ಸಿಎಂ ಆಗಲು ನನಗೂ ಒಂದು ಅವಕಾಶ ಕೊಡಿ, ನಿಮ್ಮ ಸೇವೆ ಮಾಡೋಕೆ ಸಿದ್ದ: ಡಿಕೆಶಿ

By Govindaraj S  |  First Published Jul 20, 2022, 10:31 AM IST

ನನಗೂ ಒಂದು ಅವಕಾಶ ಕೊಡಿ, ನಿಮ್ಮ ಸೇವೆ ಮಾಡೋಕೆ ನಾನು ಸಿದ್ದ ಎಂದು ಹೇಳುವ ಮೂಲಕ ಸಿಎಂ ಆಗುವ ಇಂಗಿತ  ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಮನಗರ ನಗರ ದೇವತೆ ಚಾಮುಂಡೇಶ್ವರಿ ಕರಗ ಮಹೋತ್ವವದ ಪ್ರಯುಕ್ತ ಕಾಂಗ್ರೆಸ್ ಮುಖಂಡರು ಆಯೋಜಿಸಿದ್ದ ರಸ ಮಂಜರಿ ಕಾರ್ಯಕ್ರಮದಲ್ಲಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.


ಜಗದೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ

ರಾಮನಗರ (ಜು.20):
ನನಗೂ ಒಂದು ಅವಕಾಶ ಕೊಡಿ ನಿಮ್ಮ ಸೇವೆ ಮಾಡೋಕೆ ನಾನು ಸಿದ್ದ ಎಂದು ಹೇಳುವ ಮೂಲಕ ಸಿಎಂ ಆಗುವ ಇಂಗಿತ  ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಮನಗರ ನಗರ ದೇವತೆ ಚಾಮುಂಡೇಶ್ವರಿ ಕರಗ ಮಹೋತ್ವವದ ಪ್ರಯುಕ್ತ  ಸ್ಥಳೀಯ ಕಾಂಗ್ರೆಸ್ ಮುಖಂಡರು ಆಯೋಜಿಸಿದ್ದ ರಸ ಮಂಜರಿ ಕಾರ್ಯಕ್ರಮದಲ್ಲಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.

ನಿಮ್ಮ‌ ಜಿಲ್ಲೆಯ ಮಗನಿಗೆ ಅವಕಾಶ ಕೊಡಿ: ನನಗೆ ನಿಮ್ಮ ಸಂಪೂರ್ಣ ಆಶಿರ್ವಾದ ಬೇಕು, ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ನೀವು ನನಗೆ ಕೊಡಬೇಕು, ತಾಯಿ ಚಾಮುಂಡೇಶ್ವರಿ ತಾಯಿಯ ಸನ್ನಿಧಾನದಲ್ಲಿ ನಿಂತು ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಜಿಲ್ಲೆಯ ಒಬ್ಬ ಮಗನಿಗೆ ಅವಕಾಶ ಮಾಡಿಕೊಡಿ, ದೇವೆಗೌಡರವರಿಗೆ, ಕುಮಾರಸ್ವಾಮಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೀರಿ, ಅವರಿಗೆ ಸಾಕು ಎನ್ನುವ ಮೂಲಕ ಇದೀಗ ನಾನು ನಿಮ್ಮನ್ನ ಬೇಡಿ ಕೊಳ್ಳುತ್ತಿದ್ದೇನೆ,‌ ಇದೀಗ ನನ್ನ ಸರದಿ ಎನ್ನುವ ಮೂಲಕ ಮಾಜಿ ಸಿಎಂ ಹೆಚ್ ಡಿಕೆ ವಿರುದ್ದ ಬಹಿರಂಗವಾಗಿ ಸವಾಲ್ ಎಸೆದಿದ್ದಾರೆ.

Tap to resize

Latest Videos

ಡಿಕೆಶಿ ಮುಖ್ಯಮಂತ್ರಿ ಆಸೆ ಬಹಿರಂಗಕ್ಕೆ 2 ಕಾರಣ..!

ಹಾರ ತುರಾಯಿ ಬೇಡ ಪಕ್ಷದ ಅಭ್ಯರ್ಥಿ ಗೆಲ್ಲಿಸಿ: ನಾನು ರಾಜ್ಯಾದ್ಯಂತ ಪ್ರವಾಸ ಮಾಡುವ ವೇಳೆ ಕಾರ್ಯಕರ್ತರು ಹಾರ ತುರಾಯಿ ಹಾಕುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ.‌ ಇನ್ನು ಮುಂದೆ ನೀವು ನನಗೆ ನನಗೆ ಹೂವಿನ ಹಾರ ಹಾಕೋದು ಬೇಡ ನಾನು ಯಾರನ್ನು ನಿಲ್ಲಿಸುತ್ತೇನೆ ಅವರಿಗೆ ನಿಮ್ಮ ಸಹಕಾರ ಕೊಡಿ, ಮೇಕೆದಾಟು ಪಾದಾಯಾತ್ರೆ ವೇಳೆ ರಾಮನಗರದಲ್ಲಿ ಭವ್ಯ ಸ್ವಾಗತ ಕೊಟ್ಟಿದ್ದೀರಿ, ನಿಮ್ಮ ಜಿಲ್ಲೆಯ ಒಬ್ಬ ಮಗನಿಗೆ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಎನ್ನುವ ಮೂಲಕ ಮಾಜಿ ಸಿಎಂ ಹೆಚ್ ಡಿಕೆ ಕ್ಷೇತ್ರದಿಂದಲೇ ಒಂದು ರೀತಿಯ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.



ಹೆಚ್‌ಡಿಕೆ ವಿರುದ್ದ ತೊಡೆ ತಟ್ಟಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ: ಇನ್ನೂ ಕಳೆದ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಕೈ ಕೈ ಹಿಡಿದುಕೊಂಡು ಜೋಡೆತ್ತು ಎಂದು ಬಿಂಬಿಸಿಕೊಂಡಿದ್ದ ಮಾಜಿ ಸಿಎಂ ಹೆಚ್‌ಡಿಕೆ- ಡಿಕೆಶಿ ಈ ಇಬ್ಬರು ನಾಯಕರು ಇದೀಗ ರಾಜ್ಯದ ಚುಕ್ಕಾಣಿ ಹಿಡಿಯಲು ನಾ ಮುಂದು ತಾ ಮುಂದು ಎನ್ನುವಂತೆ ರೇಸ್‌ನಲ್ಲಿ ಬಿದ್ದಿದ್ದಾರೆ. ರಾಮನಗರ ಜಿಲ್ಲೆಯಿಂದ ಗೆದ್ದರೆ ಸಿಎಂ ಆಗ್ತಾರೆ ಅನ್ನೋ ಮಾತುಗಳಿದೆ. ಇದೀಗ ಈ ಇಬ್ಬರು ನಾಯಕರು ಸಿಎಂ ಆಗಲು ರಾಮನಗರ ಜಿಲ್ಲೆ ಇಬ್ಬರು ನಾಯಕರಿಗೂ ಪ್ರತಿಷ್ಠೆಯ ಕಣವಾಗಿದೆ. 

ಡಿಕೆಶಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ: ಶ್ರೀರಾಮಲು ಹೇಳಿದ್ದಿಷ್ಟು

ಯಾರ ಮೇಲಿದೆ ಚಾಮುಂಡೇಶ್ವರಿ ತಾಯಿಯ ಅನುಗ್ರಹ: ರಾಮನಗರ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯನ್ನು ಈ ಇಬ್ಬರು ನಾಯಕರು ಸಂಪೂರ್ಣವಾಗಿ ನಂಬಿದ್ದಾರೆ. ಯಾವುದೇ ಹೋರಾಟ, ಕಾರ್ಯಕ್ರಮ ರೂಪಿಸಬೇಕೆಂದ್ರೆ ತಾಯಿಯ ಆಶಿರ್ವಾದ ಪಡೆಯುತ್ತಾರೆ. ಆ ನಿಟ್ಟಿನಲ್ಲಿ ಇಬ್ಬರು ನಾಯಕರು ಸಿಎಂ ಆಗಲು ಹೊರಟಿದ್ದು ತಾಯಿಯ ಅನುಗ್ರಹ ಕೃಪಾಕಟಾಕ್ಷ ಯಾರಿಗೆ ಸಿಗಲಿದೆ ಎಂಬುದು ಕಾದುನೋಡಬೇಕಿದೆ.

click me!