ಇದು ಲಂಚಾವತಾರ, ಮಂಚಾವತಾರ ಸರ್ಕಾರ: ಡಿ.ಕೆ.ಶಿವಕುಮಾರ್‌

By Govindaraj SFirst Published Jan 12, 2023, 3:20 AM IST
Highlights

ರಾಜ್ಯದಲ್ಲಿ ಇರುವುದು ಲಂಚಾವತಾರ, ಮಂಚಾವತಾರ, ಬಿ ರಿಪೋರ್ಟ್‌ ಬರೆಯುವ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದ್ದಾರೆ. ‘ಪ್ರಜಾಧ್ವನಿ ಬಸ್‌ ಯಾತ್ರೆ’ ನಿಮಿತ್ತ ನಗರದ ಆರ್‌.ಡಿ.ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

ಚಿಕ್ಕೋಡಿ (ಜ.12): ರಾಜ್ಯದಲ್ಲಿ ಇರುವುದು ಲಂಚಾವತಾರ, ಮಂಚಾವತಾರ, ಬಿ ರಿಪೋರ್ಟ್‌ ಬರೆಯುವ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದ್ದಾರೆ. ‘ಪ್ರಜಾಧ್ವನಿ ಬಸ್‌ ಯಾತ್ರೆ’ ನಿಮಿತ್ತ ನಗರದ ಆರ್‌.ಡಿ.ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಇರುವುದು ಶೇ.40 ಕಮಿಷನ್‌ ಸರ್ಕಾರ. ಹೋಟೆಲ್‌ನಲ್ಲಿ ಮೆನು ಕಾರ್ಡ್‌ ಮಾದರಿಯಲ್ಲಿ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಹಾಕಿದ್ದಾರೆ.

ಇದನ್ನು ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ, ಆಯುಕ್ತರಿಗೆ .15 ಕೋಟಿ, ಕೋವಿಡ್‌ ಪೂರೈಕೆಗೆ ಶೇ.75, ಪಿಡಬ್ಲ್ಯು ಕಾಮಗಾರಿಗೆ ಶೇ.40, ಮಠಗಳ ಅನುದಾನಕ್ಕೆ ಶೇ.40, ಮೊಟ್ಟೆ ಪೂರೈಕೆಗೆ ಶೇ.30 ಕಮಿಷನ್‌ ನಿಗದಿ ಮಾಡಿದ್ದಾರೆ. ಈ ಬಗ್ಗೆ 2 ಲಕ್ಷ ಸದಸ್ಯರಿರುವ ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ್‌ ಕಾಮಗಾರಿ ಮಾಡಿದ್ದರೂ, ದುಡ್ಡು ಕೊಡಲು ನಿರಾಕರಿಸಿದ್ದು ನಿಜವಲ್ಲವೇ ಎಂದು ಪ್ರಶ್ನಿಸಿದರು. ಇದೇ ವೇಳೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸದೇ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಿವಕುಮಾರ, ನಿಮ್ಮ ಜಿಲ್ಲೆಯ ಒಂದು ಫ್ಯಾಕ್ಟರಿಯ ಸ್ಕ್ಯಾ‌ಮ್‌ 650 ಕೋಟಿ ಆಗಿದೆ. 

ಸಿದ್ದರಾಮಯ್ಯಗೆ ಕಳಂಕ ಮೆತ್ತಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

ಬೊಮ್ಮಾಯಿ, ಸಹಕಾರ ಸಚಿವ ಸೋಮಶೇಖರ ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ನಾನು ಆ ವ್ಯಕ್ತಿಯ ಹೆಸರು ಹೇಳಲ್ಲ. ಈ .650 ಕೋಟಿ ಡಿಸಿಸಿ ಬ್ಯಾಂಕ್‌ ಹಣ, ನಮ್ಮ ರೈತರ ಹಣ. ಪ್ರಕರಣ ಮುಚ್ಚಿಹಾಕಿ ಎಲ್ಲರೂ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ. ಲೋನ್‌ ಕೊಟ್ಟಿದ್ದಾರೆ. ಆದರೆ ಎಥೆನಾಲ್, ಲಿಕ್ಕರ್‌ ಘಟಕಗಳೇ ಅಲ್ಲಿಲ್ಲ. ಸದ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಿ ಎಂದು ನಾವೂ ಕಾಯುತ್ತಿದ್ದೇವೆ. ಇಂತಹ ಮುತ್ತುರತ್ನ, ಕೊಯನೂರು ಡೈಮಂಡ್‌ಗಳ ಬಗ್ಗೆ ಜನರಿಗೆ ತಿಳಿಸಲು ಸಜ್ಜಾಗಿದ್ದೇವೆ ಎಂದರು.

ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಗೂ, ನನಗೂ ಸಂಬಂಧ ಇಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವೇನು ಕಿವಿಯಲ್ಲಿ ಹೂ ಮುಡಿದುಕೊಂಡಿಲ್ಲ. ನಾವು ಸರ್ಕಾರ, ಸಚಿವರನ್ನು, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ, ಬೆಳಗಾವಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರನ್ನು ಪ್ರಶ್ನಿಸುತ್ತಿದ್ದೇವೆ. .600 ಕೋಟಿ ಸಾಲ ಪಡೆದ ಕಾರ್ಖಾನೆ ಹರಾಜು ಹಾಕಿಸುತ್ತಿಲ್ಲ. .20 ಕೋಟಿ ಪಡೆದ ಸಹಕಾರಿ ಕಾರ್ಖಾನೆ ಹರಾಜು ಹಾಕ್ತಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆಗೂ ಮೊದಲೆ ಈಶ್ವರಪ್ಪಗೆ ಈ ಸರ್ಕಾರ ಕ್ಲಿನ್‌ಚೀಟ್‌ ನೀಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲ ಹಗರಣ, ಬಿ ರಿಪೋರ್ಟ್‌ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.

ಸ್ಯಾಂಟ್ರೊ ರವಿ, ಸೈಕಲ್‌ ರವಿ ಎಲ್ಲ ಬಿಜೆಪಿ ಸರ್ಕಾರದ ಮುತ್ತು ರತ್ನಗಳಿದ್ದಂತೆ. ಮಹಿಳೆಯರು ಕುಂಕುಮ ಹಚ್ಚಿದಾಗ ಒಂಥರ, ಮೂಗುತಿ ಹಾಕಿದಾಗ ಹೇಗೆ ಕಾಣ್ತಾರೋ? ಅದೇ ರೀತಿ ಇವರೆಲ್ಲ ಈ ಸರ್ಕಾರದ ಮುತ್ತು ರತ್ನಗಳಿದ್ದಂತೆ. ಸೈಕಲ್‌ ರವಿ, ಸ್ಯಾಂಟ್ರೊ ರವಿ ಮುತ್ತು ರತ್ನಗಳಿದ್ದಂತೆ, ಈ ಸರ್ಕಾರಕ್ಕೆ ಶೋಭೆ ತರುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಬೆಳಗುತ್ತಿದ್ದರೆ, ಬಿಜೆಪಿ ಮುಳುಗುತ್ತಿದೆ: ಡಿ.ಕೆ.ಶಿವಕುಮಾರ್‌

16ರಂದು ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಆಗಮನ: ಜ.16ರಂದು ಪ್ರಿಯಾಂಕಾ ಗಾಂಧಿಯವರು ರಾಜ್ಯಕ್ಕೆ ಆಗಮಿಸಿ ರಾಜ್ಯದ ನಾಯಕಿಯರನ್ನು ಭೇಟಿ ಮಾಡುತ್ತಿದ್ದಾರೆ. ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ, ಆಸ್ತಿ ಎಂದು ‘ನಾ ನಾಯಕಿ’ ಕಾರ್ಯಕ್ರಮ ಮಾಡುತ್ತಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲು ಪ್ರಿಯಾಂಕ ಗಾಂಧಿ ಸೂಚಿಸಿದ್ದಾರೆ. ನೀವು ಅವರ ಕಾರ್ಯಕ್ರಮಕ್ಕೆ ಬಂದು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

click me!