ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಟೀಕೆಗೆ ತಿರುಗೇಟು ನೀಡುವ ಭರದಲ್ಲಿ ಅಸಂಬದ್ಧ ಪದ ಬಳಕಿಎ ಮಾಡಿದ ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಸೆಪ್ಟೆಂಬರ್.13) : ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಧ್ಯೆ ನಡೆಯುತ್ತಿರುವ ವಾಕ್ಸಮರಕ್ಕೆ ಕೆಪಿಸಿಸಿ ಕಿಸಾನ್ ಘಟಕ ಎಂಟ್ರಿಯಾಗಿದೆ. ಸಿ.ಟಿ.ರವಿ ಕ್ಷಮೆ ಕೇಳಬೇಕು, ಇಲ್ಲ ರಾಜ್ಯಾದ್ಯಂತ ಹರಕು ಕಚ್ಚೆ ಕಳಿಸುವ ಅಭಿಯಾನದ ಎಚ್ಚರಿಕೆ ನೀಡಿದೆ.
ಹರಕು ಕಚ್ಚೆ ಪಾರ್ಸೆಲ್ ಅಭಿಯಾನದ ಎಚ್ಚರಿಕೆ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವರ್ಸಸ್ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ವಾಕ್ ಸಮರ ಜೋರಾಗಿ ನಡೆಯುತ್ತಿದೆ. ಇದರ ನಡುಗೆ ಕಾಂಗ್ರೇಸ್ ಪಕ್ಷದ ಕಿಸಾನ್ ಘಟಕ ಎಂಟ್ರಿಯಾಗಿದ್ದು ಸಿ ಟಿ ರವಿ ವಿರುದ್ದ ಕಿಡಿಕಾರಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸಿ.ಟಿ ರವಿ ನಾಲಿಗೆ ಹರಿಬಿಡುತ್ತಿದ್ದಾರೆ. ಕೂಡಲೇ ಅವರು ಸಿದ್ದರಾಮಯ್ಯನವರಿಗೆ ಬೇಷರತ್ ಕ್ಷಮೆ ಕೇಳದಿದ್ದರೆ ಸಿ.ಟಿ.ರವಿ ಮನೆಗೆ ರಾಜ್ಯದ ಮೂಲೆ ಮೂಲೆಗಳಿಂದ ಹರಿದ ಕಚ್ಚೆಯನ್ನ ಪಾರ್ಸೆಲ್ ಕಳಿಸುವ ಅಭಿಯಾನ ಹಮ್ಮಿಕೊಳ್ಳುವುದಾಗಿ ಕಿಸಾನ್ ಕಾಂಗ್ರೆಸ್ ಎಚ್ಚರಿಕೆ ನೀಡಿದ್ದಾರೆ.
ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು
ಕಾಂಗ್ರೆಸ್ ಕಿಸಾನ್ ರಾಜ್ಯಾದ್ಯಕ್ಷ ಸಚಿನ್ ಮೀಗಾ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಕೊಪ್ಪ ಪಟ್ಟಣದ ತಮ್ಮ ನಿವಾಸದಲ್ಲಿ ಮಾತನಾಡುರುವ ಸಚಿನ್ ಮೀಗಾ, ಸಿ.ಟಿ.ರವಿ ಮತ್ತೆ-ಮತ್ತೆ ತಮ್ಮ ನಾಲಿಗೆಯನ್ನ ಹರಿಬಿಡುತ್ತಿದ್ದಾರೆ. ಅಭಿವೃದ್ಧಿ ಕಡೆ ಕಿಂಚಿತ್ತು ಕಾಳಜಿ ಇಲ್ಲದ ರಾಜ್ಯದ ಏಕೈಕ ಶಾಸಕ ಯಾರಾದರೂ ಇದ್ದರೆ ಅದು ಸಿ.ಟಿ.ರವಿ ಎಂದು ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರ ಬಗ್ಗೆ ಅಸಂಬದ್ಧ ಪದಗಳನ್ನ ಬಳಸಿ ನಾಲಿಗೆ ಹರಿಬಿಟ್ಟದ್ದನ್ನ ನಾವು ನೋಡಿದ್ದೇವೆ. ಸುಮಾರು ಒಂದೂವರೆ ತಿಂಗಳಿಂದ ಈಚೆಗೆ ಸಿದ್ದರಾಮಯ್ಯನವರ ವಿರುದ್ಧ ಸಿ.ಟಿ.ರವಿ ಕಿಡಿಕಾರಲು ಶುರುಮಾಡಿದ್ದಾರೆ. ಸಿದ್ದರಾಮಯ್ಯನವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವಿಷಯ ತಿಳಿದು ಬಹುತೇಕ ಅವರು ಸ್ಪರ್ಧೆ ಮಾಡೋದು ಖಚಿತವೆಂಬ ವಾತಾವರಣ ಸೃಷ್ಟಿಯಾದ ಹಿನ್ನೆಲೆ ಸಿ.ಟಿ.ರವಿ ಭ್ರಮನಿರಸರಾಗಿ, ಸಿದ್ದರಾಮಯ್ಯನವರ ವಿರುದ್ಧ ಏಕಾಏಕಿ ದಾಳಿಗೆ ಮುಗಿಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಚ್ಚೆ ಹರುಕ ಎಂಬ ಅಸಂಬದ್ಧ ಪದವನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ. ಸಿ.ಟಿ.ರವಿ ಆ ಪದ ಬಳಕೆಯ ಹಿನ್ನೆಲೆ ಶೀಘ್ರವೇ ಬೇಷರತ್ ಕ್ಷಮೆ ಕೇಳಬೇಕು. ಮೊಂಡುತನದಿಂದ ಇದನ್ನ ನಿರಾಕರಸಿದರೆ ನಿಮ್ಮ ಮನೆಗೆ ರಾಜ್ಯಾದ್ಯಂತ ರಾಜ್ಯದ ಮೂಲೆ-ಮೂಲೆಗಳಿಂದ ಹರಿದ ಕಚ್ಚೆಗಳನ್ನ ನಿಮ್ಮ ಮನೆಗೆ ಪಾರ್ಸೆಲ್ ಮಾಡುವ ಅಭಿಯಾನವನ್ನ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.