ಚಿತ್ರದುರ್ಗ/ಹೊನಾಳ್ಳಿ (ಜು.16): ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಶೇ.90ರಷ್ಟುಭರವಸೆಗಳ ಈಡೇರಿಸಲಾಗಿದ್ದು ಬಹಿರಂಗ ಚರ್ಚೆಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿ ಸಿದ್ದರಾಮಯ್ಯ ಅವರ ಆಡಳಿತವನ್ನು ಸಮರ್ಥಿಸಿಕೊಂಡ ಅವರು, ‘ಬಸವ ಜಯಂತಿಯಂದು ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ, ಮಾತು ತಪ್ಪಿಲ್ಲ’ ಎಂದರು. ಮುಂದಿನ ಮುಖ್ಯಮಂತ್ರಿಗಾಗಿ ಕಾಂಗ್ರೆಸ್‌ನಲ್ಲಿ ಮ್ಯೂಜಿಕಲ್ ಚೇರ್ ನಡೆಯುತ್ತಿದೆ ಎಂಬ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, ಬಿಜೆಪಿಯಲ್ಲಿ ನಡೆಯುತ್ತಿರುವುದು ಯಾವ ಆಟವೆಂದು ಪ್ರಶ್ನಿಸಿದರು.
ಡಿಕೆಶಿ ವಿರುದ್ಧ ಸಿದ್ದು ಪ್ರತ್ಯಸ್ತ್ರ, ಹೈಕಮಾಂಡ್ ನಾಯಕರ ಭೇಟಿಗೆ ಪ್ಲ್ಯಾನ್..! ...
ಇನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಂಜಾರ ಸಮುದಾಯ ಎಕೈಕ ಧರ್ಮಕ್ಷೇತ್ರ ಸೂರಗೊಂಡನಕೊಪ್ಪದ ಸಂತಸೇವಾಲಾಲ್ ಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಕುಲಕಸಬುಗಳನ್ನು ಅವಲಂಭಿಸಿರುವ ಎಲ್ಲ ಸಮುದಾಯಗಳ ಧ್ವನಿಯಾಗಿ ನಿಂತು ಅವರ ಅಶೋತ್ತÜರಗಳ ಈಡೇರಿಕೆಗಾಗಿ ಹೋರಾಟ ನಡೆಸುವೆ. ಈ ನಿಟ್ಟಿನಲ್ಲಿ ತಾನು ರಾಜ್ಯಾದ್ಯಂತ ಸಂಚರಿಸಿ ಬಂಜಾರ ಸಮುದಾಯವೂ ಸೇರಿ ಎಲ್ಲಾ ಶ್ರಮಿಕ ವರ್ಗದ ಸಮುದಾಯಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆರಿತು ಕೆಲಸ ಮಾಡುವೆ ಎಂದು ಹೇಳಿದರು.
ಈಗಾಲೇ ಮೀನುಗಾರ ಸಮುದಾಯದವರನ್ನು ಭೇಟಿ ಮಾಡಿ ಕಷ್ಟಗಳನ್ನು ಕೇಳಿ ತಿಳಿದುಕೊಂಡಿದ್ದು ಬಂಜಾರ, ಮಡಿವಾಳ, ನೇಕರಾರರು, ದರ್ಜೆಗಳು, ಕಮ್ಮಾರಿಕೆ, ಬಡಿಗೆಕೆಲಸ ಮಾಡುವ ಜನಸಮುದಾಯದವರನ್ನು ಭೇಟಿ ಮಾಡಿ ಅವರೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಮೂಲ ಸಮಸ್ಯೆಗಳನ್ನು ಅರಿತು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅವರ ಧ್ವನಿಯಾಗಿ ಸರ್ಕಾರದ ಹಂತದಲ್ಲಿ ಹೋರಾಟ ಮಾಡಿ ಅವರಿಗೆ ನ್ಯಾಯ ದೊರಕಿಸಿಕೊಡುತ್ತೇ ಎಂದು ತಿಳಿಸಿದರು.