ಕರಡಿ ಸಂಗಣ್ಣನನ್ನು ಗುಜರಿ ಲೀಡರ್ ಮಾಡ್ಯಾರ: ಸಂಸದರ ಆಕ್ರೋಶದ ನುಡಿ

By Kannadaprabha News  |  First Published Mar 17, 2024, 11:15 PM IST

ನಾನು ಪಕ್ಷದಲ್ಲಿಯೇ ಮುಂದುವರಿಯುತ್ತೇನೆ ಅಥವಾ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎನ್ನುವುದಕ್ಕೆ ಈಗಲೇ ಉತ್ತರ ನೀಡುವುದಿಲ್ಲ. ಅದಕ್ಕಿಂತ ಮೊದಲು ನನಗೆ ಪಕ್ಷದ ರಾಜ್ಯ ನಾಯಕರು ಮೂರು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅವರು ಉತ್ತರ ನೀಡಿದ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಸಂಸದ ಸಂಗಣ್ಣ ಕರಡಿ 


ಕೊಪ್ಪಳ(ಮಾ.17): ಸಂಗಣ್ಣ ಕರಡಿಯನ್ನು ಒಬ್ಬ ಗುಜರಿ ಲೀಡರ್ ಮಾಡ್ಯಾರ, ಇದಕ್ಕಿಂತ ನಾನೇನು ಹೇಳುವುದಿಲ್ಲ... ಟಿಕೆಟ್ ಕೈ ತಪ್ಪಿದ್ದರಿಂದ ವ್ಯಘ್ರರಾಗಿರುವ ಸಂಸದ ಸಂಗಣ್ಣ ಕರಡಿ ಅವರ ಆಕ್ರೋಶದ ನುಡಿ ಇದು. ಗಿಣಿಗೇರಿಯಲ್ಲಿ ಮೇಲ್ಲೇತುವೆ ಉದ್ಘಾಟನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಭಾವುಕರಾಗಿಯೇ ಮಾತನಾಡಿದ ಅವರು, ನಾನು ಪಕ್ಷದಲ್ಲಿಯೇ ಮುಂದುವರಿಯುತ್ತೇನೆ ಅಥವಾ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎನ್ನುವುದಕ್ಕೆ ಈಗಲೇ ಉತ್ತರ ನೀಡುವುದಿಲ್ಲ. ಅದಕ್ಕಿಂತ ಮೊದಲು ನನಗೆ ಪಕ್ಷದ ರಾಜ್ಯ ನಾಯಕರು ಮೂರು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅವರು ಉತ್ತರ ನೀಡಿದ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಏನೇನು ಪ್ರಶ್ನೆಗಳು?

Tap to resize

Latest Videos

undefined

1. ಟಿಕೆಟ್ ನಿರಾಕರಣೆ ಬಳಿಕವೂ ಇದುವರೆಗೂ ರಾಜ್ಯ ನಾಯಕರು ನನಗೆ ಯಾಕೆ ಕರೆ ಮಾಡಿಲ್ಲ?
2. ನನಗೆ ಟಿಕೆಟ್ ತಪ್ಪಿಸಲು ಭಾವುಕರಾಗಿರುವ ಸಂಸದ ಸಂಗಣ್ಣ ಕರಡಿ ಕಾರಣವೇನು?
3. ನನಗೆ ಟಿಕೆಟ್ ತಪ್ಪಿಸಲು ಕಾರಣ ಯಾರು?

Loksabha Elections 2024: ನಾನಿನ್ನೂ ಯಾವ ನಿರ್ಧಾರ ತೆಗೆದುಕೊಂಡಿಲ್ಲ: ಸಂಸದ ಸಂಗಣ್ಣ ಕರಡಿ

ಈ ಮೂರು ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ಇದಕ್ಕೆ ಅವರು ಯಾವ ರೀತಿಯ ಉತ್ತರ ನೀಡುತ್ತಾರೆ ಎನ್ನುವುದರ ಆಧಾರದ ಮೇಲೆ ನಾನು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ರಾಜಕೀಯ ನಿವೃತ್ತಿಯಾಗುವುದಿಲ್ಲ. ನಾನು ರಾಜಕೀಯವಾಗಿ ಮಾಡಬೇಕಾದ ಕಾರ್ಯಗಳು ಸಾಕಷ್ಟು ಇವೆ. ಟಿಕೆಟ್ ತಪ್ಪಿದ್ದಕ್ಕೆ ನನಗೆ ನೋವಾಗಿದೆ. ಅದಾದ ಮೇಲೆಯೂ ರಾಜ್ಯ ನಾಯಕರು ನನಗೆ ಕನಿಷ್ಠಸೌಜನ್ಯ ಕ್ಕೂಕರೆ ಮಾಡಿ ಮಾತನಾಡಿಲ್ಲ ಎನ್ನುವುದು. ಇನ್ನು ಈಗ ನನಗೆ ರಾಜ್ಯ ನಾಯಕರು ಕರೆ ಮಾಡುತ್ತಿದ್ದಾರೆ. ಆದರೆ, ನಾನು ಕರೆ ಸ್ವೀಕಾರ ಮಾಡಿಲ್ಲ. ನೋವಾಗಿ ರುವುದರಿಂದ ಕರೆ ಸ್ವೀಕಾರ ಮಾಡುತ್ತಿಲ್ಲ. ನನ್ನ ಬಳಿ ಬಂದಿದ್ದ ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಅವರನ್ನು ಈ ಪ್ರಶ್ನೆ ಕೇಳಿದ್ದೇನೆ, ಉತ್ತರ ನೀಡಿಲ್ಲ ಎಂದು ಕಣ್ಣೀರು ಹಾಕಿದರು.

ಎಲ್ಲಿಯೂ ಹೋಗುವುದಿಲ್ಲ, ಆದರೆ, ನನ್ನ ಪ್ರಶ್ನೆಗಳಿಗೆ ಉತ್ತರ ದೊರೆತರೆ ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿಯ ಪರ ವಾಗಿ ಪ್ರಚಾರ ಮಾಡುತ್ತೇನೆ. ಇನ್ನು ಕಾರ್ಯಕರ್ತರು ಈಗ ಸಿಟ್ಟಾಗಿದ್ದಾರೆ. ಅದೆಲ್ಲವನ್ನು ಸರಿಮಾಡಬೇಕಾಗುತ್ತದೆ ಎಂದರು.

click me!