* ಎಚ್ ಡಿ ಕುಮಾರಸ್ವಾಮಿ ಬಹಳ ಬುದ್ದಿವಂತರಿದ್ದಾರೆ, ಕೆಲವೊಂದು ವಿಚಾರ ಅವರನ್ನೇ ಕೇಳಬೇಕು
* ಕುಮಾರಸ್ವಾಮಿಗೆ ವ್ಯಂಗ್ಯದ ಉತ್ತರ ನೀಡಿದ ಡಿಕೆ ಶಿವಕುಮಾರ್
* ಸಿದ್ದು ಡಿಸಿ ಸಭೆ ವಿಚಾರ; ಸಂವಿಧಾನದತ್ತ ಹುದ್ದೆಗೆ ಗೌರವ ಇಲ್ವಾ?
* ಯಡಿಯೂರಪ್ಪ ವಿರೋಧ ಪಕ್ಷದ ನಾಯಕ ಆಗಿದ್ದಾಗ ಡಿಸಿಗಳ ಜೊತೆ ಸಭೆ ಮಾಡುತ್ತಿರಲಿಲ್ವಾ?
ಬೆಂಗಳೂರು(ಮೇ 20) ಕಾಂಗ್ರೆಸ್ ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವ ಪಕ್ಷ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ.
ಅವರು (ಎಚ್.ಡಿ.ಕೆ) ಬಹಳ ಬುದ್ದಿವಂತರಿದ್ದಾರೆ, ಈ ಪದಕ್ಕೆ ಅವರ ಬಳಿ ಹಲವು ಅರ್ಥಗಳಿವೆ. ನೀವು ಅವರನ್ನೇ ಕೇಳಿ ಎಂದ ಡಿಕೆ ಶಿವಕುಮಾರ್ ಮಾಧ್ಯಮದವರಿಗೆ ಹೇಳಿದರು.
ಕೊರೋನಾ ಆತಂಕದ ನಡುವೆ ಸಮಾಧಾನ ಪಡುವ ವರದಿ ಕೊಟ್ಟ ತಜ್ಞರು
ಸಿದ್ದರಾಮಯ್ಯ ಡಿಸಿಗಳ ಸಭೆ ಕರೆಯಲು ಮುಂದಾಗಿದ್ದ ವಿಚಾರದ ಬಗ್ಗೆಯೂ ಡಿಕೆಶಿ ಮಾತನಾಡಿದರು. ಸಿದ್ದರಾಮಯ್ಯ ಅವರು ಬರೀ ಸಿದ್ದರಾಮಯ್ಯ ಅಲ್ಲ. ಅವರು ವಿಪಕ್ಷ ನಾಯಕ. ಅದು ಸಂವಿಧಾನದತ್ತ ಹುದ್ದೆ ಅದಕ್ಕೆ ಗೌರವ ಇಲ್ವಾ? ಯಡಿಯೂರಪ್ಪ ವಿರೋಧ ಪಕ್ಷದ ನಾಯಕ ಆಗಿದ್ದಾಗ ಡಿಸಿಗಳ ಜೊತೆ ಸಭೆ ಮಾಡುತ್ತಿರಲಿಲ್ವಾ? ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರಲಿಲ್ವಾ..? ಸರ್ಕಾರದ ಹೇಳಿರುವ ಸುಳ್ಳುಗಳು ಹೊರಬರುತ್ತೆ ಅನ್ನೋ ಕಾರಣಕ್ಕೆ ಅವಕಾಶ ನೀಡದಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona