MLC Election: 'ಬಿಜೆಪಿ ವೀಕ್ ಆಗಿದೆ ಎಂದು ಯಡಿಯೂರಪ್ಪರಿಂದ ಒಂದು ದೊಡ್ಡ ಸಂದೇಶ'

By Suvarna News  |  First Published Dec 7, 2021, 4:00 PM IST

* ಕರ್ನಾಟದಲ್ಲಿ ರಂಗೇರಿದ ವಿಧಾನಪರಿಷತ್ ಚುನಾವಣೆ
* ಜೆಡಿಎಸ್ ಬೆಂಬಲ ಕೋರಿದ್ದ ಬಿಎಸ್‌ವೈಗೆ ಡಿಕೆ ಶಿವಕುಮಾರ್ ಟಾಂಗ್
* ಬಿಜೆಪಿಗೆ ಬೆಂಬಲಿಸುವ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ


ಬೆಂಗಳೂರು,(ಡಿ.07):  ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ (Karnataka MLC Election) ರಂಗೇರಿದ್ದು, ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್(JDS) ನಾಯರು ಭರ್ಜರಿ ಪ್ರಚಾರದಲ್ಲಿ ತೊಗಿದ್ದಾರೆ.

ಇನ್ನು ಈ ಚುನಾವಣೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಅವರು ಬಹಿರಂಗವಾಗಿಯೇ ಜೆಡಿಎಸ್ ಬೆಂಬಲ ಕೋರಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವ್ಯಂಗ್ಯವಾಡಿದ್ದಾರೆ.

Tap to resize

Latest Videos

undefined

MLC Election: ರಂಗೇರಿದ ಪರಿಷತ್ ಚುನಾವಣೆ, ಸ್ಫೋಟಕ ಹೇಳಿಕೆ ಕೊಟ್ಟ ಬಿಎಸ್‌ವೈ

ಬೆಂಗಳೂರಿನಲ್ಲಿ(Bengaluru) ಇಂದು (ಡಿ.07) ಸುದ್ದಿಗಾರರೊಂದಿಗೆ ಮಾತನಾಡಿ ಡಿಕೆಶೀ, ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಬಿಎಸ್ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಮೂಲಕ ಬಿಎಸ್ ಯಡಿಯೂರಪ್ಪರಿಂದ ಭಾರತೀಯ ಜನತಾ ಪಾರ್ಟಿ ವೀಕ್ ಆಗಿದೆ ಎಂಬ ಸಂದೇಶ ರವಾನೆಯಾಗಿದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ, ರಾಜ್ಯದಲ್ಲಿ ಎರಡೂ ಕಡೆ ಅವರದ್ದೇ ಸರ್ಕಾರವಿದೆ. ಆದರೂ ಅವರ ಅಭ್ಯರ್ಥಿ ಸೋಲುತ್ತಾರೆಂಬ ಭಯ ಬಂದಿದೆ. ಅವರ ಭಯಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಮತ್ತೊಂದಿಲ್ಲ ಎಂದು ಹೇಳಿದರು. 

ಅರುಣ್ ಸಿಂಗ್ ಜೆಡಿಎಸ್ ಬಗ್ಗೆ ಬಾಯಿಗೆಬಂದಂತೆ ಮಾತಾಡಿದ್ದರು. ಆದರೆ ನಾವು ಮಾತ್ರ ಬಿಜೆಪಿಯಿಂದ ದೂರವಾಗಿ ಇದ್ದೇವೆ. ಜೆಡಿಎಸ್ ಜೊತೆ ನಾವು ಕೆಲವು ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಬಿಜೆಪಿ ಸದ್ಯಕ್ಕೆ ಮರ್ಯಾದೆಗೆ ಸೀಟ್ ಉಳಿಸಿಕೊಳ್ಳಬೇಕಿದೆ. ಕೋಲಾರದಲ್ಲಿ ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು.

Council Election Karnataka : ಯಡಿಯೂರಪ್ಪ ಹಾಗೂ ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ

ಬಹಿರಂಗ ಹೇಳಿಕೆ ನೀಡಿದ್ದ ಬಿಎಸ್ವೈ
ಈಗಾಗಲೇ ನಾನು ಬಹಿರಂಗವಾಗಿಯೇ ಹೇಳಿದ್ದೇನೆ. ಕುಮಾರಸ್ವಾಮಿ ಅವರೊಂದಿಗೆ ಮಾತಾಡಿರುವೆ. ಎಲ್ಲಿ (ದಾವಣಗೆರೆ) ಜೆಡಿಎಸ್ ಅಭ್ಯರ್ಥಿಗಳು ಇಲ್ಲಾ ಅಲ್ಲಿ ಬಿಜೆಪಿಗೆ ಸಹಕಾರ ನೀಡಬೇಕು ಎಂದಿದ್ದೇನೆ. ನೂರಕ್ಕೆ ನೂರು ಸಹಕಾರ ನೀಡುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurapppa) ವಿಶ್ವಾಸ ವ್ಯಕ್ತಪಡಿಸಿದ್ದರು.

ಇದೇ ವೇಳೆ ಸಿದ್ದರಾಮಯ್ಯ ಜೆಡಿಎಸ್ -ಬಿಜೆಪಿ ಬಿ ಟೀಮ್ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್​ವೈ​, ಪ್ರತಿಪಕ್ಷ ನಾಯಕ ಎನ್ನುವುದನ್ನ ಮರೆತು ಹೇಳಿಕೆ ನೀಡುತ್ತಿದ್ದಾರೆ. ಮೈಸೂರನಲ್ಲಿಯೇ ಸೋತು ಹೀಗೆ ಮಾತಾಡುವುದು ಸರಿಯಲ್ಲ. ಇವರ ಸೊಕ್ಕಿನ ದಿಮಾಕಿನ ಮಾತುಗಳಿಗೆ ಚುನಾವಣೆ ಉತ್ತರ ನೀಡಲಿದೆ ಅಂತ ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ಹೇಳಿಕೆ
ವಿಧಾನ‌ ಪರಿಷತ್ ಚುನಾವಣೆ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತಳೆದಿರುವ ನಿಲುವನ್ನು ಬಹಿರಂಗಪಡಿಸುವ ಸಲುವಾಗಿ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. 

ವಿಧಾನ‌ ಪರಿಷತ್ ಚುನಾವಣಾ ಪ್ರಚಾರದ ಅಂತಿಮ ಹಂತಕ್ಕೆ ಬಂದಿದ್ದೇವೆ. ಪರಿಷತ್ ಚುನಾವಣೆಯ ಜೆಡಿಎಸ್ ನಿಲುವಿನ ಬಗ್ಗೆ ಸಾಕಷ್ಟು ಕುತೂಹಲ ಇದೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಊಹಾಪೋಹದ ಸುದ್ದಿಗಳು ಬಂದಿವೆ. ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್ ಪಕ್ಷವು ನಮ್ಮ ಜೆಡಿಎಸ್ ಪಕಗಷವನಗನು ಬಿಜೆಪಿ ಬಿ ಟೀಮ್ ಎಂದು ಹೇಳುತ್ತಿದೆ. ಜೆಡಿಎಸ್ ಆರು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿ ಬೇರೆ ಕಡೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದೂ ಹೇಳುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷವು ನಮ್ಮಿಂದ ಯಾವುದೇ ಬೆಂಬಲ ಕೋರಿಲ್ಲ. ಅದರೆ ಯಡಿಯೂರಪ್ಪ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ನಮಗೆ ಬೆಂಬಲ ನೀಡಿ ಎಂದು ಹೇಳಿದ್ದಾರೆ. ಅಷ್ಟಕ್ಕೆ ಅದು ಸೀಮಿತವಾಗಿದೆ. ಹಾಗಂತ ಇದು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ನೀಡಿ ಎಂದು ಹೇಳಿರುವುದು ಅಂತಾ ಹೆಚ್​ಡಿ ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಡಿಕೆಶಿ ವಿರುದ್ಧ ಸಿಟಿ ರವಿ ವಾಗ್ದಾಳಿ
ಕಾಂಗ್ರೆಸ್​ನಲ್ಲಿ ಇದ್ದಾಗ ಅಕ್ರಮ ಆಸ್ತಿ ಮಾಡಿದ್ರು ಅಂತ ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಅಂತ ಸಿಟಿ ರವಿ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅವರು ಬಿಜೆಪಿ ಸೇರಲಿಲ್ಲ ಅಂತ ಚಾರ್ಜ್ ಶೀಟ್ ಆಗಿಲ್ಲ. ಅಕ್ರಮ ಆಸ್ತಿ ಸಂಬಂಧಿಸಿದಂತೆ ಚಾರ್ಜ್ ಶೀಟ್ ಆಗಿದೆ. ನಾಯಕತ್ವಕ್ಕಾಗಿ ಕಾಂಗ್ರೆಸ್ನಲ್ಲಿ ಅಂತರ್ಯುದ್ದ ಆಗುತ್ತಿದೆ. ವಿಚಾರವನ್ನ ವಿಷಯಾಂತರ ಮಾಡಲು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಪಾಲಿಟಿಕ್ಸ್ ಬೇರೆ, ಅವರ ನಾಯಕತ್ವವೇ ಬೇರೆ. ಗೂಂಡಾಗಿರಿ ಮಾಡುವುದೇ ಡಿಕೆ ಶಿವಕುಮಾರ್ ಸಂಸ್ಕೃತಿ ಅಂತ ರವಿ ವಾಗ್ದಾಳಿ ನಡೆಸಿದ್ದಾರೆ.

click me!