ಕೊಪ್ಪಳ: ಕಾಂಗ್ರೆಸ್ ಅಭ್ಯರ್ಥಿ ಘೋಷಣೆ, ಬಿಜೆಪಿಯಲ್ಲಿ ಇನ್ನೂ ಗಲಿಬಿಲಿ!

By Kannadaprabha News  |  First Published Apr 7, 2023, 11:56 AM IST

 ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿಯೇ ನಾಲ್ವರು ಹುರಿಯಾಳು ಘೋಷಣೆ ಮಾಡಿದ್ದ ಕಾಂಗ್ರೆಸ್‌ ಉಳಿದಿದ್ದ ಗಂಗಾವತಿ ಕ್ಷೇತ್ರದಿಂದಲೂ ಈಗ ತನ್ನ ಅಭ್ಯರ್ಥಿ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಎಂದು ಘೋಷಣೆ ಮಾಡುವ ಮೂಲಕ ಎಲ್ಲ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಿದೆ.


ಸೋಮರಡ್ಡಿ ಅಳವಂಡಿ

ಕೊಪ್ಪಳ (ಏ.7) : ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿಯೇ ನಾಲ್ವರು ಹುರಿಯಾಳು ಘೋಷಣೆ ಮಾಡಿದ್ದ ಕಾಂಗ್ರೆಸ್‌ ಉಳಿದಿದ್ದ ಗಂಗಾವತಿ ಕ್ಷೇತ್ರದಿಂದಲೂ ಈಗ ತನ್ನ ಅಭ್ಯರ್ಥಿ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಎಂದು ಘೋಷಣೆ ಮಾಡುವ ಮೂಲಕ ಎಲ್ಲ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಿದೆ.

Tap to resize

Latest Videos

undefined

ಆದರೆ, ಆಡಳಿತಾರೂಢ ಬಿಜೆಪಿಗೆ ಇದುವರೆಗೂ ಒಂದೇ ಒಂದು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಲು ಆಗಿಲ್ಲ. ಈ ಬಾರಿ ಹಲವು ಬದಲಾವಣೆ ಆಗುತ್ತವೆ, ಹೊಸ ಮುಖಗಳಿರುತ್ತವೆ ಎಂಬ ಮಾಹಿತಿ ಹಲವರಲ್ಲಿ ಗಲಿಬಿಲಿಗೆ ಕಾರಣವಾಗಿದೆ.

ಕೊಪ್ಪಳ: ಕೊಲೆ ಬೆದರಿಕೆ, ದಯಾಮರಣಕ್ಕೆ ರಾಜ್ಯಪಾಲರಿಗೆ ಅರ್ಜಿ!

ಕುಷ್ಟಗಿಯಿಂದ ಶಾಸಕ ಅಮರೇಗೌಡ ಬಯ್ಯಾಪುರ(Amaregowda bayyapur), ಯಲಬುರ್ಗಾದಿಂದ ಮಾಜಿ ಸಚಿವ ಬಸವರಾಜ ರಾಯರಡ್ಡಿ(Basavaraj Rayareddy), ಕೊಪ್ಪಳದಿಂದ ಶಾಸಕ ರಾಘವೇಂದ್ರ ಹಿಟ್ನಾಳ(Raghavendra Hitnal) ಹಾಗೂ ಕನಕಗಿರಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ(Shivaraj Tangadagi) ಅವರನ್ನು ಈಗಾಗಲೇ ಘೋಷಣೆ ಮಾಡಿದ್ದು, ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಎಲ್ಲಿಯೂ ಇದುವರೆಗೂ ಯಾವುದೇ ಬಂಡಾಯವಾಗಲಿ ಅಸಮಾಧಾನವಾಗಲಿ ವ್ಯಕ್ತವಾಗಿಲ್ಲ. ಘೋಷಣೆಯಾಗಿರುವ ಅಭ್ಯರ್ಥಿಗಳ ವಿರುದ್ಧ ಪಕ್ಷದಲ್ಲಿ ಯಾರೊಬ್ಬರು ಧ್ವನಿ ಎತ್ತಿಲ್ಲ. ಆದರೆ, ಈ ಬಂಡಾಯದ ಕಾರಣಕ್ಕಾಗಿಯೇ ಬಾಕಿ ಇದ್ದ ಗಂಗಾವತಿ ಕ್ಷೇತ್ರದಿಂದಲೂ ಕಾಂಗ್ರೆಸ್‌ ತನ್ನ ಹುರಿಯಾಳು ಘೋಷಣೆ ಮಾಡಲು ಹಿಂದೆ ಮುಂದೆ ನೋಡಿತ್ತು. ಈಗ ನಿರೀಕ್ಷೆಯಂತೆ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಹೆಸರನ್ನು ಘೋಷಣೆ ಮಾಡಲಾಗಿದೆ. ಆದರೆ, ಇದು ಈಗ ಗಂಗಾವತಿಯಲ್ಲಿ ಬಂಡಾಯ ಸ್ಫೋಟಕ್ಕೆ ದಾರಿಯಾಗುವ ಎಲ್ಲ ಲಕ್ಷಣಗಳು ಇವೆ.

ಯಾವುದೇ ಕಾರಣಕ್ಕೂ ಇಕ್ಬಾಲ್‌ ಅನ್ಸಾರಿಗೆ ಟಿಕೆಟ್‌ ನೀಡಬಾರದು ಎಂದು ಪಟ್ಟು ಹಿಡಿದಿದ್ದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಹಾಗೂ ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಅವರ ನಡೆ ಈಗ ಕುತೂಹಲ ಕೆರಳಿದೆ. ಈಗಾಗಲೇ ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಅವರು ಇಕ್ಬಾಲ್‌ ಅನ್ಸಾರಿಗೆ ಟಿಕೆಟ್‌ ಘೋಷಣೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ ಈ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ನಾವು ಎಣಿಸಿರಲಿಲ್ಲ. ಕ್ಷೇತ್ರದಲ್ಲಿ ಅಭಿಪ್ರಾಯ ಸಂಗ್ರಹಿಸಿಕೊಂಡ ಮೇಲೆಯೂ ಈ ರೀತಿ ಘೋಷಣೆ ಮಾಡಿರುವುದನ್ನು ನಾವು ವಿರೋಧಿಸುತ್ತೇವೆ. ಈಗಲಾದರೂ ಟಿಕೆಟ್‌ ಬದಲಾಯಿಸುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಬಿಜೆಪಿಯಲ್ಲಿ ಗಲಿಬಿಲಿ:

ಕಾಂಗ್ರೆಸ್‌ ಐದು ಕ್ಷೇತ್ರಗಳಲ್ಲಿ ತನ್ನ ಹುರಿಯಾಳು ಘೋಷಣೆ ಮಾಡಿದ್ದರೂ ಬಿಜೆಪಿ ಇದುವರೆಗೂ ತನ್ನ ಒಂದೇ ಒಂದು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಅಷ್ಟೇ ಅಲ್ಲ,ಅನೇಕ ಬದಲಾವಣೆ ಮಾಡುವ ವದಂತಿ ಭಾರಿ ಗಲಿಬಿಲಿಗೆ ಕಾರಣವಾಗಿದ್ದು, ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿಸಿದೆ. ಈಗಿರುವ ಮಾಹಿತಿಯ ಪ್ರಕಾರ ಬಿಜೆಪಿ ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಹೊಸ ಪ್ರಯೋಗ ಮಾಡುತ್ತಿದೆ. ಹೀಗಾಗಿ, ಹಾಲಿ ಶಾಸಕ, ಸಚಿವರಿಗೂ ಟಿಕೆಟ್‌ ಕೈ ತಪ್ಪಿಸಲಾಗುತ್ತದೆ ಎನ್ನುವ ವದಂತಿ ಬಿಜೆಪಿ ಪಕ್ಷದಲ್ಲಿ ತಳಮಳಕ್ಕೆ ಕಾರಣವಾಗಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರ(Koppal assembly constituency)ದಲ್ಲಿಯೂ ಯಾರಿಗೆ ಟಿಕೆಟ್‌ ಎನ್ನುವುದು ಇನ್ನು ನಿಗೂಢ ಇದೆ. ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುತ್ತದೆ ಎನ್ನವುದು ಈಗ ಹುಸಿಯಾಗುತ್ತಿದೆ. ಇಲ್ಲಿಯೂ ಬದಲಾಯಿಸಲಾಗುತ್ತದೆ. ಹೀಗಾಗಿ, ಹಾಲಿ ಶಾಸಕರಾದ ಬಸವರಾಜ ದಢೇಸ್ಗೂರು(Basavaraj dadhesuguru) ಹಾಗೂ ಪರಣ್ಣ ಮುನವಳ್ಳಿ ಅವರಿಗೂ ಟಿಕೆಟ್‌ ಡೌಟ್‌ ಎನ್ನುವ ವದಂತಿ ಭಾರಿ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ. ಆದರೆ, ಅವರು ಮಾತ್ರ ತಮಗೇ ಟಿಕೆಟ್‌ ಎನ್ನುವ ವಿಶ್ವಾಸದಲ್ಲಿದ್ದಾರೆ.

ಅಂಜನಾದ್ರಿಯಲ್ಲಿ ಹನುಮಾನ್ ಜಯಂತಿ, ಬೆಟ್ಟದ ವಿಹಂಗಮ ನೋಟದ ವಿಡಿಯೋ ವೈರಲ್!

ಅಚ್ಚರಿಯ ಬೆಳವಣಿಗೆ ಎಂದರೆ ಸಚಿವ ಹಾಲಪ್ಪ ಆಚಾರ್‌ ಅವರಿಗೂ ಭಾರಿ ಪೈಪೋಟಿ ಕೇಳಿ ಬಂದಿದೆ. ಇಲ್ಲಿಯೂ ಸಹ ಅನೇಕ ಹೆಸರು ಹರಿದಾಡುತ್ತಿವೆ. ಕುಷ್ಟಗಿಯಲ್ಲಿ ದೊಡ್ಡನಗೌಡ ಪಾಟೀಲ್‌ ಅವರ ಹೆಸರು ಫೈನಲ್‌ ಆಗಿದೆ ಎಂದು ಹೇಳಲಾಗುತ್ತಿದೆಯಾದರೂ ಕೊನೆಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎನ್ನಲಾಗುತ್ತಿದೆ.

click me!