ನಮ್ಮ ಜಾತ್ಯತೀತ ತತ್ವ ಯಾರಿಗೂ ಮಾರಾಟ ಮಾಡಿಲ್ಲ: ಸಿದ್ದು ವಿರುದ್ಧ ಎಚ್‌ಡಿಕೆ ಗರಂ

By Girish Goudar  |  First Published Apr 24, 2022, 2:00 PM IST

*  ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಹೊರಟಿದ್ದಾರೆ, ಅದು ಸಾಧ್ಯವಿಲ್ಲ
*  ನಾನು ಎಂದು ಕೋಮುವಾದಕ್ಕೆ ಬೆಂಬಲ ಕೊಟ್ಟಿಲ್ಲ
*  ನನ್ನ ಕಾಲದಲ್ಲಿ ಯಾವುದೇ ಗಲಭೆಗಳು ಆಗಿಲ್ಲ, ಕೊಲೆಗಳಿಗೆ ಅವಕಾಶ ಕೊಟ್ಟಿಲ್ಲ 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕೋಲಾರ

ಕೋಲಾರ(ಏ.24): ಪೊಲೀಸ್ ಇಲಾಖೆಯ ಮುಖ್ಯಸ್ಥರ ನಿರ್ಲಕ್ಷದಿಂದಲೂ ಅಕ್ರಮ ಆಗಿರಬಹುದು. ಪ್ರತಿಯೊಂದು ಇಲಾಖೆಯ ನೇಮಕಾತಿಯಲ್ಲಿ ಹಣ ನೀಡದೆ ಕೆಲಸ ಆಗ್ತಿಲ್ಲ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. 

Tap to resize

Latest Videos

ಇಂದು(ಭಾನುವಾರ) ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್‌ನ(JDS) ಜಲಧಾರೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಇಲಾಖೆಯಲ್ಲೂ ಹಣ ನೀಡದೆ ಕೆಲಸ ಆಗುತ್ತಿಲ್ಲ ಅದರಲ್ಲೂ ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರ ತನಿಖೆಯಲ್ಲಿದೆ ಆದ್ರೆ ನಾನು ಗೃಹ ಸಚಿವರ ವಿರುದ್ಧ ಹೇಳಿಕೆ ಕೊಡೋದಿಲ್ಲ ಅಂತ ತಿಳಿಸಿದ್ದಾರೆ. 

ಬಿಜೆಪಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ..!

ಇನ್ನು ಪ್ರತಿವೊಂದು ಇಲಾಖೆಯ ನೇಮಕಾತಿಯಲ್ಲಿ(PSI Recruitment Scam) ಹಣ ನೀಡದೆ ಕೆಲಸ ಆಗ್ತಿಲ್ಲ, ನನ್ನ ಕಾಲದಲ್ಲಿ ಏನಾದ್ರು ಅಕ್ರಮ ಆಗಿದ್ರೆ ತನಿಖೆ ಆಗಲಿ, ನಾನು ಈ ವಿಚಾರದಲ್ಲಿ ಪಲಾಯನ ಮಾಡೋದಿಲ್ಲ. ಸರ್ಕಾರ ನಾಟಕೀಯವಾಗಿ ನಾಲ್ಕು ದಿನ ತನಿಖೆ ನಡೆಸಿ ಪ್ರಕರಣ ಮುಚ್ಚಬಾರದು, 15 ದಿವಸ ಇದಕ್ಕೆ ಪ್ರಚಾರ ಕೊಟ್ಟು ಬಳಿಕ ಪ್ರಕರಣವನ್ನು ಕೋಲ್ಡ್ ಸ್ಟೋರೇಟ್ ತಳ್ಳುತ್ತಾರೆ. ವ್ಯವಸ್ಥೆ ಹಾಳು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಣ ತಿಂದವರನ್ನು ಆರಾಮಾಗಿ ಪೊಗರ್ ದಸ್ತಾಗಿ ಬೆಳೆಯೋಕೆ ಬಿಟ್ಟಿದ್ದಾರೆ, ಅಮಾಯಕರನ್ನು ಅರೆಸ್ಟ್ ಮಾಡಿ ಕ್ರಮ ಕೈಗೊಳ್ಳೋದು ಬೇಡ ಎಂದು ಸಲಹೆ ನೀಡಿದ್ರು. ಅಲ್ಲದೆ ಅದ್ಯಾವುದೋ ಡ್ರಗ್ಸ್‌ ಬಗ್ಗೆ ಬಹಳ ಹೋರಾಟ ಮಾಡ್ತೇವೆ ಅಂತ ಹಿಂದೆ ಹೇಳಿದ್ರು, ಆಮೇಲೆ ಏನಾಯ್ತು ಸುಮ್ಮನೆ ಆರೋಪ ಮಾಡ್ತಾರೆ ಆಮೇಲೆ ಮಾತನಾಡೋದಿಲ್ಲ ಅಲ್ಲದೆ ಪ್ರಾರಂಭದಲ್ಲಿ ಪ್ರಚಾರ ಮಾಡಿ, ಆಮೇಲೆ ಗುಂಡಿ ತೋಡಿ ಹಾಕೋದು ಬೇಡ ಅಂತ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. 

ಇನ್ನೂ ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ತಂದೆ ಹೆಸರಿನಲ್ಲಿ ಆಣೆ ಪ್ರಮಾಣದ ಬಗ್ಗೆ ಕೇಳ್ತಾರೆ, ಇವರು ಜೆಡಿಎಸ್(JDS) ಮುಗಿಸಲು ಹೊರಟಾಗ ನಾನು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದೇ. ನಾನು ಎಂದು ಕೋಮುವಾದಕ್ಕೆ ಬೆಂಬಲ ಕೊಟ್ಟಿಲ್ಲ. ನನ್ನ ಕಾಲದಲ್ಲಿ ಯಾವುದೇ ಗಲಭೆಗಳು ಆಗಿಲ್ಲ, ಕೊಲೆಗಳಿಗೆ ಅವಕಾಶ ಕೊಟ್ಟಿಲ್ಲ. ಸಿದ್ದರಾಮಯ್ಯ 5 ವರ್ಷ ಇದ್ದಾಗ ಎಷ್ಟು ಮರ್ಡರ್‌ಗಳು ಆದ್ವು, ರಾಜಕೀಯವಾಗಿ ಎಷ್ಟು ಕೊಲೆಗಳು ಆಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿ ಮಂತ್ರಿ ಆಗಿರಲಿಲ್ವಾ?, ಬಿಜೆಪಿ(BJP) ಅವರ ಜೊತೆ ಸರ್ಕಾರ ಮಾಡಿಲ್ವಾ? ಎಂದು ಪ್ರಶ್ನೆ ಮಾಡಿದ ಕುಮಾರಣ್ಣ. ಹಾಗಂತ ನಮ್ಮ ಜಾತ್ಯಾತೀತ ತತ್ವವನ್ನು ಯಾರಿಗೂ ಮಾರಾಟ ಮಾಡಿಲ್ಲ, ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಹೊರಟಿದ್ದಾರೆ, ಅದು ಸಾಧ್ಯವಿಲ್ಲ ಅಂತ ಸಿದ್ದು ವಿರುದ್ಧ ಕುಮಾರಸ್ವಾಮಿ ಗುಡುಗಿದ್ದಾರೆ. 

ಯರಗೋಳ್ ಡ್ಯಾಂ ವೀಕ್ಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ ಕುಮಾರಸ್ವಾಮಿ, ಸರ್ಕಾರದಿಂದ ಇನ್ನು ಹಣ ನೀಡಿಲ್ಲ ಅಂತ ಹೇಳ್ತಿದ್ದಾರೆ. 2006 ರಲ್ಲಿ ನಾನು 50 ಕೋಟಿ ಅನುದಾನ ನೀಡಿದ್ದೇನೆ 14 ತಿಂಗಳು ಸಿಎಂ ಆಗಿದ್ದಾಗ ನನಗೆ ಸರಿಯಾದ ಮಾಹಿತಿ ಯಾರು ನೀಡಿಲ್ಲ ತಿಳಿಸಿದ್ರೆ ಯೋಜನೆ ಪೂರ್ಣ ಗೊಳಿಸುತ್ತಿದೆ. ಇಲ್ಲಿ ಯಾವುದೇ ಕಾನೂನಿನ ಅಡಚಣೆ ಇಲ್ಲ ಕೂಡಲೇ ಸಿಎಂ ಜೊತೆ ಚರ್ಚೆ ನಡೆಸಿ ಮೂರ್ನಾಲ್ಕು ತಿಂಗಳಲ್ಲಿ ಸಂಪೂರ್ಣ ಗೊಳಿಸುತ್ತೇನೆ ಅಂತ ಹೇಳಿದ್ದಾರೆ. 
 

click me!