ರಾಜ್ಯದಲ್ಲಿ ಅಭಿವೃದ್ಧಿ ನಿಲ್ಸಿದ್ದೀರಿ, ನಿಮಗೆ ಬೇಕಾದ ಬಿಲ್ ಮಾತ್ರ ನೀಡುತ್ತೀರಿ| ಯಾರಿಗೆ ಕೊಟ್ಟಿದ್ದೀರಿ ಪಟ್ಟಿ ಕೊಡಿ, ಸತ್ತ ಮೇಲೆ ಕೊಡ್ತೀರಾ?| ಉತ್ತರ ಕೊಡಲಾಗದಿದ್ದರೆ ಸರ್ಕಾರ ಏಕೆ ಬೇಕು. ಗವರ್ಮೆಂಟೂ ಗೊತ್ತಿಲ್ಲ ಗವರ್ನೆನ್ಸೂ ಇಲ್ಲ|
ಮಂಗಳೂರು(ಜು.31): ಕೊರೋನಾ ಹೆಣಗಳ ಮೇಲೆ ಸರ್ಕಾರ ಹಣ ಮಾಡಿದೆ. 2000 ಕೋಟಿ ಭ್ರಷ್ಟಾಚಾರ ನಾನು ಹೇಳಿದ್ದು ತಪ್ಪಾದರೆ ನನ್ನನ್ನ ನೇಣಿಗೆ ಹಾಕಿ, ಕೇಸ್ ಹಾಕಿ, ಅದಕ್ಕಿಂತ ಮೊದಲು ನೀವು ಉತ್ತರ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ನಿಲ್ಸಿದ್ದೀರಿ, ನಿಮಗೆ ಬೇಕಾದ ಬಿಲ್ ಮಾತ್ರ ನೀಡುತ್ತೀರಿ. 1600 ಕೋಟಿ, 20 ಲಕ್ಷ ಕೋಟಿ ಘೋಷಣೆ ಮಾಡಿದ್ದೀರಿ, ಯಾರಿಗೆ ಕೊಟ್ಟಿದ್ದೀರಿ ಪಟ್ಟಿ ಕೊಡಿ, ಸತ್ತ ಮೇಲೆ ಕೊಡ್ತೀರಾ? ಉತ್ತರ ಕೊಡಲಾಗದಿದ್ದರೆ ಸರ್ಕಾರ ಏಕೆ ಬೇಕು. ಗವರ್ಮೆಂಟೂ ಗೊತ್ತಿಲ್ಲ ಗವರ್ನೆನ್ಸೂ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
undefined
ಭ್ರಷ್ಟಾಚಾರ ಆರೋಪಕ್ಕೆ ಬಿಸಿ ಮುಟ್ಟಿಸಿದ ಬಿಜೆಪಿ: ಸಿದ್ದರಾಮಯ್ಯ, ಡಿಕೆಶಿಗೆ ಲೀಗಲ್ ನೋಟಿಸ್
ಪ್ರತಿಪಕ್ಷವಾಗಿ ನಾವು ಸಹಕಾರ ಕೊಡೋದು ಕೊಳ್ಳೆ ಹೊಡೀಲಿಕ್ಕಾ? ಗವರ್ಮೆಂಟ್ ಪಾಲಿಸಿ ಪ್ಯಾರಾಲಿಸಿಸ್ ಆಗಿದೆ. ಸರ್ಕಾರ ನೀಡಿದ ಫುಡ್ ಕಿಟ್ ಮೇಲೆ ಬಿಜೆಪಿ ಚಿಹ್ನೆ ಹಾಕಿ ಫೋಟೊ ಹಾಕಿ ಹಂಚಿದ್ದರೂ ಒಬ್ಬನನ್ನೂ ಬಂಧಿಸಲಿಲ್ಲ. ಕೊರೋನಾಕ್ಕಿಂತ ದೊಡ್ಡ ರೋಗ ಬಿಜೆಪಿ ಭ್ರಷ್ಟಾಚಾರವಾಗಿದೆ. ತಪ್ಪು ಮಾಡಿದರೆ ನನ್ನನ್ನೂ ಶಿಕ್ಷಿಸಿ, ನೋಟಿಸ್‌ಗೆ ಉತ್ತರಿಸ್ತೇವೆ. ಅದಕ್ಕಿಂತ ಮೊದಲು ನೀವು ಉತ್ತರ ಕೊಡಿ ಎಂದು ಬಿಎಸ್‌ವೈ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.