುಖ್ಯಮಂತ್ರಿ ಮೇಲೆ ಹೈಕಮಾಂಡ್ ಗೆ ವಿಶ್ವಾಸವಿಲ್ಲ
* ಅವರ ಪಕ್ಷದ ಮುಖಂಡರೇ ಬಿ.ಎಸ್.ವೈ.ಆಡಳಿತ ವಿಫಲ ಅಂತಾರೆ
* ಅರುಣ್ ಸಿಂಗ್ ರಾಜ್ಯಕ್ಕೆ ಬಂದ್ರು ಏನು ಪ್ರಯೋಜನ ಇಲ್ಲ


ಮಂಗಳೂರು(ಜು.  20)  ಸಿ.ಎಂ. ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ  ಕೆ.ಪಿ.ಸಿ.ಸಿ.ಕಾರ್ಯದರ್ಶಿ ಸಲೀಂ ಅಹ್ಮದ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಮುಖ್ಯಮಂತ್ರಿ ಮೇಲೆ ಹೈಕಮಾಂಡ್ ಗೆ ವಿಶ್ವಾಸವಿಲ್ಲ.  ಅವರ ಪಕ್ಷದ ಮುಖಂಡರೇ ಬಿ.ಎಸ್.ವೈ.ಆಡಳಿತ ವಿಫಲ ಅಂತಾರೆ. ಅರುಣ್ ಸಿಂಗ್ ರಾಜ್ಯಕ್ಕೆ ಬಂದ್ರು ಏನು ಪ್ರಯೋಜನ ಇಲ್ಲ ಎಂದಿದ್ದಾರೆ.

ವೈರಲ್ ಆಡಿಯೋಕ್ಕೆ ಕಟೀಲ್ ರಾಜಕೀಯ ವೈರಿ ಪ್ರತಿಕ್ರಿಯೆ

ಮೂರು ದಿನ ಬೆಂಗಳೂರಿನಲ್ಲಿ ಕುಳಿತು ಮೀಟಿಂಗ್ ಮಾಡಿದ್ರು ಅಷ್ಟೆ. ಯಡಿಯೂರಪ್ಪ ಹೋಗಬೇಕಾ ಇರಬೇಕಾ ಎಂಬುದೇ ಚರ್ಚೆ. ಜನರ ಜೀವನದ ಬಗ್ಗೆ ಸ್ವಲ್ಪನೂ ಕಾಳಜಿ ಇಲ್ಲದ ಸರ್ಕಾರ ಇದು.   ಇದೊಂದು ಅಯೋಗ್ಯರ ಸರ್ಕಾರ ಎಂದು ಟೀಕಿಸಿದರು.

Tap to resize

Latest Videos

ಮೊದಲು ರಾಜಕೀಯ ಸರ್ಕಸ್ ಮಾಡುವುದನ್ನ ನಿಲ್ಲಿಸಲಿ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನ ಮೊದಲು ಮಾಡಲಿ  ಎಂದು ಸಲಹೆ ನೀಡಿದರು.

click me!