ಸಿದ್ದರಾಮಯ್ಯ ಏನು ಮೇಲಿಂದ ಇಳಿದು ಬಂದಿಲ್ಲ: ಸಂಸದ ಮುನಿಸ್ವಾಮಿ

By Govindaraj S  |  First Published Aug 23, 2022, 12:59 AM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಾಹಾರ ಊಟ ಮಾಡಿ ದೇವಸ್ಥಾನಕ್ಕೆ ಹೋಗಬಾರದ ಎಂಬ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಪಕ್ಷದವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಂಸದರಾದ ಎಸ್.ಮುನಿಸ್ವಾಮಿ ಕೂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಕೋಲಾರ (ಆ.23): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಾಹಾರ ಊಟ ಮಾಡಿ ದೇವಸ್ಥಾನಕ್ಕೆ ಹೋಗಬಾರದ ಎಂಬ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಪಕ್ಷದವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಂಸದರಾದ ಎಸ್.ಮುನಿಸ್ವಾಮಿ ಕೂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಈ ಹಿಂದೆ ಧರ್ಮಸ್ಥಳಕ್ಕೆ ಮಾಂಸಾಹಾರ ತಿಂದು ಹೋದಾಗ ಅದಕ್ಕೆ ದೇವರಿಂದ ಶಿಕ್ಷೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯನವರು ದೇಶ ಹಾಗೂ ಧರ್ಮದ ವಿಚಾರ ಮಾತನಾಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ದೇವಸ್ಥಾನ, ಮಸೀದಿ ಹಾಗೂ ಚರ್ಚ್​ಗೆ ಹೋಗಬೇಕು ಎಂದರೆ ಅದರದೇ ಆಗಿರುವ ನಿಯಮ ಇರುತ್ತದೆ. ಅದನ್ನು ಸಿದ್ದರಾಮಯ್ಯ ಒಬ್ಬರು ಬಿಟ್ಟು ಇನ್ನುಳಿದ ಎಲ್ಲಾ ಭಾರತೀಯರು ಪಾಲಿಸುತ್ತಿದ್ದಾರೆ. ಖುದ್ದು ಸಿದ್ದರಾಮಯ್ಯನವರ ಸಹೋದರರು ಸಹ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ. ಈಗಾಗಿ ಸಿದ್ದರಾಮಯ್ಯ ಏನೂ ಮೇಲಿನಿಂದ ಇಳಿದು ಬಂದಿಲ್ಲ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಿದೆ. ಆಗ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಬೇಕಿತ್ತು ಎಂದು ಸಂಸದ ಮುನಿಸ್ವಾಮಿ ಕಿಡಿಕಾರಿದರು.

Tap to resize

Latest Videos

Kolar: ಕುಚಿಕು ಫ್ರೆಂಡ್ಸ್‌ಗಳಾದ ಕೋತಿ, ನಾಯಿ ಹಾಗೂ ಬೆಕ್ಕು!

ಸಿದ್ದು ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ: ಸಿದ್ದರಾಮಯ್ಯನವರು ತಮ್ಮ ಇಮೇಜ್‌ ಬೆಳೆಸಿಕೊಳ್ಳಲು ದೇಶ ಮತ್ತು ಧರ್ಮದ ವಿರುದ್ಧ ಮಾತನಾಡುವುದು ಹಾಗು ಮೊಟ್ಟೆಎಸೆದಿರುವ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೆ ಮುಖ್ಯ ಮಂತ್ರಿಯಾಗಲು ಹಗಲು ಕನಸು ಕಾಣುತ್ತಿದ್ದಾರೆ. ಇದು ಸಾಧ್ಯವಿಲ್ಲ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು. ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರ ದುರಹಂಕಾರದ ಪರಮಾವಧಿ ಸಮೀಪಿಸಿದೆ, ಅವರ ಕಾರಿನ ಮೇಲೆ ಮೊಟ್ಟೆಎಸೆದಿರುವುದು ಅವರ ಪಕ್ಷದವರೇ ಆಗಿದ್ದಾರೆ. ಇಲ್ಲ ಡಿ.ಕೆ ಶಿವಕುಮಾರ್‌ರವರ ಬೆಂಬಲಿಗರೇ ಆಗಿರಬಹುದು ಎಂಬ ಅನುಮಾನವಿದೆ. ಎಂದರು.

ಧಾರ್ಮಿಕ ಸಂಪ್ರದಾಯ ಪಾಲಿಸಬೇಕು: ಸಿದ್ದರಾಮಯ್ಯನವರು ಈ ದೇಶದಲ್ಲಿ ಹುಟ್ಟಿರುವವರು. ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ದೇಶದಲ್ಲಿ ಆಯಾ ಧರ್ಮಕ್ಕೆ ಸಂಬಂಧಿಸಿದಂತೆ ದೇವಸ್ಥಾನಗಳಿವೆ, ಅಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ನಡೆದುಕೊಂಡು ಪಾಲನೆ ಮಾಡಬೇಕು. ಅವರ ಕುಟುಂಬದವರು ಅದನ್ನು ಪಾಲನೆ ಮಾಡುತ್ತಿದ್ದಾರೆ.,ಸಿದ್ದರಾಮಯ್ಯ ಮಾಡುತ್ತಿಲ್ಲ. ಮೊಟ್ಟೆವಿಷಯವನ್ನು ಮುಂದಿಟ್ಟುಕೊಂಡು ನಾನು ಮಡಿಕೇರಿಗೆ ಹೋಗುತ್ತೇನೆ ಎಂದು ಬೊಬ್ಬೆ ಹೊಡೆಯುತ್ತಿದ್ದೀರಿ ದಲಿತರಿಂದ ಹಿಡಿದು ಎಲ್ಲಾ ಹಿಂದುಳಿದ ವರ್ಗಗಳ ಸಮಾಜದವರು ನಿಮ್ಮನ್ನು ಬೆಂಬಲಿಸಿದ್ದಕ್ಕೆ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ ಎಂದರು.

ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಬಂದ ನಂತರ ನೀವು ಮೊದಲು ಮಾಡಿದ್ದು ಪರಮೇಶ್ವರ್‌ ರನ್ನು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದು. ಪರಮೇಶ್ವರ್‌ ರವರನ್ನು ಸೋಲಿಸಬೇಕಾದರೆ ಕೆ.ಹೆಚ್‌ ಮುನಿಯಪ್ಪನವರನ್ನು ಹೇಗೆ ಬಳಸಿಕೊಂರು, ಎಚ್‌ ಆಂಜನೇಯ, ಇಬ್ರಾಹಿಂ ಮತ್ತು ಮುಕಡಪ್ಪನವರನ್ನು ಯಾವ ರೀತಿ ಬಳಸಿಕೊಂಡಿರಿ ಎಂಬುದೆಲ್ಲಾ ಗೊತ್ತಿರುವ ವಿಷಯವೇ. ಈ ರಾಜ್ಯದಲ್ಲಿ ದಲಿತ ಸಿ.ಎಂ ಆಗಬೇಕಾದರೆ ಅಡ್ಡಗಾಲು ಹಾಕಿರುವುದು ನೀವೇ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.

ಮೋದಿ ಹಾದಿಯಲ್ಲಿ ಸಾಗಬೇಕು: ಭಾರತೀಯ ಜನತಾ ಪಕ್ಷದಲ್ಲಿ ಅಜೆಂಡಾ ಶಿಷ್ಟಾಚಾರ, ಈ ದೇಶದ ಹಿಂದುತ್ವ ಹಾಗು ಯಾವುದೇ ಸಮುದಾಯಕ್ಕೆ ಭಂಗ ತರುವಂತಹ ರೀತಿಯಲ್ಲಿ ಬಿಜೆಪಿಯವರು ಮಾತನಾಡುತ್ತಿಲ್ಲ. ನರೇಂದ್ರ ಮೋದಿಯವರ ಹಾದಿಯಲ್ಲಿ ನೀವು ಹೋದರೆ ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ. ಇಲ್ಲದೇ ಹೋದರೆ ಇದೇ ರೀತಿ ಹೋದರೆ ಅಹಿಂದ ಸಮುದಾಯವೇ ನಿಮಗೆ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

Kolar: ಸಚಿವ ಮುನಿರತ್ನ ಕರೆದಿದ್ದ ಕೆಡಿಪಿ ಸಭೆಗೆ ಗೈರು ಹಾಜರಾದ ಶಾಸಕರು

ಸಿದ್ದರಾಮಯ್ಯನವರ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ಇತ್ತೀಚೆಗೆ ಕೊಡುತ್ತಿರುವ ಹೇಳಿಕೆಗಳು ನೋಡಿದರೆ ಈ ಹಿಂದೆ ಭಾರತ-ಪಾಕಿಸ್ತಾನ ವಿಭಾಗವಾದಾಗ ಇವರು ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು ಅನಿಸುತ್ತದೆ. ಈ ದೇಸದಲ್ಲಿರುವ ಹಿಂದೂ, ಮುಸ್ಲಿಂ, ಕ್ರೈಸ್ತರು ಆಯಾ ಸಮುದಾಯಗಳಿಗೆ ತಕ್ಕಂತೆ ಇರುವ ದೇವಸ್ಥಾನಗಳಿಗೆ ಹೋಗಬೇಕಾದರೆ ಒಂದೊಂದು ನಿಯಮಗಳು ಇರುತ್ತವೆ. ಮಸೀದಿ ಮತ್ತು ಚರ್ಚ್‌ಗೆ ಹೋಗಬೇಕಾದರೆ ಸ್ನಾನ ಮಾಡಿಕೊಂಡು ಹೋಗುತ್ತಾರೆ ಹಿಂದೂ ದೇವಾಲಯಗಳಿಗೆ ಹೋಗಬೇಕಾದರೆ ಮಾಂಸ ತಿಂದು ಹೋಗುವ ದೇವಸ್ಥಾನಗಳು ಇವೆ. ತಿನ್ನದೇ ಹೋಗುವ ದೇವಸ್ಥಾನಗಳಿವೆ ಎಂದರು.

click me!