ಬಿಜೆಪಿ ಆಯ್ತು ಈಗ ಕಾಂಗ್ರೆಸ್ ಸರದಿ, ಜಮೀರ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ಡಿಕೆಶಿ

By Suvarna NewsFirst Published Jun 19, 2021, 2:45 PM IST
Highlights

* ಶಾಸಕ ಜಮೀರ್ ಅಹ್ಮದ್‌ ಖಾನ್‌ ಎಚ್ಚರಿಕೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ
* ಯಾರೂ ಹದ್ದು ಮೀರಿ ಹೋಗಬಾರದು ಎಂದು ಹೇಳಿದ ಡಿಕೆಶಿ
* ಡಿಕೆ ಶಿವಕುಮಾರ್‌ ಹೇಳಿಕೆಗೂ ಜಮೀರ್ ಟಾಂಗ್

ಬೆಂಗಳೂರು, (ಜೂನ್.19): ನಾಯಕತ್ವ ಬದಲಾವಣೆ ವಿಚಾರವಾಗಿ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ ಸರದಿ

ಹೌದು...ಕಾಂಗ್ರೆಸ್‌ನಲ್ಲೂ ಸಹ ನಾಯಕತ್ವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕ ಜಮಿರ್ ಅಹ್ಮದ್ ಖಾನ್ ನಡುವೆ ಜಟಾಪಟಿ ಶುರುವಾಗಿದೆ.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಜಮೀರ್ ಅಹಮದ್ ಹೇಳಿಕೆಗೆ ಡಿಕೆ ಶಿವಕುಮಾರ್ ಗರಂ ಆಗಿದ್ದು, ಯಾರೂ ಹದ್ದು ಮೀರಿ ಹೋಗಬಾರದು ಅಂತ ಈಗಾಗಲೇ ಹೇಳಿದ್ದೇವೆ ಎಂದು ಮತ್ತೊಮ್ಮೆ ಜಮೀರ್ ಅಹ್ಮದ್ ಖಾನ್‌ಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕೋರ್ ಕಮಿಟಿ ಸಭೆ ಅಂತ್ಯ: ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದನ್ನು ಬಿಚ್ಚಿಟ್ಟ ಸಚಿವ .

ಬೆಂಗಳೂರಿನಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಘಟಿತ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಯಾರೇ ಲೀಡರ್ ಗೂ ಆಸೆ ಆಕಾಂಕ್ಷೆಗಳು ಇರಬಹುದು. ನಮ್ಮ ಡ್ಯೂಟಿ ಚೀಫ್ ಮಿನಿಸ್ಟರ್ ಅಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಡ್ಯೂಟಿ. ಯಾರೂ ಹದ್ದು ಮೀರಿ ಹೋಗಬಾರದು ಅಂತ ಈಗಾಗಲೇ ಹೇಳಿದ್ದೇವೆ. ಹೈಕಮಾಂಡ್ ಕೂಡ ಹೇಳಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಲ್ಲಿ ಇದ್ದೀನಿ.  ಅದು ಅವರ ವೈಯಕ್ತಿಕ ಅಭಿಪ್ರಾಯ ಹಾಗೂ ಮಾತು ಎಂದು ಜಮೀರ್‌ಗೆ ಎಚ್ಚರಿಸಿದರು.

ಡಿಕೆಶಿಗೆ ಮತ್ತೆ ಜಮೀರ್ ಡಿಚ್ಚಿ
ನಮ್ಮದು ಹೈ ಕಮಾಂಡ್ ಪಕ್ಷ. ಸಿಎಂ ಯಾರು ಆಗಬೇಕು ಅನ್ನೋದನ್ನ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ನಾನು ಅಥವ ಡಿ.ಕೆ.ಶಿವಕುಮಾರ್ ತೀರ್ಮಾನ ಮಾಡೋಕೆ ಆಗಲ್ಲ ಎಂದು ಜಮೀರ್ ಅಹ್ಮದ್ ಖಾನ್‌ ಡಿಕೆಶಿಗೆ ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ನನ್ನ ವೈಯುಕ್ತಿಕ ಹೇಳಿಕೆ. ರಾಜ್ಯದ ಜನರ ಅಭಿಪ್ರಾಯ ನಾನು ಹೇಳಿದ್ದೇನೆ ಅಷ್ಟೆ. ಆದರೆ ಅಂತಿಮವಾಗಿ ಯಾರು ಸಿಎಂ ಆಗಬೇಕು ಅನ್ನೋದನ್ನ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಈ ವಿಚಾರದಲ್ಲಿ ನನಗೆ ಯಾಕೆ ನೋಟಿಸ್ ಕೊಡ್ತಾರೆ..? ಈ ಹಿಂದೆಯು ಯಾವ ವಿಚಾರದಲ್ಲು ನನಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿಲ್ಲ ಎಂದರು.

click me!