ಬೆಂಗಳೂರು (ಜು.16): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಆಹ್ವಾನ ಸ್ವೀಕರಿಸಿದ ಸಿದ್ದರಾಮಯ್ಯ ಇಂದು ಸಂಜೆ 6.30 ಕ್ಕೆ ಡಿಕೆಶಿ ಸದಾಶಿವನಗರ ನಿವಾಸಕ್ಕೆ ತೆರಳಲಿದ್ದಾರೆ.
ಇದೀಗ ಡಿಕೆಶಿ ಆಹ್ವಾನದ ವಿಚಾರ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ್ರಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎನ್ನುವ ಮಾತುಗಳು ಕೇಳಿ ಬಂದಿದೆ. ಸಿದ್ದರಾಮಯ್ಯ ಸೇರಿದಂತೆ ಬೆಂಗಳೂರು ಶಾಸಕರಿಗೆ ಮನೆಯಲ್ಲೇ ಔತಣಕೂಟ ಏರ್ಪಡಿಸಿದ್ದು, ಬಿಬಿಎಂಪಿ ಚುನಾವಣೆ ಸೇರಿದಂತೆ ರಾಜಕೀಯ ಚರ್ಚೆ ಮಾಡೋಣ ಮನೆಗೆ ಬನ್ನಿ ಎಂದಿದ್ದಾರೆ.
ಸಿದ್ದರಾಮಯ್ಯ ಆಡಳಿತ ಸಮರ್ಥಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ!
ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಸಿದ್ದು, ಡಿಕೆಶಿ ನಡುವೆ ಕೋಲ್ಡ್ ವಾರ್ ನಡೆದಿತ್ತು. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಶಾಸಕರ ಹೇಳಿಕೆಗಳಿಗೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರೇ ಬ್ರೇಕ್ ಹಾಕಬೇಕು ಎಂದು ಡಿಕೆ ಶಿವಕುಮಾರ್ ಹೇಳಿಕೆಯನ್ನು ನೀಡಿದ್ದರು. ಶಾಸಕರು ಮಾತಾಡಿದರೆ ನಾನೇನು ಮಾಡೊಕೆ ಆಗಲ್ಲ. ಆದರೂ ಶಾಸಕರಿಗೆ ಹೇಳುವುದಾಗಿ ಸಿದ್ದರಾಮಯ್ಯ ಅವರೂ ಹೇಳಿದ್ದರು.
ಡಿಕೆಶಿ ವಿರುದ್ಧ ಸಿದ್ದು ಪ್ರತ್ಯಸ್ತ್ರ, ಹೈಕಮಾಂಡ್ ನಾಯಕರ ಭೇಟಿಗೆ ಪ್ಲ್ಯಾನ್..! .
ಆದರೆ ಹೈಕಮಾಂಡ್ ಮಧ್ಯಪ್ರವೇಶದ ಬಳಿಕವೂ ಇಬ್ಬರ ಕೋಲ್ಡ್ ನಿಂತಿರಲಿಲ್ಲ. ನೀವಿಬ್ಬರೇ ಕುಳಿತು ಮಾತುಕತೆ ಮೂಲಕ ಅಸಮಾಧಾನ ಸರಿಪಡಿಸಿಕೊಳ್ಳಿ ಎಂದು ಹೈ ಕಮಾಂಡ್ ಸೂಚನೆ ಕೊಟ್ಟಿರಹುದಾದ ಹಿನ್ನೆಲೆ ಸಿದ್ದರಾಮಯ್ಯ ಜೊತೆಗೆ ಔತಣಕೂಟಕ್ಕೆ ಬೆಂಗಳೂರು ಶಾಸಕರನ್ನೂ ಕರೆದಿರಬಹುದು ಎನ್ನಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರನ್ನು ಆಹ್ವಾನಿಸಿದ್ದು, ಡಿಕೆಶಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ತೆರಳುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಆದರೆ ಶಿವಕುಮಾರ್ ನಿವಾಸಕ್ಕೆ ತೆರಳಲು ತೆರಳಲು ಸಿದ್ದರಾಮಯ್ಯ ಅವರು ತಯಾರಾಗಿದ್ದಾರೆ ಎನ್ನಲಾಗಿದೆ.