Karnataka election 2023: ಹೊಸ ಚುನಾವಣೆ, ಹಳೆಯ ಕಲಿಗಳ ಕಾಳಗ

Published : Apr 07, 2023, 11:09 AM IST
Karnataka election 2023: ಹೊಸ ಚುನಾವಣೆ, ಹಳೆಯ ಕಲಿಗಳ ಕಾಳಗ

ಸಾರಾಂಶ

ಕಾಂಗ್ರೆಸ್‌ ಪಾಳಯ ಶಿರಸಿ- ಸಿದ್ದಾಪುರ ಕ್ಷೇತ್ರಕ್ಕೆ ನಿರೀಕ್ಷಿಸಿದಂತೆಯೇ ಭೀಮಣ್ಣ ನಾಯ್ಕ ಅವರಿಗೇ ಮತ್ತೆ ಟಿಕೆಟ್‌ ಘೋಷಣೆ ಮಾಡಿದೆ. ಬಿಜೆಪಿಯಲ್ಲೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಅಭ್ಯರ್ಥಿ ಎಂಬುದು ಬಹುತೇಕ ನಿಶ್ಚಿತವಾಗಿದೆ. 2018ರ ಚುನಾವಣೆಯೇ ಮತ್ತೆ ನಡೆದಂತೆ ಕ್ಷೇತ್ರದ ಜನತೆಗೆ ಭಾಸವಾಗುತ್ತಿದೆ. ಹೊಸ ಚುನಾವಣೆ-ಹಳೆಯ ಕಲಿಗಳು ಎಂಬಂತಾಗಿದೆ.

ಮಂಜುನಾಥ ಸಾಯೀಮನೆ

ಶಿರಸಿ (ಏ.7) : ಕಾಂಗ್ರೆಸ್‌ ಪಾಳಯ ಶಿರಸಿ- ಸಿದ್ದಾಪುರ ಕ್ಷೇತ್ರಕ್ಕೆ ನಿರೀಕ್ಷಿಸಿದಂತೆಯೇ ಭೀಮಣ್ಣ ನಾಯ್ಕ ಅವರಿಗೇ ಮತ್ತೆ ಟಿಕೆಟ್‌ ಘೋಷಣೆ ಮಾಡಿದೆ. ಬಿಜೆಪಿಯಲ್ಲೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಅಭ್ಯರ್ಥಿ ಎಂಬುದು ಬಹುತೇಕ ನಿಶ್ಚಿತವಾಗಿದೆ. 2018ರ ಚುನಾವಣೆಯೇ ಮತ್ತೆ ನಡೆದಂತೆ ಕ್ಷೇತ್ರದ ಜನತೆಗೆ ಭಾಸವಾಗುತ್ತಿದೆ. ಹೊಸ ಚುನಾವಣೆ-ಹಳೆಯ ಕಲಿಗಳು ಎಂಬಂತಾಗಿದೆ.

ಕ್ಷೇತ್ರದಲ್ಲಿ 1.90 ಲಕ್ಷ ಮತದಾರರಿದ್ದಾರೆ. ಶಿರಸಿ(Shirasi) ತಾಲೂಕಿನಲ್ಲಿ ಹವ್ಯಕ ಬ್ರಾಹ್ಮಣರು(Havyaka brahman) ಮತ್ತು ಸಿದ್ದಾಪುರ ತಾಲೂಕಿನಲ್ಲಿ ನಾಮಧಾರಿಗಳ ಪ್ರಾಧಾನ್ಯತೆ ಇದೆ. ಈ ಎರಡೂ ಸಮುದಾಯದ ಅಭ್ಯರ್ಥಿಗಳು ಒಬ್ಬರು ಬಿಜೆಪಿಯಿಂದ, ಇನ್ನೊಬ್ಬರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ಸಿಗೆ ಬೆಂಬಲಿಸುವ ಹವ್ಯಕರು, ಬಿಜೆಪಿ ಬೆಂಬಲಿಸುವ ನಾಮಧಾರಿಗಳ ಸಂಖ್ಯೆಯೂ ಜಾಸ್ತಿ ಇದೆ. ಆದರೆ, ಮತದಾರನ ಮನ ಒಲಿಕೆ ಯಾವ ಮಾದರಿಯಲ್ಲಿರಲಿದೆ ಎಂಬುದೇ ಮುಂದಿರುವ ಪ್ರಶ್ನೆ.

ಪ್ರಜಾಪ್ರಭುತ್ವದ ಮೌಲ್ಯ, ರಾಷ್ಟ್ರಹಿತಕ್ಕಾಗಿ ಬಿಜೆಪಿ ಕಾರ್ಯ ಮಾಡುತ್ತಿದೆ: ಸಚಿವ ಶಿವರಾಮ್ ಹೆಬ್ಬಾರ್

ಜಾಗ್ರತವಾಗಬೇಕಿದೆ ಭೀಮಣ್ಣ:

ಭೀಮಣ್ಣ ನಾಯ್ಕ(Bhimanna naik) ಅನುಭವಿ ರಾಜಕಾರಣಿ. ಸಾಮಾನ್ಯರು, ಬಡವರ ಪರವಾಗಿ ಕಾಳಜಿ ಹೊಂದಿದ ವ್ಯಕ್ತಿ. ಆದರೆ, ಈ ಹಿಂದಿನ ಚುನಾವಣೆಗಳಲ್ಲಿ ಈ ಅಂಶಗಳಾವವೂ ಪ್ರಧಾನವಾಗಲೇ ಇಲ್ಲ.

ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar hegde kageri) ಅವರಿಗೆ ಗೆಲುವು ಹೊಸದಲ್ಲ, ಭೀಮಣ್ಣ ಅವರಿಗೆ ಸೋಲು ಹೊಸದಲ್ಲ ಎಂದು ಸ್ವತಃ ಕಾಂಗ್ರೆಸ್‌ ಕಾರ್ಯಕರ್ತ(Congress workers)ರೂ ಹೇಳುವ ಸ್ಥಿತಿ ಇಲ್ಲಿದೆ. ಹಾಗೆಂದು ಕಾಂಗ್ರೆಸ್‌ ಒಗ್ಗಟ್ಟಿನಿಂದ ಶ್ರಮಿಸಿದರೆ ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದಲೇ ಆರಿಸಿ ಬರುತ್ತಾರೆ. ಆದರೆ, ಜಿಲ್ಲೆಯ ಕಾಂಗ್ರೆಸ್‌ ಪಾಳಯ ಸಮುದ್ರದಂತೆ. ಇಲ್ಲಿ ದಡ ಹತ್ತಿಸಲು ಶ್ರಮಿಸುವವರು ಎಷ್ಟುಜನರಿದ್ದಾರೋ ಅದಕ್ಕಿಂತ ಜಾಸ್ತಿ ಜನ ಕಾಲೆಳೆಯಲು ಕಾಯುತ್ತಿರುತ್ತಾರೆ. ಭೀಮಣ್ಣ ನಾಯ್ಕ ಇದುವರೆಗೂ ಇಂತಹ ಹಲವು ಸವಾಲುಗಳನ್ನು ಎದುರಿಸಿದ್ದಾರೆ. 2018ರ ಚುನಾವಣೆಯಲ್ಲಿ ಹಿನ್ನಡೆಗೆ ಉಂಟಾದ ಕಾರಣಗಳನ್ನೂ ಅವರು ಅರಿತಿದ್ದಾರೆ, ಅವಲೋಕಿಸಿದ್ದಾರೆ, ಆತ್ಮೀಯರೊಂದಿಗೆ ಹೇಳಿಕೊಂಡಿದ್ದಾರೆ. ಆ ಬಳಿಕ ಒಂದಿಷ್ಟುವಿದ್ಯಮಾನಗಳು ಘಟಿಸಿದ್ದರೂ ಕಾಲೆಳೆಯುವವರ ಸಂಖ್ಯೆ ಏನೂ ಕ್ಷೇತ್ರದಲ್ಲಿ ಕಡಿಮೆ ಇಲ್ಲ. ಈ ಬಾರಿಯಾದರೂ ಭೀಮಣ್ಣ ದಡ ಹತ್ತಲೇಬೇಕು ಎಂದಾದಲ್ಲಿ ಹಿಂದಾದ ತಪ್ಪುಗಳನ್ನು ಮೆಲುಕು ಹಾಕಿಕೊಳ್ಳಲೇಬೇಕಿದೆ. ಕಾಲೆಳೆಯುವವರನ್ನೂ ತನ್ನೊಂದಿಗೆ ಸೇರಿಸಿಕೊಂಡು ಮುಂದಡಿ ಇಡಬೇಕಿದೆ.

ಜೆಡಿಎಸ್‌ ಪಾಳಯದಲ್ಲಿ ಈ ಬಾರಿ ಹೊಸ ಅಭ್ಯರ್ಥಿಯಾಗಿ ಉಪೇಂದ್ರ ಪೈ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಲ್ಲಿದ್ದ ಶಶಿಭೂಷಣ ಹೆಗಡೆ(Shashibhushan hegde) ದೊಡ್ಮನೆ ತಮ್ಮ ಬೆಂಬಲಿಗರನ್ನೆಲ್ಲ ಬಾಚಿಕೊಂಡು ಬಿಜೆಪಿ ಸೇರಿ ಆಗಿದೆ. ಈಗ ಉಪೇಂದ್ರ ಪೈ ನೀಡುವ ಸ್ಪರ್ಧೆ ಕಾಂಗ್ರೆಸ್ಸಿಗೆ ನೇರ ಅನುಪಾತದಲ್ಲಿದೆ.

ಉಪೇಂದ್ರ ಪೈ ತೀರ ಇತ್ತೀಚಿನವರೆಗೂ ಕಾಂಗ್ರೆಸ್ಸಿನಲ್ಲಿಯೇ ಸಕ್ರಿಯವಾಗಿ ಇದ್ದವರು. ಕಾಂಗ್ರೆಸ್‌ ಪಾಳಯದ ಒಳ ಹೊರಗಿನ ಗುಟ್ಟುಗಳೆಲ್ಲ ಉಪೇಂದ್ರ ಪೈ ಅವರಿಗೆ ಮೈಗತವಾಗಿವೆ. ಅದಕ್ಕಿಂತ ಕಾಂಗ್ರೆಸ್ಸಿನಲ್ಲಿ ಎಲ್ಲಿ ಹಿಡಿದು ಅಲುಗಾಡಿಸಿದರೆ ಏನು ಉದುರುತ್ತವೆ ಎಂಬುದು ಅವರಿಗೆ ತಿಳಿದಿದೆ. ಈ ಚುನಾವಣೆಯಲ್ಲಿ ಅವರು ಪಡೆಯುವ ಮತಗಳಲ್ಲಿ ಕಾಂಗ್ರೆಸ್‌ ಮತಗಳೂ ಗಮನಾರ್ಹ ಪ್ರಮಾಣದಲ್ಲಿರುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ಬಾರಿ ಕ್ಷೇತ್ರದ ಕೆಲವೆಡೆ ವಿರೋಧದ ಅಲೆಯೂ ಇದೆ. ಇನ್ನೊಂದೆಡೆ ಪೂರಕ ವಾತಾವರವೂ ಇದೆ.

ಭೀಮಣ್ಣ ನಾಯ್ಕ ಹಿಂದೆ ಸಮಾಜವಾದಿ ಪಕ್ಷದಲ್ಲಿ ನಿಂತು ಸೋತವರು. ಬಳಿಕ ಕಾಗೇರಿ ವಿರುದ್ಧ, ಯಲ್ಲಾಪುರದಲ್ಲಿ ಹೆಬ್ಬಾರ್‌ ವಿರುದ್ಧ ಕೊನೆಗೆ ಮೊನ್ನೆ ನಡೆದ ಪರಿಷತ್‌ ಚುನಾವಣೆಯಲ್ಲೂ ಸಹ ಸೋತವರು. ಪ್ರತಿ ಸೋಲಿನಲ್ಲಿ ಆದ ತಪ್ಪುಗಳನ್ನು ಸೂಕ್ಷ್ಮವಾಗಿ ಈ ಚುನಾವಣೆಯಲ್ಲಿ ಸರಿಪಡಿಸಿಕೊಂಡು ಸಿಕ್ಕಿರುವ ಅವಕಾಶದಿಂದ ವಿಧಾನ ಸೌಧದ ಮೆಟ್ಟಿಲೇರಬೇಕಿದೆ.

ನಿಮಗೆ ಮೀಸಲಾತಿ ಕೊಡುವವರು ಬೇಕೋ; ತೆಗೆಯುವವರು ಬೇಕೋ?: ಜೋಶಿ ಪ್ರಶ್ನೆ

ಒಂದೊಮ್ಮೆ ಭೀಮಣ್ಣ ಸೂಕ್ಷ್ಮ ಹೆಜ್ಜೆ ಇಡುವಲ್ಲಿ ಎಡವಿದರೆ ಮುಂದೆ ಎಲ್ಲವೂ ಮೊದಲಿನಂತೆಯೇ ಇರಲಿದೆ... ಮಧ್ಯೆ ಚುನಾವಣೆಯೊಂದು ಬಂದು ಹೋಗಿರುತ್ತದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ