ಸಿ.ಟಿ.ರವಿಯೇ ಉರೀಗೌಡ, ಅಶ್ವತ್ಥನಾರಾಯಣನೇ ನಂಜೇಗೌಡ: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Mar 22, 2023, 1:41 PM IST
Highlights

ಉರಿಗೌಡ ಮತ್ತು ನಂಜೇಗೌಡ ಅನ್ನೋರು ಯಾರೂ ಇಲ್ಲ. ಸಿ.ಟಿ.ರವಿಯೇ ಉರೀಗೌಡ, ಅಶ್ವತ್ಥನಾರಾಯಣನೇ ನಂಜೇಗೌಡ. ಮೊದಲು 40 ಪರ್ಸೆಂಟ್‌ ಫೈಲ್‌ ಹಾಗೂ ಕೊರೋನಾ ಸಂದರ್ಭದ ಭ್ರಷ್ಟಾಚಾರದ ಬಗ್ಗೆ ಸಿನಿಮಾ ತೆಗೆಯಲಿ. 

ಮಂಡ್ಯ/ನಾಗಮಂಗಲ (ಮಾ.22): ಉರಿಗೌಡ ಮತ್ತು ನಂಜೇಗೌಡ ಅನ್ನೋರು ಯಾರೂ ಇಲ್ಲ. ಸಿ.ಟಿ.ರವಿಯೇ ಉರೀಗೌಡ, ಅಶ್ವತ್ಥನಾರಾಯಣನೇ ನಂಜೇಗೌಡ. ಮೊದಲು 40 ಪರ್ಸೆಂಟ್‌ ಫೈಲ್‌ ಹಾಗೂ ಕೊರೋನಾ ಸಂದರ್ಭದ ಭ್ರಷ್ಟಾಚಾರದ ಬಗ್ಗೆ ಸಿನಿಮಾ ತೆಗೆಯಲಿ. ಈ ಬಗ್ಗೆ ಎರಡು ಸಿನಿಮಾ ತೆಗೆದರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು. ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಂಗಳವಾರ ನಡೆದ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ, ಉರೀಗೌಡ ನಂಜೇಗೌಡರ ವಿಚಾರ ಮುಂದಿಟ್ಟುಕೊಂಡು ಸಿ.ಟಿ.ರವಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಆರ್‌.ಅಶೋಕ್‌ ಹೊಸದಾಗಿ ಸ್ಟೋರಿ ಬರೆಯುತ್ತಿದ್ದಾರೆ. ಸಿನಿಮಾ ತೆಗೆಯೋಕೆ ಮತ್ಯಾರೋ ಒಬ್ಬ. ಇದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸವಾಗಿದೆ. ನಾವ್ಯಾರು ಹೇಡಿಗಳಲ್ಲ, ಬಿಜೆಪಿಯವರ ಈ ಕೆಲಸವನ್ನು ಖಂಡಿಸುತ್ತೇನೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಅವನ್ಯಾವನನ್ನೋ ಕರೆದು ಸಿನಿಮಾ ಮಾಡಬೇಡ ಎಂದು ಕೂರಿಸಿ ಶ್ರೀಗಳು ಮಾತನಾಡಬಾರದಿತ್ತು. ನಮ್ಮ ಒಕ್ಕಲುತನಗಳ ಬಗ್ಗೆ ನೂರು ಸಿನಿಮಾ ಮಾಡಲಿ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವ ಕಾರಣಕ್ಕೂ ಬಿಡೋದಿಲ್ಲ. ಇವರ ವಿರುದ್ಧ ಹೋರಾಟಕ್ಕೆ ನಿರ್ಮಲಾನಂದನಾಥಶ್ರೀಗಳು ನೇತೃತ್ವ ವಹಿಸಬೇಕು. ಇಲ್ಲವಾದರೆ ಒಂದು ಪಕ್ಷದ ಅಧ್ಯಕ್ಷನಾಗಿ ನಾನೇ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಉರಿಗೌಡ, ನಂಜೇಗೌಡ ವಿಚಾರವನ್ನು ಪಠ್ಯಕ್ಕೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಯಾವ ಪಠ್ಯನೂ ಇಲ್ಲ. ಅದನ್ನೆಲ್ಲ ಸ್ಕೂಲ್‌ ಮೇಷ್ಟು್ರ ಕೇಳಿ. ಅಶ್ವತ್ಥನಾರಾಯಣ, ಸಿ.ಟಿ.ರವಿಗೆ ಪಾಠ ಹೇಳಿಕೊಟ್ಟಮೇಷ್ಟ್ರನ್ನ ಕೇಳಿ. ಅವರೆನಾದರೂ ಹೇಳಿಕೊಟ್ಟಿದ್ದರಾ ಎಂದು ಪ್ರಶ್ನಿಸಿದರು.

Latest Videos

ಕೋಲಾರದಲ್ಲಿ ಸ್ಪರ್ಧಿಸದಂತೆ ಹೈಕಮಾಂಡ್‌ ಹೇಳಿಲ್ಲ: ಸಿದ್ದರಾಮಯ್ಯ

ವರ ಕೊಡೋದು ದೇವರು: ಶ್ರೀಕ್ಷೇತ್ರದ ಕಾಲಭೈರವೇಶ್ವರಸ್ವಾಮಿಗೆ ಅಮಾವಾಸ್ಯೆಯಂದು ವಿಶೇಷ ಪೂಜೆ ಮಾಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನೀವು ಸಿಎಂ ಮಾಡುವಂತೆ ಸ್ವಾಮಿಗೆ ಹರಕೆ ಕಟ್ಟಿಕೊಂಡಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ದೇವರನ್ನು ಕೇಳೋದು ನಾನು, ವರ ಕೊಡೋದು ದೇವರು. ಸಂಕಲ್ಪ ಮಾಡಿಕೊಳ್ಳುವುದು ನನಗೂ ಭಗವಂತನಿಗೂ ಬಿಟ್ಟಿದ್ದು. ಅದಕ್ಕೆ ಪೂಜಾರಿಗಳು ಬೇಕಿಲ್ಲ ಎಂದರು. ಮತ್ತೆರಡು ಅಮಾವಾಸ್ಯೆ ಪೂಜೆಗೆ ಬರ್ತಿರಾ ಎಂಬ ಪ್ರಶ್ನೆಗೆ ಮುಂದಿನ ಅಮಾವಾಸ್ಯೆ ಪೂಜೆಗೆ ಬಂದರೆ ನಿಮಗೆ ತಿಳಿಸುತ್ತೇನೆ ಬಿಡಿ ಎಂದು ಪರೋಕ್ಷವಾಗಿ ಆದಿಚುಂಚನಗಿರಿಯಲ್ಲಿ ಸಿಎಂ ಆಸೆ ಬಿಚ್ಚಿಟ್ಟರು.

ಈ ವರ್ಷ ದೊಡ್ಡ ಬದಲಾವಣೆ: ಈ ವರ್ಷ ರಾಜ್ಯದಲ್ಲಿ ದೊಡ್ಡ ವ್ಯತ್ಯಾಸ, ಬದಲಾವಣೆಯಾಗುತ್ತಿದೆ. ಅಮಾವಾಸ್ಯೆಯಲ್ಲಿ ಕ್ಷೇತ್ರದ ಕಾಲಭೈರವನಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಅದಕ್ಕಾಗಿ ನಾಡಿಗೆ ಮತ್ತು ನಮ್ಮ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವ ಸಲುವಾಗಿ ಪತ್ನಿ ಜೊತೆಗೂಡಿ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದ ಡಿಕೆಶಿ, ಧಾರ್ಮಿಕ ಕ್ಷೇತ್ರವೆಂದರೆ ನಮಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ. ದೇವಾಲಯದಲ್ಲಿ ನಾನು ಏನು ಕೇಳುತ್ತೇನೋ ದೇವರು ಏನು ವರ ಕೊಡುತ್ತಾನೋ ಕಾದು ನೋಡೋಣ ಎಂದರು. ನನಗೆ ಧರ್ಮ, ದೇವರು ಮತ್ತು ಮಠಗಳ ಮೇಲೆ ಅಪಾರ ಗೌರವವಿದೆ. ಸಮಾಜ ಶಾಂತಿ, ನೆಮ್ಮದಿಯಾಗಿರಬೇಕೆಂದು ಸರ್ಕಾರ ಮಾಡದ ಕೆಲಸಗಳನ್ನು ಮಠಮಾನ್ಯಗಳು ಮಾಡುತ್ತಿವೆ. ನಮ್ಮ ಮಠದ ಶ್ರೀಗಳನ್ನು ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದೇನೆ. ಶ್ರೀಗಳು ನನಗೆ ಆಶೀರ್ವಾದ ಮಾಡುತ್ತಾರೆಂಬ ನಂಬಿಕೆಯಿದೆ. ನಮ್ಮ ಮಠಕ್ಕೆ ನಾನು ಬರುವುದು, ಪೂಜೆ ಮಾಡುವುದು ಸಾಮಾನ್ಯ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದರು.

ಶ್ರೀಗಳು ಹೋರಾಟದ ನೇತೃತ್ವ ವಹಿಸಲಿ: ಉರಿಗೌಡ, ನಂಜೇಗೌಡ ವಿಚಾರದ ಹೋರಾಟಕ್ಕೆ ನೇತೃತ್ವ ವಹಿಸುವಂತೆ ಕೇಳಿದ್ದೇನೆ. ಖಂಡಿತವಾಗಿಯೂ ಅವರು ನೇತೃತ್ವ ವಹಿಸಬೇಕು. ಒಪ್ಪಿಕೊಳ್ಳುವುದು ಬಿಡುವುದರ ಬಗ್ಗೆ ಪ್ರಶ್ನೆ ಇಲ್ಲ. ಈ ಸಮಾಜದ ಸ್ವಾಭಿಮಾನ ಉಳಿಸಬೇಕೆಂದರೆ ನೇತೃತ್ವ ವಹಿಸಿಕೊಳ್ಳುವುದು ಶ್ರೀಗಳ ಜವಾಬ್ದಾರಿ. ಚುಂಚನಗಿರಿ ಶ್ರೀಗಳು ಮಾತ್ರವಲ್ಲ ಹಿಂದೂ ಧರ್ಮದ ಶ್ರೀಗಳನ್ನು ಒಟ್ಟಿಗೆ ತೆಗೆದುಕೊಳ್ಳಬೇಕು. ರಾಷ್ಟ್ರದ್ರೋಹಿ, ಸಮಾಜ ದ್ರೋಹಿ ವಿರುದ್ಧ ಶ್ರೀಗಳು ಹೋರಾಟ ಮಾಡಬೇಕು ಎಂದರು. ಅವನ್ಯಾವನನ್ನೋ ಕರೆದು ಮಾತನಾಡುವುದು ಸೂಕ್ತವಲ್ಲ. ಮಾತನಾಡುವ ಅವಶ್ಯಕತೆಯೂ ಇಲ್ಲ. ಒಕ್ಕಲಿಗ ಸಮಾಜ ಬಹು ದೊಡ್ಡ ಸಮಾಜವೇ ಹೊರತು ಭಿಕ್ಷೆ ಬೇಡುವ ಸಮಾಜವಲ್ಲ. ನಮ್ಮಲ್ಲಿ ಛಲವಿದೆ, ಸ್ವಾಭಿಮಾನವಿದೆ ಯಾರಿಗೆ ಉತ್ತರ ಕೊಡಬೇಕೋ ಕೊಡುತ್ತೇವೆ. ಯುದ್ಧ ಇವತ್ತಿನ ಕಾಲದಿಂದ ಇಲ್ಲ. ದೇವಾನು ದೇವತೆಗಳು ಯುದ್ಧವನ್ನು ಸೃಷ್ಟಿಮಾಡಿದ್ದಾರೆ. ಬಿಲ್ಲು-ಬಾಣ ಬಿರುಸು, ಮಲ್ಲಯುದ್ಧ ಎಲ್ಲವನ್ನೂ ಸೃಷ್ಟಿಮಾಡಿದ್ದಾರೆ. ಎಲ್ಲಾ ರೀತಿಯ ಯುದ್ಧ ಇರುವಾಗ ಒಕ್ಕಲಿಗ ಸಮಾಜ ಹಿಂಬಾಲಕರನ್ನು ಬೇಡುವ ಸಮಾಜವಲ್ಲ ಎಂದರು.

ಕಾಂಗ್ರೆಸ್‌ ಗ್ಯಾರಂಟಿಗಳನ್ನು ಜನ ನಂಬಲ್ಲ: ಸಿಎಂ ಬೊಮ್ಮಾಯಿ

ಚಿಂಚನಸೂರು ಕಾಂಗ್ರೆಸ್‌ ಸೇರ್ಪಡೆ ವಿಚಾರ: ಚಿಂಚನಸೂರು ಅಂತಾ ಹೆಸರು ಕೊಟ್ಟು ಮಂತ್ರಿ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಅವರು ಹಿರಿಯ ಕಾಂಗ್ರೆಸ್‌ ನಾಯಕರು, ಅವರಿಗೆ ಪಕ್ಷ ದೊಡ್ಡ ಸ್ಥಾನವನ್ನು ಕೊಟ್ಟು ಬೆಳೆಸಿದೆ. ಯಾವುದೋ ವ್ಯತ್ಯಾಸಗಳು ಆದಾಗ ಕಾಂಗ್ರೆಸ್‌ ಬಿಟ್ಟಿದ್ದರು. ಬಹಳಷ್ಟುಜನ ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಅಲ್ಲಿಂದ ನಮ್ಮಲ್ಲಿಗೂ ಬಂದಿದ್ದಾರೆ. ಅಶೋಕ್‌ ಮತ್ತು ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಕೆಲವು ಮಂತ್ರಿಗಳು ಮಾತನಾಡಿದ್ದರು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಇದು ಸರ್ವೇ ಸಾಮಾನ್ಯ. ನಾವು ಯಾರಿಗೂ ಒತ್ತಡ ಹೇರುತ್ತಿಲ್ಲ. ಜೆಡಿಎಸ್‌ನಿಂದಲೂ ಬಹಳಷ್ಟುಜನ ಹೊರಗೆ ಬರುತ್ತಿದ್ದಾರೆ. ಬರುವವರು ಯಾರೂ ಸಹ ದಡ್ಡರಲ್ಲ ಎಂದರು.

click me!