ಕೆಪಿಸಿಸಿ ಅಧ್ಯಕ್ಷರೇ ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ಬೆಂಬಲಕ್ಕೆ ಬರುವಂತೆ ಸಿದ್ದುಗೆ ಕಾಂಗ್ರೆಸ್ ಶಾಸಕ ಮನವಿ

By Suvarna NewsFirst Published Mar 1, 2021, 2:30 PM IST
Highlights

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಂಭೀರ ಆರೋಪ ಮಾಡಿದ್ದು, ತಮ್ಮ ಪರ ನಿಲ್ಲುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಬೆಂಗಳೂರು, (ಮಾ.01): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅಳಲು ತೋಡಿಕೊಂಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುಲಿಕೇಶಿನಗರದಲ್ಲಿ ಕಣಕ್ಕಿಳಿಸುವ ಸಂಬಂಧ ಡಿಕೆ ಶಿವಕುಮಾರ್ ಅವರು ಪ್ರಸನ್ನ ಕುಮಾರ್ ಅವರನ್ನ ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ ಎನ್ನಲಾಗಿದೆ.

'ಮುಂದಿನ ಚುನಾವಣೆಯಲ್ಲಿ ಅಖಂಡಗೆ ಟಿಕೆಟಿಲ್ಲ'

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಖಂಡ ಶ್ರೀನಿವಾಸ್‌ ಮೂರ್ತಿ, ಪಕ್ಷದ ಶಾಸಕನ ಮೇಲೆ ಪಕ್ಷದ ಅಧ್ಯಕ್ಷರು ಟಾರ್ಗೆಟ್ ಮಾಡ್ತಿದ್ದಾರೆ. ನಾನು ಶಾಸಕನಾಗಿರುವಾಗ ನನ್ನ ವಿರುದ್ಧ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್ ಅವರನ್ನ ಪಕ್ಷಕ್ಕೆ ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಅಧ್ಯಕ್ಷರು ನನ್ನ ಪರ ನಿಂತಿಲ್ಲ. ಅಧ್ಯಕ್ಷರಾಗಿ ಅವರು ಹೀಗೆ ಮಾಡಬಾರದು. ಸಂಪತ್ ರಾಜ್ ಅವರನ್ನ ಸಸ್ಪೆಂಡ್ ಮಾಡಲು ಡಿಕೆಶಿಗೆ ಮನವಿ ಮಾಡಿದ್ದೆ. ಇನ್ನೂ ವರೆಗೆ ಸಂಪತ್ ರಾಜ್ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಸಂಪತ್ ರಾಜ್ ಪರವೇ ಅವರು ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಗಲಭೆ ಆರೋಪಿ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ರೆಡಿ; ಅಖಂಡ ಶ್ರೀನಿವಾಸ್ ಕಿಡಿ!

ಹೈಕಮಾಂಡ್ ಈ ಎಲ್ಲ ವಿಚಾರ ತಿಳಿಸ್ತೇನೆ. ಸಂಪತ್ ರಾಜ್ ಕ್ರಮ ಕೈಗೊಳ್ಳಲಯ ಹೈಕಮಾಂಡ್ ಗೆ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಅವರನ್ನೇ ಹೈಕಮಾಂಡ್ ಬಳಿ ಕರೆದುಕೊಂಡು ಹೋಗಿ ನನಗೆ ಆದ ಅನ್ಯಾಯವನ್ನ ವಿವರಿಸ್ತೇನೆ ಎಂದರು.

ಬೆಂಬಲಕ್ಕೆ ನಿಲ್ಲುವಂತೆ ಸಿದ್ದುಗೆ ಮನವಿ
ನಾನೇಕೆ ಟಿಕೆಟ್ ಬಿಟ್ಟುಕೊಡಲಿ. ನಾನು‌ ಹಾಲಿ ಶಾಸಕ. ಹೈಕಮಾಂಡ್ ಏನು ಹೇಳುತ್ತೆ ನೋಡೋಣ. ನನಗೆ ಟಿಕೆಟ್ ಸಿಗಲ್ಲ ಅನ್ನೋಕೆ ಪ್ರಸನ್ನ ಕುಮಾರ್ ಯಾರು ಎಂದು ಪ್ರಶ್ನಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನನ್ನ ಪರ ಇದ್ದಾರೆ. ನನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತಂದವರೇ ಸಿದ್ದರಾಮಯ್ಯ, ಜಮೀರ್ ಅವರು. ಸಿದ್ದರಾಮಯ್ಯ ಅವರೇ ನನ್ನ ರಕ್ಷಣೆಗೆ ಬರಬೇಕು ಎಂದು ಮನವಿ ಮಾಡಿಕೊಂಡರು.

click me!