
ಬೆಂಗಳೂರು (ಡಿ.10): ನಮ್ಮ ಜವಾಬ್ದಾರಿ ಕಂಡು ಪರಮೇಶ್ವರ್ ಅವರು ಅನುಕಂಪದಿಂದ ಈ ರೀತಿ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರು ಕಷ್ಟಪಡುತ್ತಿದ್ದು, ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ದಿನದಲ್ಲಿ ಕೇವಲ 24 ಗಂಟೆ ಮಾತ್ರ ಇದೆ. ಇನ್ನು ಹೆಚ್ಚಾಗಿದ್ದರೆ ಇನ್ನು ಹೆಚ್ಚಾಗಿ ದುಡಿಯಬಹುದಾಗಿತ್ತು. ನಮ್ಮ ಮುಂದಿರುವ ಸವಾಲಿನ ಬಗ್ಗೆ ಅವರಿಗೂ ಗೊತ್ತಿದೆ. ಎಲ್ಲವೂ ಸುಲಭವಾಗಿ ಸಿಗುವುದಿಲ್ಲ.
ಬಿಜೆಪಿ ಅವರದು ಡಬಲ್ ಇಂಜಿನ್ ಸರ್ಕಾರ, ಅವರು ಸಾಂವಿಧಾನಿಕ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು, ಪೊಲೀಸ್ ಅಧಿಕಾರಿಗಳು, ರೌಡಿಗಳು ಹೀಗೆ ಅನೇಕರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜವಾಬ್ದಾರಿ ಕಂಡು ಪರಮೇಶ್ವರ್ ಅವರು ಅನುಕಂಪದಿಂದ ಈ ರೀತಿ ಹೇಳಿದ್ದಾರೆ. ಇಲ್ಲಿ ನಾವು ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗಬೇಕು. ನಾವು ಒಬ್ಬರೆ ಹೋಗುವುದಾದರೆ ವೇಗವಾಗಿ ಹೋಗಬಹುದು, ನಾವು ದೂರದವರೆಗೂ ಹೋಗಬೇಕಾದರೆ ನಾವು ಎಲ್ಲರ ಜತೆಗೂಡಿ ಸಾಗಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ’ ಎಂದರು.
ಎಲೆಕ್ಷನ್‌ನಲ್ಲಿ ಹೊಸಬರಿಗೆ ಅವಕಾಶ: ಡಿಕೆಶಿ ಸುಳಿವು
ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಒದ್ದಾಡುತ್ತಾರೆ: ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿ.ಕೆ.ಶಿವಕುಮಾರ್ ಒದ್ದಾಡುತ್ತಾರೆ ಎನ್ನುವ ಮೂಲಕ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ. ಕೊರಟಗೆರೆ ತಾಲೂಕು ವಡ್ಡಗೆರೆಯಲ್ಲಿ ಮಾತನಾಡಿ ಬೆಳಗ್ಗೆ ಎದ್ದರೆ ನಮ್ಮ ಶಿವಕುಮಾರಣ್ಣ ಒದ್ದಾಡುತ್ತಾರೆ. ನಾವು ಜೊತೆಗಿದ್ದೇವೆ, ಸುಮ್ಮನೆ ಧೈರ್ಯವಾಗಿರಪ್ಪ ಅಂತಾ ಹೇಳುತ್ತೀವಿ ಎಂದು ಪರಮೇಶ್ವರ್ ತಿಳಿಸಿದರು.
ಯಾವುದೇ ವ್ಯಕ್ತಿ ಹಾಗೂ ಪಕ್ಷ ಬರಬೇಕಾದರೆ ನಮ್ಮ ಉದ್ದೇಶ ಏನು, ನಮ್ಮ ಕ್ಷೇತ್ರದ ಕೆಲಸ ಏನು ಎಂಬುದರ ಬಗ್ಗೆ ಸಾಮರ್ಥ್ಯ ಇರಬೇಕು. ಆ ಸಾಮರ್ಥ್ಯ ನನಗಿದೆ ಅಂತ ನಾನು ಅಂದುಕೊಂಡಿದ್ದೇನೆ. ಬೇರೆಯವರಿಗೆ ಸಾಮರ್ಥ್ಯ ಇದೆಯೋ, ಇಲ್ಲವೋ ಅದು ಅವರಿಗೆ ಬಿಟ್ಟಿದ್ದು, ಈ ಬಗ್ಗೆ ಟೀಕೆ ಟಿಪ್ಪಣಿ ಮಾಡೊಕ್ಕೆ ಹೋಗುವುದಿಲ್ಲ. ನನಗೆ ಸಾಮರ್ಥ್ಯ ಇದೆ, ಈ ರಾಜ್ಯದಲ್ಲಿ ಒಬ್ಬ ಸಮರ್ಥ ನಾಯಕ ಅಂತ ಕಾಂಗ್ರೆಸ್ ಪಕ್ಷ ನನ್ನ ಗುರುತಿಸಿ 8 ವರ್ಷ ಪಕ್ಷದ ಅಧ್ಯಕ್ಷನಾಗಿ ಇಟ್ಟಿದ್ದರು ಎಂದರು.
ಪಂಚಮಸಾಲಿ 2ಎ ಮೀಸಲಾತಿ: ಡಿಕೆಶಿ, ಸಿದ್ದು ಭೇಟಿಯಾದ ವಚನಾನಂದ ಶ್ರೀ
ಕಾಂಗ್ರೆಸ್ ಪಕ್ಷದಲ್ಲಿ ಸುಮ್ಮ ಸಮ್ಮನೆ ಅಧ್ಯಕ್ಷರನ್ನಾಗಿ ಕೂರಿಸುತ್ತಾರೋ ಅಂತ ತಿಳಿಸಿದ ಪರಮೇಶ್ವರ್ ಒಂದು ವರ್ಷ, ಎರಡು ವರ್ಷ ಇರೋದೆ ಕಷ್ಟ, ಆದರೆ 8 ವರ್ಷ ಅಧ್ಯಕ್ಷರಾಗಿ ಇಟ್ಟಿದ್ದರು. ಈತ ಮ್ಯಾನೇಜ್ ಮಾಡುತ್ತಾನೆ, ಈತನಿಗೆ ಸಾಮರ್ಥ್ಯ ಇದೆ ಅನ್ನುವ ಕಾರಣಕ್ಕೆ ಅಷ್ಟುವರ್ಷ ಇಟ್ಟಿದ್ದರು ಎಂದರು. ಪಕ್ಷವನ್ನು ಎರಡು ಬಾರಿ ಚುನಾವಣೆಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆಯಲ್ಲಾ ಅದು ಸುಮ್ಮನೆ ಅಲ್ಲ ಎಂದ ಪರಮೇಶ್ವರ್ 224 ಜನರಿಗೆ ಟಿಕೆಚ್ ಕೊಡಬೇಕು, ಗೆಲ್ಲಿಸಬೇಕು, ಸರ್ಕಾರ ಮಾಡಬೇಕು. ಇದೆಲ್ಲಾ ಸಾಮಾನ್ಯ ಅಲ್ಲ. ನಿಮ್ಮ ಆಶೀರ್ವಾದ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿವರೆಗೂ ನನಗೆ ಸಾಮರ್ಥ್ಯ ಇರುತ್ತೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.