ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ನಾವು ತಲೆ ತಗ್ಗಿಸುವಂತಾಗಿದೆ: ಡಿಕೆಶಿ

By Girish Goudar  |  First Published Apr 24, 2022, 3:13 PM IST

*  ಮಹಾಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿ
*  ಪಿಎಸ್‌ಐ ನೇಮಕಾತಿಗೂ ಕಾಂಗ್ರೆಸ್‌ಗೂ ಏನು ಸಂಬಂಧ?
*  ನಾವು ಪ್ರತಿನಿತ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ 
 


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಏ.24):  ಮಲೆನಾಡಿನ ಕೊಪ್ಪದ ಹರಿಹರಪುರದಲ್ಲಿ ನಡೆಯುತ್ತಿರುವ ಮಹಾಕುಂಭಾಭಿಷೇಕದ ಕೊನೆಯ ದಿನ ಇಂದು(ಭಾನುವಾರ) ಧಾರ್ಮಿಕ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದಾರೆ. ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗಿಯಾದ ಡಿ.ಕೆ.ಶಿವಕುಮಾರ್ ಲಕ್ಷ್ಮಿ ನರಸಿಂಹ ದೇವರಿಗೆ ಪೂಜೆ ಸಲ್ಲಿಸಿ ಗುರುಗಳ ಆರ್ಶಿವಾದವನ್ನು ಪಡೆದರು. ಹೆಲಿಕಾಪ್ಟರ್ ಮೂಲಕ ಹರಿಹರಪುರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್(DK Shivakumar) ಕಳೆದ 14 ದಿನಗಳಿಂದ ನಡೆಯುತ್ತಿರುವ ಮಹಾಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. 

Tap to resize

Latest Videos

ಇದೇ ವೇಳೆ ಮಾತನಾಡಿದ ಅವರು, ಭವ್ಯವಾಗಿ ದೇವಾಲಯ(Temple) ನಿರ್ಮಾಣವಾಗಿದ್ದು ಈ ಹಿಂದೆಯೂ ಅನೇಕ ಭಾರೀ ಮಠಕ್ಕೆ ಆಗಮಿಸಿದ್ದೇನೆ. ಮಹಾಕುಂಭಾಭೀಷೇಕದಲ್ಲಿ(Mahakumbhabhisheka) ಪಾಲ್ಗೊಂಡಿದ್ದು ಸಂತಸ ತಂದಿದೆ ಅಂತ ಹೇಳಿದ್ದಾರೆ.  

ಕೋವಿಡ್‌ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ: ಕೋರ್ಟ್‌ಗೆ ಡಿಕೆಶಿ ಹಾಜರು

ಸರ್ಕಾರದ ಜನ್ಮ ಭ್ರಷ್ಟಾಚಾರದ್ದು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ 

ರಾಜ್ಯದಲ್ಲಿ(Karnataka) ನಡೆಯುತ್ತಿರುವ ಭ್ರಷ್ಟಾಚಾರದ(Corruption) ಆರೋಪದ ಬಗ್ಗೆ ಸರ್ಕಾರದ ವಿರುದ್ಧ ಡಿಕೆಶಿ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರದ(BJP Government) ಜನ್ಮ ಭ್ರಷ್ಟಾಚಾರದಿಂದಲೇ ಆರಂಭವಾಗಿದ್ದು ಅಂತ ಲೇವಡಿ ಮಾಡಿದ್ದರು. ಭ್ರಷ್ಟಾಚಾರದ ಈ ಸರ್ಕಾರದ ಜನ್ಮ ದಿನ ನಡೆಯುತ್ತಿದೆ. ಯಾವ ಎಕ್ಸಾಂ ಬರಿ, ಪೋಸ್ಟಿಂಗ್ ತಗೋ, ಯಾವ ಕೆಲಸ ತಗೋ ಎಲ್ಲಾ ಕಡೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಟೀಕಿಸಿದರು. ಪ್ರತಿ ಕೆಲಸದಲ್ಲಿಯೂ ಇಷ್ಟು ಹಣ ಫಿಕ್ಸ್ ಎಂದು ಹಿಂದಿನ  ಕಮಿಷನರ್ ಹೇಳಿದ್ದಾರೆ ಎಂದರು .

ಸರ್ಕಾರ ಕ್ರಮ ಕೈಗೊಳ್ಳಬೇಕು, ಇಲ್ಲ ಒಪ್ಪಿಕೊಳ್ಳಬೇಕು: 

ರಾಜ್ಯದಲ್ಲಿ ಕೇಳಿ ಬರುತ್ತಿರುವ ಸಾಲು ಸಾಲು ಆರೋಪಗಳ ಬಗ್ಗೆ ಸರ್ಕಾರ ಕಠಿಣ ಕ್ರಮತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ನಿತ್ಯ ಸರ್ಕಾರದ ವಿರುದ್ಧ ಗಂಭೀರವಾದ ಆರೋಪಗಳು ಕೇಳಿ ಬರುತ್ತಿದೆ. ಸರ್ಕಾರ ಈ ಬಗ್ಗೆ ಕ್ರಮತೆಗೆದುಕೊಳ್ಳಬೇಕು ಇಲ್ಲವೇ ಅದನ್ನು ಒಪ್ಪಿಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

ನಮಗೆ ತಲೆ ತಗ್ಗಿಸುವಂತಾಗಿದೆ: 

ರಾಜ್ಯದಲ್ಲಿ ಕೇಳಿಬರುತ್ತಿರುವ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳಿಂದ ನಮಗೆ ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು. ದೇಶದಲ್ಲಿ ಯುವಕರಿಗೆ, ರೈತರಿಗೆ, ವ್ಯಾಪಾರಸ್ಥರಿಗೆ ಅನ್ಯಾಯ ಆಗಿದೆ ಅಂದ್ರೆ ಅದು ಕರ್ನಾಟಕ. ಅದು ನಮ್ಮ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಮಾತ್ರ ಎಂದು ಟೀಕಿಸಿದರು. ಈ ಭ್ರಷ್ಟಾಚಾರದ ಆರೋಪಗಳಿಂದ ನಮಗೆ ತಲೆ ತಗ್ಗಿಸುವಂತಾಗಿದ್ದು ನಾವು ಪ್ರತಿನಿತ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಾವು ರಾಜ್ಯಪಾಲರಿಗೆ ಈ ಹಿಂದೆಯೇ ದೂರು ಕೊಟ್ಟಿದ್ದೇವೆ, ಈ ಹಿನ್ನಲೆಯಲ್ಲಿ ಜನರಿಗೆ ಸರ್ಕಾರದ ಭ್ರಷ್ಟಾಚಾರದ ವಿಚಾರವನ್ನು ತಿಳಿಸುವ ನಿಟ್ಟಿನಲ್ಲಿ ನಾವು ನಿಮಗೆ ದೂರು ನೀಡುತ್ತೇವೆ ಎಂದು ತಿಳಿಸಿದರು. 

India Gate: ಟಿಕೆಟ್‌ ಹಂಚಿಕೆ, ರಣತಂತ್ರಗಳನ್ನು ಹೆಣೆಯುವುದರಲ್ಲಿ ಫ್ರೀ ಹ್ಯಾಂಡ್‌ ಕೊಡಿ ಅಂದ ಡಿಕೆಶಿ

ಪಿಎಸ್‌ಐ ಅಕ್ರಮ ನೇಮಕಾತಿಗೆ ಗೃಹಮಂತ್ರಿ ಹೊಣೆ 

ಪಿಎಸ್‌ಐ ನೇಮಕಾತಿಯಲ್ಲಿ ಗನ್ ಮ್ಯಾನ್ ಇದ್ದ, ಕಾಂಗ್ರೆಸ್‌ ಮಾಜಿ ಬ್ಲಾಕ್ ಅಧ್ಯಕ್ಷ ಇದ್ದ, ಮತ್ತೊಬ್ಬ ಇದ್ದ ಅದೆಲ್ಲಾ ಅಲ್ಲ, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮಕ್ಕೂ ಕಾಂಗ್ರೆಸ್‌ಗೂ(Congress) ಏನು ಸಂಬಂಧ ಎಂದು ಪ್ರಶ್ನಿಸಿದ ಡಿಕೆಶಿ, ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ. ಇದಕ್ಕೆ ನೇರ ಹೊಣೆಗಾರರು ಗ್ರಹ ಮಂತ್ರಿಗಳೇ ಎಂದು ಆರೋಪಿಸಿದರು.

ಈ ಹಗರಣವನ್ನ ಹೊರಗಡೆ ತಂದಿದ್ದೇ ಕಾಂಗ್ರೆಸ್. ಯಾರು ಏನು ತಪ್ಪು ಮಾಡಿದ್ದಾರೆ ತನಿಖೆ ಆಗಬೇಕು. ಕಾನೂನಿನಂತೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ನೂರಾರು ಯುವಕರಿಗೆ ಪಿಎಸ್‌ಐ ನೇಮಕಾತಿಯಲ್ಲಿ ಮೋಸ ಮಾಡಿದ್ದೀರಾ, 40% ಕಮಿಷನ್ ಅಂತ ಅದು, ಅದು ಜಗಜ್ಜಾಹೀರಾಗಿದೆ ಎಂದು ಸರ್ಕಾರದ ವಿರುದ್ಧ ಲೇವಡಿ ಮಾಡಿ ಉದ್ಯೋಗ ಕೊಡುವುದರಲ್ಲೂ ಇಂತಹಾ ಕೆಲಸಕ್ಕೆ ಹೊರಟಿದ್ದೀರಾ ಎಂದು ಟೀಕಿಸಿದ್ದಾರೆ.  ಅಸೆಂಬ್ಲಿಯಲ್ಲಿ ಹೋಂ ಮಿನಿಸ್ಟರ್ ನಾನೇನು ಮಾಡಿಲ್ಲ ಅಂತ ಏಕೆ ಹೇಳಿದ್ರು ಮತ್ತೆ ಏಕೆ ಸಿಓಡಿ ತನಿಖೆಗೆ ಮುಂದಾದರು ಇದಕ್ಕೆ ಹೋಂ ಮಿನಿಸ್ಟರ್ ಅವರೇ ಜವಾಬ್ದಾರಿ ಎಂದು ಕಿಡಿಕಾರಿದ್ದಾರೆ. 
 

click me!