ಅರಣ್ಯ ಜಮೀನು ತೆರವು: ಕಾಂಗ್ರೆಸ್ ಸರ್ಕಾರದ ವಿರುದ್ದ ಸಂಸದ ಮುನಿಸ್ವಾಮಿ ಆಕ್ರೋಶ

By Kannadaprabha News  |  First Published Sep 10, 2023, 2:12 PM IST

ರೈತರು ಬೆಳೆದಂತ ತರಕಾರಿ ಬೆಳೆಯನ್ನು ಕೊಯ್ಲು ಮಾಡಲು ಬಿಡದೆ ಅರಣ್ಯ ಇಲಾಖೆ ತೆರವು ಮಾಡುತ್ತಿರುವುದು ಅನ್ಯಾಯ ಅಕ್ರಮ ಎಂದು ಸಂಸದ ಮುನಿಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 


ಶ್ರೀನಿವಾಸಪುರ (ಸೆ.10): ರೈತರು ಬೆಳೆದಂತ ತರಕಾರಿ ಬೆಳೆಯನ್ನು ಕೊಯ್ಲು ಮಾಡಲು ಬಿಡದೆ ಅರಣ್ಯ ಇಲಾಖೆ ತೆರವು ಮಾಡುತ್ತಿರುವುದು ಅನ್ಯಾಯ ಅಕ್ರಮ ಎಂದು ಸಂಸದ ಮುನಿಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಿರುವ ಪ್ರದೇಶಗಳಿಗೆ ತೆರಳಿ ಅಲ್ಲಿನ ರೈತರನ್ನು ಭೇಟಿ ಮಾಡಿದ ನಂತರ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿದ ಅವರು ತೋಟಗಾರಿಕೆ ಬೆಳೆಗಳನ್ನು ನಾಶಮಾಡಿರುವುದಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ಮುಖ್ಯಮಂತ್ರಿ ಸ್ವತಃ ರೈತನ ಮಗನಾಗಿದ್ದಾರೆ, ಕೃಷಿ ಸಚಿವ ಕೃಷ್ಣ ಬೈರೇಗೌಡ ಜಿಲ್ಲೆಯವರೆ ಆಗಿದ್ದರೂ ಇಲ್ಲಿನ ರೈತಾಪಿ ಜನರ ಸಮಸ್ಯೆ ನೋವು ಆಲಿಸುತ್ತಿಲ್ಲ ಎಂದು ದೂರಿದರು.

ದಾಖಲೆ ಇದ್ದರೂ ಜಮೀನು ತೆರವು: ಸಣ್ಣ-ಪುಟ್ಟ ರೈತರಿಗೆ ಕಂದಾಯ ಇಲಾಖೆಯಿಂದ ಭೂಮಿ ಮಂಜೂರಾಗಿರುವ ಬಗ್ಗೆ ದಾಖಲೆಗಳು ಇವೆ ಅದರ ಆಧಾರದಲ್ಲಿ ರೈತರು ಮಾವು, ತರಕಾರಿ ಬೆಳೆಗಳನ್ನು ಬೆಳೆಯುತ್ತ ಜೀವನ ಮಾಡುತ್ತಿದ್ದಾರೆ, ಅಂತಹವರ ಜಮೀನುಗಳನ್ನು ಬಿಡದ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಅರಣ್ಯ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿ ಎರಡು ವಾರ ಕಳೆದ ನಂತರ ಕೋಲಾರ ಸಂಸದ ಮುನಿಸ್ವಾಮಿ ಧೀಡಿರ್ ಶ್ರೀನಿವಾಸಪುರ ತಾಲೂಕಿನ ಪಾಳ್ಯ, ಚಿರುವನಹಳ್ಳಿ, ಅವಲಕುಪ್ಪ ನಾರಮಾಕಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಬೇಟಿ ನೀಡಿ ಭೂಮಿ ಕಳೆದುಕೊಂಡ ರೈತರಿಗೆ ಸಾಂತ್ವಾನ ಹೇಳಿದರು.

Tap to resize

Latest Videos

ಸಭಾಧ್ಯಕ್ಷನಾಗಿ ಸ್ಥಾನದ ಘನತೆ ಉಳಿಸುವ ಕೆಲಸ ಮಾಡುವೇ: ಯು.ಟಿ.ಖಾದರ್

ಅರಣ್ಯ ಇಲಾಖೆ ವಿರುದ್ಧ ಹೋರಾಟ: ನಂತರ ದೂರವಾಣಿ ಮೂಲಕ ಜಿಲ್ಲಾ ಅರಣ್ಯಾಧಿಕಾರಿಗೆ ಕರೆ ಮಾಡಿದರಾದರು ಅಧಿಕಾರಿಗಳಿಂದ ಕರೆ ಸ್ವೀಕಾರ ಆಗದ ಹಿನ್ನೆಲೆಯಲ್ಲಿ ರೈತರೊಂದಿಗೆ ಮಾತನಾಡಿದ ಸಂಸದ ಈ ಬಗ್ಗೆ ಮುಂದಿನ ದಿನಗಳಲ್ಲಿ ಶ್ರೀನಿವಾಸಪುರ ಅರಣ್ಯ ಇಲಾಖೆ ವಿರುದ್ಧ ಎಲ್ಲಾ ರೈತರು ಒಗ್ಗಾಟ್ಟಾಗಿ ಹೋರಾಟ ಮಾಡೋಣ ಎಂದರು. ತಾಲೂಕಿನ ನಾರಮಾಕನಹಳ್ಳಿ ಬಳಿ ಸಂಸದ ಮುನಿಸ್ವಾಮಿ ಸ್ಥಳದಲ್ಲಿದ್ದಂತೆ ಜೆಸಿಬಿಗಳ ಮೇಲೆ ರೈತರು ಕಲ್ಲು ತೂರಾಟ ನಡೆಸಿದಾಗ ೫ ಜೆಸಿಬಿಗಳ ಗಾಜು ಪುಡಿಪುಡಿಯಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು, ತಕ್ಷಣ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಆಗಮಿಸಿ ವಾತಾವರಣ ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ರೈತರನ್ನು ಸಮಾಧಾನಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ರೈತ ಮೊರ್ಚಾ ಜಿಲ್ಲಾಧ್ಯಕ್ಷ ಚಿರುವುನಹಳ್ಳಿ ಲಕ್ಷ್ಮಣಗೌಡ, ರೋಣೂರು ಚಂದ್ರು,ನಾಗದೇನಹಳ್ಳಿ ಚಂದ್ರಶೇಖರ್ ಇದ್ದರು.

click me!