ರಾಜ್ಯ ಸಚಿವ ಸಂಪುಟದಲ್ಲಿ ತೆಗೆದುಕೊಂಡ ಮಹತ್ವದ ತೀರ್ಮಾನಗಳು

Published : Jul 15, 2021, 09:42 PM ISTUpdated : Jul 15, 2021, 09:45 PM IST
ರಾಜ್ಯ ಸಚಿವ ಸಂಪುಟದಲ್ಲಿ ತೆಗೆದುಕೊಂಡ ಮಹತ್ವದ ತೀರ್ಮಾನಗಳು

ಸಾರಾಂಶ

* ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ * ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆ * ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು, (ಜು.15): ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು (ಗುರುವಾರ) ಸಚಿವ ಸಂಪುಟ ನಡೆಯಿತು.

ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲೂ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ನು ಕ್ಯಾಬಿನೆಟ್‌ ಸಭೆಯಲ್ಲಿ ತೆಗೆದುಕೊಂಡು ತೀರ್ಮಾನಗಳು ಈ ಕೆಳಗಿನಂತಿವೆ.

ದೀದಿ ನಾಡಲ್ಲಿ ಹಿಂಸಾಚಾರವೇ ಹೆಚ್ಚು, ಇಂದ್ರಜಿತ್‌ಗೆ ಉತ್ತರಿಸಿದ ದಚ್ಚು; ಜು.15ರ ಟಾಪ್ 10 ಸುದ್ದಿ!

ಸಂಪುಟ ಸಭೆ ತೀರ್ಮಾನಗಳು

* ಗೋಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳ ಸ್ಥಾಪನೆ, ಅಂದಾಜಿಸಿದ ವೆಚ್ಚದ ಪ್ರಕಾರ ಮೊದಲ ಹಂತದಲ್ಲಿ 15 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ

* ಕರ್ನಾಟಕ ರಾಜ್ತ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಕಟ್ ಬಾಕಿದಾರರಾದ 1,500 ಜನರಿಗೆ ವಿಶೇಷ ವಿನಾಯಿತಿ ಯೋಜನೆ ಅನ್ವಯಿಸುವುದಕ್ಕೆ ಅಸ್ತು.

* ಗದಗ ಪಶು ಸಂಗೋಪನೆ ಕಾಲೇಜಿನದ ಮೂರನೇ ಹಂತದ‌ 30 ಕೋಟಿ ರೂ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ

*  ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 9 ರಿಂದ 11ರವರೆಗೆ ಇನ್ವೆಸ್ಟ್ ಕರ್ನಾಟಕ-2022; ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆಗೆ ಅಸ್ತು

* ರಾಜ್ಯದಲ್ಲಿರುವ ಆಮ್ಲಜನಕ ಉತ್ಪಾದನೆ ಹಾಗೂ ಅಸೋಸಿಯೇಟ್ ಎಂಟರ್ ಪ್ರೈಸಸ್ ಗೆ ವಿಶೇಷ ಪ್ರೋತ್ಸಾಹ ನೀಡುವ ಯೋಜನೆಗೆ ಸಮ್ಮತಿ

* ಜಿಲ್ಲಾ, ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಡಿಸೆಂಬರ್ ಅಂತ್ಯದ ವರೆಗೆ ಮುಂದೂಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

*  ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಸಮ್ಮತಿ

* ದಾಸನಪುರ ಉಪ ಮಾರುಕಟ್ಟೆ ಪ್ರಾಂಗಣದ 'ಇ' ಬ್ಲಾಕ್ ನಲ್ಲಿರುವ ಮಳಿಗೆ/ಉಗ್ರಾಣಗಳನ್ನು ಗುತ್ತಿಗೆ ಕಮ್ ಮಾರಾಟಕ್ಕೆ ನೀಡಲು ಪ್ರಸ್ತಾವಿತ ಮೌಲ್ಯ ಪರಿಷ್ಕರಣೆ

* ರಾಜ್ಯದ ಉದ್ಯೋಗಾಧಾರಿತ ವ್ಯಾಸಂಗ ( ಜೆಒಸಿ) ಪಿಯುಸಿಗೆ ತತ್ಸಮಾನವೆಂದು ಪರಿಗಣನೆ

* ಸನ್ನಡತೆಯ ಆಧಾರದಲ್ಲಿ 139 ಜೀವಾವಧಿ ಸಜಾ ಕೈದಿಗಳ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಶಿಫಾರಸು.
 
* ರಾಯಚೂರು ಜಿಲ್ಲೆ ದೇವದುರ್ಗದ ಸರ್ಕಾರಿ‌ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಂದಾಜಿಸಿದ‌ ವೆಚ್ಚ 58 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಒಪ್ಪಿಗೆ

* 2019ರ ಆಗಸ್ಟ್-ಸೆಪ್ಟಂಬರ್ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಮನೆಗಳ ಪುನರ್ ನಿರ್ಮಾಣ, ರಿಪೇರಿ ಹಾಗೂ ಮನೆ ಬಾಡಿಗೆ ಪಾವತಿಸಲು ಹೊರಡಿಸಿದ ಐದು ಆದೇಶಗಳಿಗೆ ಘಟನೋತ್ತರ ಮಂಜೂರು

* ಕರ್ನಾಟಕ ಕಂದಾಯ ಉಪ ಶಾಖೆ ಸೇವೆಗಳು (ನೇಮಕ) ( ತಿದ್ದುಪಡಿ) ನಿಯಮಗಳು-2021ಕ್ಜೆ ಒಪ್ಪಿಗೆ

* ಬೆಳಗಾವಿ ಹಾಗೂ ಮಂಗಳೂರಿನಲ್ಲಿ ಒಟ್ಟು ‌31.66 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಕಟ್ಟಡಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ

* ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ 45.46 ಕೋಟಿ ರೂ ವೆಚ್ಚದಲ್ಲಿ 2,500 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಗಾರ ನಿರ್ಮಾಣ,

* ತುಂಗಭದ್ರಾ ಕೆಳಮಟ್ಟದ ಬಾಗೇವಾಡಿ ವಿತರಣಾ ಕಾಲುವೆಯಿಂದ ಈ ಜಲಾಗಾರಕ್ಕೆ ನೀರು ಒದಗಿಸಲು ಆಡಳಿತಾತ್ಮಕ ಅನುಮೋದನೆ

*  ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೆದ್ಲೇರಿ, ರಾಹುತನ ಕೆರೆ ಹಾಗೂ ಇತರ 18 ಕೆರೆಗಳನ್ನು ಭರ್ತಿ ಮಾಡುವ‌ 206 ಕೋಟಿ ರೂ ವೆಚ್ಚದ ವಿಸ್ತೃತ ಯೋಜನಾ ವರದಿ ಸ್ಥಿರೀಕರಣ

* ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದೇವಿಘಾಟ್ ಸಮೀಪದ ತುಂಗಭದ್ರಾ ನದಿಯಿಂದ ಮುಕ್ಕುಂಪಿ ಹಾಗೂ ಇತರ ಐದು ಕೆರೆಗಳನ್ನು ತುಂಬುವ 93 ಕೋಟಿ ರೂ ವೆಚ್ಚದ ವಿಸ್ತೃತ ಯೋಜನಾ

* ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ 1,100 ಹೆಕ್ಟೇರ್ ಪ್ರದೇಶಕ್ಕೆ ನೀರುಣ್ಣಿಸಲು ಉದ್ದೇಶಿತ‌ 240‌ ಕೋಟಿ ರೂ ವೆಚ್ಚದಲ್ಲಿ ನೇತ್ರಾವತಿ ನದಿಗೆ ಬ್ರಿಡ್ಜ್‌ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಯೋಜನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರಲ್ಲೇ ಮಾತನಾಡುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯ ಹಿಂದಿನ ರಹಸ್ಯವೇನು?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ